ಐರಾ ಯಶ್ ಹುಟ್ಟು ಹಬ್ಬದ ಸಂಭ್ರಮ ಹೇಗಿತ್ತು ನೋಡಿ Ayra Yash Birthday Celebration 'Video' - Karnataka's Best News Portal

ಐರಾಯಶ್ ಹುಟ್ಟುಹಬ್ಬದ ಸಕ್ಕತ್ ಸೆಲೆಬ್ರೇಶನ್….

ರಾಧಿಕಾ ಪಂಡಿತ್ ಹಾಗೂ ಯಶ್ ಅವರ ಮೊದಲ ಮಗಳು ಐರಾಳಿಗೆ ಎರಡನೇ ವರ್ಷದ ಹುಟ್ಟು ಹಬ್ಬದ ಸಂಭ್ರಮ ಮುದ್ದಿನ ಮಗಳ ಎರಡನೇ ವರ್ಷದ ಹುಟ್ಟು ಹಬ್ಬದ ಸಂಭ್ರಮದಲ್ಲಿ ಹಾಗೂ ರಾಧಿಕಾ ಪಂಡಿತ್ ಇದ್ದಾರೆ. ಹೌದು ಮುದ್ದಿನ ಮಗಳ ಎರಡನೇ ವರ್ಷದ ಹುಟ್ಟುಹಬ್ಬಕ್ಕೆ ರಾಧಿಕಾ ಪಂಡಿತ್ ತುಂಬ ಪ್ರೀತಿಯಿಂದ ಶುಭಕೋರಿದ್ದಾರೆ ಜೊತೆಗೆ ಮಗಳಿಗಾಗಿ ಒಂದು ಮುದ್ದಾದ ಸಂದೇಶವನ್ನು ಕೊಟ್ಟಿದ್ದಾರೆ. ಇದರ ಜೊತೆ ಮಗಳ 12 ಫೋಟೋಗಳನ್ನು ಕೊಲೇಜ್ ಮಾಡಿ ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ ಈ ಫೋಟೋಗಳನ್ನು ನೋಡಿದ ಅಭಿಮಾನಿಗಳು ಸಿಕ್ಕಾಪಟ್ಟೆ ಸಂಭ್ರಮ ಪಟ್ಟಿದ್ದು ಶುಭಾಶಯಗಳನ್ನು ತಿಳಿಸಿದ್ದಾರೆ. ಅಷ್ಟೇ ಅಲ್ಲದೆ ಸಾಕಷ್ಟು ಜನ ಅಭಿಮಾನಿಗಳು ಹುಟ್ಟುಹಬ್ಬದ ವಿಶೇಷವಾಗಿ ಹೊಸ ಹೊಸ ಫೋಟೋಗಳನ್ನು ಎಡಿಟ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ಈಗಾಗಲೇ ಯಶ್ ಮಗಳು ಐರಾಳ ಹೆಸರಿನಲ್ಲಿ ಕೂಡ ಸಾಕಷ್ಟು ಪ್ಯಾನ್ ಪೇಜ್ ಗಳು ಹುಟ್ಟಿಕೊಂಡಿದ್ದು, ಸಾವಿರಾರು ಅಭಿಮಾನಿಗಳು ಆ ಪ್ಯಾನ್ ಪೇಜ್ ಗಳನ್ನು ಫಾಲೋ ಮಾಡ್ತಾ ಇದ್ದಾರೆ. ಆ ಪೇಜ್ ಗಹ ಮುಖಾಂತರ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ. ಐರಾಳ ಹುಟ್ಟುಹಬ್ಬವು ಬಹಳ ಅದ್ದೂರಿಯಾಗಿ ನಡೆದಿದ್ದು ಹಲವಾರು ಸಿನಿ ತಾರೆಯರು ಸಹ ಹುಟ್ಟುಹಬ್ಬಕ್ಕೆ ಶುಭಕೋರಿದ್ದು ಹಾಗೆ ಉಡುಗೊರೆಯನ್ನು ಕೂಡ ನೀಡಿದ್ದಾರೆ. ನಿನ್ನಿಂದ ತುಂಬಾ ಖುಷಿ ಸಿಕ್ಕಿದೆ ನೀನು ಇಷ್ಟು ಬೇಗ ದೊಡ್ಡವಳಾಗ ಬೇಡ ಮಗಳೇ ಎಂದು ರಾಧಿಕಾ ಪಂಡಿತ್ ಅವರು ಮಗಳ ಫೋಟೋ ದೊಂದಿಗೆ ಈ ಸಂದೇಶವನ್ನು ತಮ್ಮ ಇನ್ಸ್ಟಾಗ್ರಾಂ ನಲ್ಲಿ ಹಂಚಿಕೊಂಡಿದ್ದಾರೆ. ಇದೀಗ ಯಶ್ ಮತ್ತು ರಾಧಿಕಾ ಪಂಡಿತ್ ಅವರು ತಮ್ಮ ಮಕ್ಕಳೊಂದಿಗೆ ತುಂಬಾ ಸಂತೋಷವಾದ ಸಮಯವನ್ನು ಕಳೆಯುತ್ತಿದ್ದಾರೆ.

By admin

Leave a Reply

Your email address will not be published. Required fields are marked *