ಈ ತಪ್ಪುಗಳನ್ನು ಮಾಡಲೇಬೇಡಿ, ನೀರು ಕುಡಿಯುವ ಸರಿಯಾದ ವಿಧಾನ ಇದು ಹೇಗೆ ..? - Karnataka's Best News Portal

ನಮ್ಮ ದೇಹಕ್ಕೆ ನೀರಿನ ಅಗತ್ಯ ಬಹಳ ಮುಖ್ಯ ನಮ್ಮ ದೇಹದ ಮುಕ್ಕಾಲು ಭಾಗ ನೀರಿನಿಂದ ಕೂಡಿದೆ ವೈದ್ಯರು ಕೂಡ ನಮಗೆ ಆಗಾಗ ಹೆಚ್ಚು ನೀರು ಕುಡಿಯುವುದು ಸಲಹೆ ನೀಡುತ್ತಾರೆ ನಮ್ಮ ದೇಹದಲ್ಲಿ ನೀರಿನಂಶ ಹೆಚ್ಚಾಗಿದ್ದಷ್ಟು ಆಂತರಿಕವಾಗಿ ಎಲ್ಲ ಅಂಗಾಂಗಗಳು ಸರಿಯಾಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ. ಜೊತೆಗೆ ದೇಹದಿಂದ ವಿಷಕಾರಿ ಅಂಶಗಳನ್ನು ಸಹ ಹೊರ ಬಂದು ನಮ್ಮನ್ನು ರೋಗ ಮುಕ್ತವಾಗಿ ಮಾಡುತ್ತದೆ. ಆದರೆ ಇಂದಿಗೂ ಕೂಡ ನಾವು ಸರಿಯಾಗಿ ನೀರು ಕುಡಿಯುವುದನ್ನು ಕಲಿತಿಲ್ಲ, ಕೇಳಿದರೆ ಆಶ್ಚರ್ಯವೆನಿಸುತ್ತದೆ ನಾವು ನೀರು ಕುಡಿಯುವಾಗ ಮಾಡುವ ಕೆಲವು ತಪ್ಪುಗಳಿಂದ ನಮಗೆ ತೊಂದರೆ ತಪ್ಪಿದ್ದಲ್ಲ ಇದರಿಂದ ಯಾವುದೇ ಲಾಭ ಆರೋಗ್ಯಕ್ಕೆ ದೊರೆಯುವುದಿಲ್ಲ. ನಮ್ಮ ದೇಹವು ರೋಗ ಮುಕ್ತವಾಗುವುದಿಲ್ಲ, ನಿಂತುಕೊಂಡು ನೀರು ಕುಡಿಯಬಾರದು.

ನಮ್ಮ ಮನೆಗಳಲ್ಲಿ ತಿಂಡಿಗಳನ್ನು ತಿನ್ನುವಾಗ ಓಡಾಡಿಕೊಂಡು ಆಹಾರ ಸೇವನೆ ಮಾಡುತ್ತಿದ್ದರೆ ದೊಡ್ಡವರು ಕೆಳಗೆ ಕೂತು ಸೇವಿಸುವುದಾಗಿ ಹೇಳುತ್ತಾರೆ ಇದು ನೀರಿಗೂ ಸಹ ಅನ್ವಯವಾಗುತ್ತದೆ. ನಾವು ನಿಂತುಕೊಂಡು ನೀರು ಕುಡಿಯುವುದರಿಂದ ನೀರಿನಲ್ಲಿರುವ ಅನೇಕ ಪೌಷ್ಟಿಕಾಂಶಗಳು ನೀರಿನ ಸಮೇತ ನೇರವಾಗಿ ನಮ್ಮ ಕೆಳಗಿನ ಹೊಟ್ಟೆಗೆ ತಲುಪುತ್ತದೆ ಆದ್ದರಿಂದ ನಿಂತುಕೊಂಡು ನೀರು ಕುಡಿಯುವುದು ಬಹಳಷ್ಟು ತೊಂದರೆ ಉಂಟು ಮಾಡುತ್ತದೆ. ಹೆಚ್ಚು ನೀರು ಬಾಯಿಗೆ ತುಂಬಿಕೊಂಡು ಬೇಗ ನೀರು ಕುಡಿಯಬಾರದು ಇದರಿಂದ ನೀರಿನಲ್ಲಿರುವ ಕಲ್ಮಶಗಳು ನೇರವಾಗಿ ನಮ್ಮ ಮೂತ್ರಪಿಂಡ ಹಾಗೂ ಮೂತ್ರನಾಳಗಳಲ್ಲಿ ಶೇಖರಣೆಯಾಗುತ್ತದೆ, ನೀರು ನಿಧಾನವಾಗಿ ಕುಳಿತುಕೊಂಡು ಕುಡಿಯಬೇಕು ಊಟಕ್ಕೆ ಮುಂಚೆ, ಊಟದ ಮಧ್ಯದಲ್ಲಿ, ಊಟದ ತಕ್ಷಣ ನೀರನ್ನು ಕುಡಿಯಬಾರದು ಹೀಗೆ ಮಾಡುವುದರಿಂದ ದೇಹದ ಮೇಲೆ ಅನೇಕ ರೀತಿಯ ಪರಿಣಾಮಗಳು ಬೀರುತ್ತವೆ.

By admin

Leave a Reply

Your email address will not be published. Required fields are marked *