ನಿರ್ಲಕ್ಷೆ ಮಾಡದೇ ಸ್ವಲ್ಪ ತಿಳಿಯಲೇಬೇಕಾದ ವಿಷಯ ಇದು ಗಮನವಿಟ್ಟು ನೋಡಿ ... - Karnataka's Best News Portal

ಅವಲಕ್ಕಿ ಬಗ್ಗೆ ಯಾರಿಗೆ ತಿಳಿದಿಲ್ಲ ಹೇಳಿ, ದಿಢೀರ್ ತಿಂಡಿ ಮಾಡಬೇಕೆಂದರೆ ತಕ್ಷಣ ನೆನಪಾಗುವುದು ಅವಲಕ್ಕಿ. ಅವಲಕ್ಕಿ ರುಚಿಯನ್ನು ಹೆಚ್ಚಿಸುವುದಷ್ಟೇ ಅಲ್ಲ ಆರೋಗ್ಯಕ್ಕೆ ಹೆಚ್ಚು ಪ್ರಯೋಜನ ನೀಡುತ್ತದೆ ಇದರಲ್ಲಿ ಕಾರ್ಬೋಹೈಡ್ರೇಟ್ ಹಾಗೂ ಜೀವಸತ್ವಗಳು ಸಾಕಷ್ಟು ಪ್ರಮಾಣದಲ್ಲಿ ಕಂಡುಬರುತ್ತದೆ ಇದು ದೇಹವನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ. ಇನ್ನು ಅಕ್ಕಿ ಇಂದಲೇ ಅವಲಕ್ಕಿಯನ್ನು ತಯಾರಿಸಲಾಗಿದ್ದು ಅಕ್ಕಿಗಿಂತ ಹೆಚ್ಚು ಲಾಭವನ್ನು ಹೊಂದಿದೆ ಇದರಲ್ಲಿ ಮೂರು ವಿಧಗಳಿವೆ ಪೇಪರ್ ಅವಲಕ್ಕಿ, ಮೀಡಿಯಂ ಅವಲಕ್ಕಿ, ದಪ್ಪ ಅವಲಕ್ಕಿ. ಅವಲಕ್ಕಿಯನ್ನು ಭಾರತದಲ್ಲಿ ಹೆಚ್ಚಿನ ಪ್ರಾಂತ್ಯಗಳಲ್ಲಿ ಬಳಸಲಾಗುತ್ತದೆ ಹಾಗಿದ್ದರೆ ಇಂತಹ ಅವಲಕ್ಕಿಯನ್ನು ಸೇವಿಸುವುದರಿಂದ ದೇಹಕ್ಕೆ ಆಗುವ ಆರೋಗ್ಯಕ್ಕೆ ಆಗುವ ಲಾಭಗಳ ಬಗ್ಗೆ ತಿಳಿಸುತ್ತೇವೆ ಇದು ಕಬ್ಬಿಣದ ಕೊರತೆಯನ್ನು ನಿವಾರಣೆ ಮಾಡುತ್ತದೆ ದೇಹಕ್ಕೆ ಕಬ್ಬಿಣದ ಅಗತ್ಯ ಹೆಚ್ಚಾಗಿರುತ್ತದೆ ಆದ್ದರಿಂದ ವಿವಿಧ ತರಕಾರಿಗಳೊಂದಿಗೆ ಅವಲಕ್ಕಿಯನ್ನು ಸೇವಿಸಬಹುದು.

ಇದು ದೇಹಕ್ಕೆ ಕಬ್ಬಿಣ ಪೂರೈಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ರಕ್ತಹೀನತೆಯ ಕೊರತೆ ನಿವಾರಿಸುತ್ತದೆ ದೇಹವನ್ನು ಹಿಮೋಗ್ಲೋಬಿನ್ ಮತ್ತು ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ ಸಾಕಷ್ಟು ಶಕ್ತಿಯನ್ನು ಒದಗಿಸುತ್ತದೆ. ಬೆಳಗಿನ ಉಪಹಾರದಲ್ಲಿ ಸೇವಿಸಿದ ಆಹಾರ ಮಧ್ಯಾಹ್ನದ ಸಮಯದವರೆಗೂ ಅಗತ್ಯ ಚಟುವಟಿಕೆಗಳಿಗೆ ಬೇಕಾದ ಇಂಧನವನ್ನು ಪೂರೈಸುವಂತಿರಬೇಕು. ಈ ಅಗತ್ಯತೆಗೆ ಅವಲಕ್ಕಿ ಸೂಕ್ತವಾದುದು ಮಧ್ಯಾಹ್ನದವರೆಗೂ ಶಕ್ತಿಯ ಕೊರತೆ ಉಂಟಾಗದಂತೆ ನೋಡಿಕೊಳ್ಳುತ್ತದೆ‌. ಮಧುಮೇಹಿಗಳಿಗೆ ಉತ್ತಮ, ಅವಲಕ್ಕಿಯಲ್ಲಿ ಸಕ್ಕರೆ ಅಂಶ ತೀರಾ ಕಡಿಮೆ ಇರುವ ಕಾರಣ ಮಧುಮೇಹಿಗಳು ಯಾವುದೇ ಅಳುಕಿಲ್ಲದೆ ಸೇವಿಸಬಹುದು ಅಷ್ಟೇ ಅಲ್ಲದೆ ಅವಲಕ್ಕಿಯಲ್ಲಿ ವಿಟಮಿನ್ ಬಿ1 ಹೆಚ್ಚಾಗಿ ಇದ್ದು ಮಧುಮೇಹಿಗಳಿಗೆ ಉತ್ತಮ ಆಹಾರ, ವಿಟಮಿನ್ ಬಿ1 ರಕ್ತದಲ್ಲಿನ ಸಕ್ಕರೆ ಅಂಶವನ್ನು ನಿಯಂತ್ರಿಸುತ್ತದೆ.

By admin

Leave a Reply

Your email address will not be published. Required fields are marked *