ಮನೆಯಲ್ಲಿ ಅಜ್ಜ-ಅಜ್ಜಿ ಇದ್ದರೆ ಗುಡ್ ನ್ಯೂಸ್ ಇಂಟರೆಸ್ಟಿಂಗ್ ವಿಚಾರ ಮಿಸ್ ಮಾಡ್ಬೇಡಿ ... - Karnataka's Best News Portal

ರಾಜ್ಯದಲ್ಲಿ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಪ್ರತೀ ತಿಂಗಳು ಹಣ ಸಿಗುತ್ತಿಲ್ಲ ಮತ್ತು ಬಹಳಷ್ಟು ಜನ ಮೇಲಿಂದ ಮೇಲೆ ಅರ್ಜಿ ಸಲ್ಲಿಸಿದರು ಕೂಡ ಪಿಂಚಣಿ ಹಣ ಸಿಗುತ್ತಿಲ್ಲ ಮತ್ತು ವಯಸ್ಸಾದ ಹಿರಿಯ ನಾಗರಿಕರಿಗೆ ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು ಹೇಗೆ ಪಡೆಯಬೇಕು ಎನ್ನುವ ಕುರಿತು ಸ್ಪಷ್ಟವಾದ ಮಾಹಿತಿ ದೊರೆಯದೆ ವೃದ್ಧಾಪ್ಯ ವೇತನದಿಂದ ವಂಚಿತರಾಗಿದ್ದಾರೆ ಈ ರೀತಿಯ ಎಲ್ಲಾ ಸಮಸ್ಯೆಗಳನ್ನು ಗಮನಿಸಿದ ಕಂದಾಯ ಸಚಿವರಾದ ಆರ್ ಅಶೋಕ್ ಅವರು ಸಿಹಿಸುದ್ದಿಯನ್ನು ನೀಡಿದ್ದು ಇನ್ನು ಮುಂದೆ 60 ವರ್ಷ ತುಂಬಿದ ಹಿರಿಯ ನಾಗರಿಕರು ಸರ್ಕಾರಿ ಕಛೇರಿಗಳಿಗೆ ಅಲೆದಾಟ ನಡೆಸಿ ಅರ್ಜಿ ಸಲ್ಲಿಸುವ ಅಗತ್ಯಇಲ್ಲ ಎಂದು ಹೇಳಿದ್ದಾರೆ. ವೃದ್ಧಾಪ್ಯ ವೇತನದ ಪಿಂಚಣಿ ಹಣ ಪಡೆಯಲು ಹಿರಿಯ ನಾಗರಿಕರಿಗಾಗಿ ಹೊಸ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ ಎಂದು ಕಂದಾಯ ಸಚಿವ ಆರ್ ಅಶೋಕ್ ತಿಳಿಸಿದ್ದಾರೆ.

ಇನ್ನು ಮುಂದೆ ಆಯಾ ಜಿಲ್ಲಾಡಳಿತದಲ್ಲಿ ಎಲ್ಲರ ಆಧಾರ್ ಕಾರ್ಡ್ ವಿವರವಿದ್ದು 60 ವರ್ಷ ತುಂಬಿದ ಬಳಿಕ ಅಧಿಕಾರಿಗಳು ನಿಮ್ಮ ಮನೆಗೆ ಪತ್ರವನ್ನು ಕಳಿಸಲಿದ್ದಾರೆ. ಯಾವ ಗ್ರಾಮದಲ್ಲಿ 60 ವರ್ಷ ತುಂಬಿದವರು ಇದ್ದಾರೆ ಅವರ ಆರ್ಥಿಕ ಪರಿಸ್ಥಿತಿಯನ್ನು ಅವಲೋಕಿಸಿ ಬಡವರಾಗಿದ್ದರೆ ಅವರ ಬಳಿ ಬಿಪಿಎಲ್ ಕಾರ್ಡ್ ಅಥವಾ ಅಂತ್ಯೋದಯ ರೇಷನ್ ಕಾರ್ಡ್ ಇದ್ದರೆ ಅರ್ಜಿ ಸಲ್ಲಿಸದೆ ಇದ್ದರೂ ಕೂಡ ಅಧಿಕಾರಿಗಳು ಕಳುಹಿಸಿದ ಪತ್ರದಲ್ಲಿ 60 ವರ್ಷ ಮೇಲ್ಪಟ್ಟವರು ತಮ್ಮ ಬ್ಯಾಂಕ್ ವಿವರ ಹಾಗೂ ಬ್ಯಾಂಕ್ ಪಾಸ್ ಬುಕ್ ಜೆರಾಕ್ಸ್ ಮಾಡಿಸಿ ಲಗತ್ತಿಸಿದರೆ ಪ್ರತಿತಿಂಗಳು ಖಾತೆಗೆ ಹಣ ಜಮಾವಣೆ ಆಗಲಿದೆ. ಇಲ್ಲಿಯವರೆಗು ಹಣ ಬಂದು ಈಗ ಬರೆದಿದ್ದರೆ ನಿಮ್ಮ ನಾಡಕಚೇರಿ ಅಥವಾ ನೆಮ್ಮದಿ ಕೇಂದ್ರಗಳಲ್ಲಿ ದೊರೆಯುವ ಜೀವನ್ ಪ್ರಮಾಣ ಪತ್ರ ಸಲ್ಲಿಸುವುದು ಖಡ್ಡಾಯ.

By admin

Leave a Reply

Your email address will not be published. Required fields are marked *