ನಿರುದ್ಯೋಗಿ ಯುವಕರಿಗಾಗಿ ರಾಜ್ಯ ಸರ್ಕಾರ ಬಂಪರ್ ಕೊಡುಗೆಯನ್ನು ನೀಡಿದೆ ಕಾರು, ಟ್ಯಾಕ್ಸಿಯನ್ನು ಕೊಳ್ಳಲು 2 ಲಕ್ಷಗಳವರೆಗೆ ಉಚಿತ ಸಹಾಯಧನವನ್ನು ನೀಡಲಾಗುತ್ತಿದೆ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಇಲಾಖೆಯು ನಿರುದ್ಯೋಗಿ ಯುವಕರು ಸ್ವಯಂ ಉದ್ಯೋಗವನ್ನು ಆರಂಭಿಸಿ ಕೊಳ್ಳಲು ಹೊಸ ಕಾರು, ಟ್ಯಾಕ್ಸಿಯನ್ನು ವಿತರಣೆ ಮಾಡಲಾಗುತ್ತಿದೆ SSLC ವರೆಗೆ ಅಧ್ಯಯನ ಮಾಡಿರುವ ನಿರುದ್ಯೋಗಿ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಿ ಉಚಿತ ಕಾರನ್ನು ಪಡೆಯಬಹುದಾಗಿದೆ. ಪ್ರವಾಸೋದ್ಯಮ ಇಲಾಖೆಯಿಂದ 2 ಲಕ್ಷಗಳವರೆಗೆ ಉಚಿತವಾಗಿ ನೀಡಲಾಗುತ್ತಿದ್ದು ನೀವು ಆಯ್ಕೆ ಮಾಡಿಕೊಳ್ಳುವ ಕಾರಿನ ಉಳಿದ ಹಣವನ್ನು ಬ್ಯಾಂಕ್ ನಿಂದ ಸಾಲ ರೂಪದಲ್ಲಿ ಕೊಡಲಾಗುತ್ತದೆ ಪ್ರತಿತಿಂಗಳು EMI ಮೂಲಕ ಪಾವತಿಸಲು ಅವಕಾಶ ಕಲ್ಪಿಸಲಾಗುತ್ತದೆ. ಕರ್ನಾಟಕ ಸರ್ಕಾರ ಪ್ರವಾಸೋದ್ಯಮ ಇಲಾಖೆಯಿಂದ 2014-15 ನೇ ಸಾಲಿನಿಂದ ಹಿಡಿದು 2016-17 ನೇ ಸಾಲಿನ ವರೆಗೂ ಬಾಕಿ ಉಳಿದಿರುವ ಕಾರುಗಳನ್ನು ನೀಡಲಾಗುತ್ತದೆ.
2020ರ ನವೆಂಬರ್ನಲ್ಲಿ ಅಂದರೆ ಈಗ ಅರ್ಜಿಯನ್ನು ಕರೆಯಲಾಗಿದ್ದು ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ತಲೆ ಎರಡು ಲಕ್ಷಗಳನ್ನು ಸಹಾಯಧನವಾಗಿ ನೀಡಲಾಗುತ್ತಿದೆ. ಕಡ್ಡಾಯವಾಗಿ DL ಇರಬೇಕು, SSLC ಪಾಸ್ ಆಗಿರಬೇಕು. ನವೆಂಬರ್ 25ರಿಂದ ಅರ್ಜಿಗಳನ್ನು ಉಚಿತವಾಗಿ ಪ್ರವಾಸೋದ್ಯಮ ಇಲಾಖೆಯಲ್ಲಿ ನೀಡಲಾಗುತ್ತಿದ್ದು ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ 2020 ಡಿಸೆಂಬರ್ 19 ರವರೆಗೆ ಕೊನೆಯ ದಿನಾಂಕವನ್ನು ನೀಡಲಾಗಿದೆ. ಅರ್ಜಿ ಸಲ್ಲಿಸುವುದು ಬಯಸುವವರು SSLC ಮಾರ್ಕ್ಸ್ ಕಾರ್ಡ್, DL, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್, ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳೊಂದಿಗೆ ಅರ್ಜಿಯನ್ನು ಭರ್ತಿ ಮಾಡಿ ಪ್ರವಾಸೋದ್ಯಮ ಇಲಾಖೆಗೆ ಸಲ್ಲಿಸಬೇಕು. ಯೋಜನೆಯ ಲಾಭ ಪಡೆಯಲು ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಮಾತ್ರ ಅವಕಾಶ ನೀಡಲಾಗಿದೆ.
ಯುವಕರಿಗೆ ಸುವರ್ಣಾವಕಾಶ ಉಚಿತ ಕಾರು, ಟ್ಯಾಕ್ಸಿ ಅರ್ಜಿಸಲ್ಲಿಸಿ ಪಡೆದುಕೊಳ್ಳುವ ಸಂಪೂರ್ಣ ಮಾಹಿತಿ ಹಾಗೂ ಪ್ರವಾಸೋದ್ಯಮ ಇಲಾಖೆ…
