ಬೆಳಿಗ್ಗೆ ಎದ್ದಾಗ ಖಾಲಿ ಹೊಟ್ಟೆಯಲ್ಲಿ ಬಿಸಿ ನೀರು ಕುಡಿದರೆ ಏನಾಗುತ್ತದೆ.... - Karnataka's Best News Portal

ಸಾಧಾರಣವಾಗಿ ಬೆಳಿಗ್ಗೆ ಎದ್ದ ಕೂಡಲೇ ಕಾಫಿ ಅಥವಾ ಟೀ ಕುಡಿಯೋ ಅಭ್ಯಾಸ ನಮ್ಮಲ್ಲಿ ತುಂಬಾ ಮಂದಿಗೆ ಇರುತ್ತದೆ ಆದರೆ ನೀವು ಬೆಳಗ್ಗೆ ಎದ್ದ ಕೂಡಲೇ ಬಿಸಿ ನೀರನ್ನು ಕುಡಿಯುವುದರಿಂದ ಆಗುವ ಪ್ರಯೋಜನ ಏನು ಎಂದು ಗೊತ್ತಾದರೆ ತಪ್ಪದೆ ನೀವು ನಾಳೆಯಿಂದ ಉಗುರು ಬೆಚ್ಚಗಿನ ನೀರು ಕುಡಿಯಲು ಅಭ್ಯಾಸ ಮಾಡಿಕೊಳ್ಳುತ್ತೀರಿ. ಯಾಕೆಂದರೆ ಈ ಅಭ್ಯಾಸದಿಂದ ನಮ್ಮ ಆರೋಗ್ಯವನ್ನು ಚೆನ್ನಾಗಿ ಕಾಪಾಡಿಕೊಳ್ಳಬಹುದು ಬೆಳಿಗ್ಗೆ ಎದ್ದಾಗ ಬಿಸಿ ನೀರು ಕುಡಿಯುವುದರಿಂದ ಜೀರ್ಣಕ್ರಿಯೆ ಸಂಬಂಧಿಸಿದ ಸಮಸ್ಯೆಗಳು ಬರುವುದಿಲ್ಲ ಹಾಗೆ ಮಲಬದ್ಧತೆ ನಿವಾರಣೆಯಾಗುತ್ತದೆ. ಮುಖ್ಯವಾಗಿ ಶರೀರದಲ್ಲಿ ರಕ್ತ ಪರಿಚಲನೆ ತುಂಬಾ ಚೆನ್ನಾಗಿರುತ್ತದೆ ಯಾಕೆಂದರೆ ಶರೀರದಲ್ಲಿ ಶೇಖರಣೆಯಾದ ಕೊಬ್ಬು ಈ ನೀರು ಕುಡಿಯುವುದರಿಂದಕರಗಿ ಹೋಗಿ ತೂಕ ಕಡಿಮೆ ಮಾಡಿಕೊಳ್ಳಬಹುದು ಹಾಗೆಯೇ ಶರೀರದ ಉಷ್ಣತೆಯ ಮಟ್ಟವನ್ನು ನಿಯಂತ್ರಣದಲ್ಲಿಟ್ಟು ಜ್ವರ, ನೆಗಡಿ ಅಂತಹ ಅನಾರೋಗ್ಯ ಸಮಸ್ಯೆಗಳನ್ನು ಬರದೇ ಇರುವಂತೆ ಕಾಪಾಡುತ್ತದೆ.

ಹಾಗೆ ಶರೀರದಲ್ಲಿನ ಅಂಗಾಂಗಗಳನ್ನು ಕೂಡ ಆರೋಗ್ಯವಾಗಿಡುತ್ತದೆ ಮತ್ತು ಕೆಮ್ಮು, ನೆಗಡಿ, ಕತ್ತು ನೋವಿನಂತಹ ಶ್ವಾಸಕೋಶ ಸಂಬಂಧಿ ಸಮಸ್ಯೆಗಳಿಂದ ಅಂದರೆ ಅಸ್ತಮಾ ಕಾಯಿಲೆಯಿಂದ ನರಳುತ್ತಿರುವವರು ಕೂಡ ಈ ಉಗುರು ಬೆಚ್ಚಗಿನ ನೀರು ಕುಡಿಯುವುದರಿಂದ ಅದನ್ನು ನೀವು ತಡೆಗಟ್ಟಬಹುದು. ಹಾಗೆ ನಿಮ್ಮ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ ಮುಖ್ಯವಾಗಿ ಉಗುರು ಬೆಚ್ಚಗಿನ ನೀರು ಕುಡಿಯುವುದರಿಂದ ಕೇಂದ್ರ ನರಮಂಡಲ ಕಾರ್ಯನೀತಿ ವೃದ್ದಿ ಆಗುತ್ತದೆ ಇದರಿಂದ ಒತ್ತಡ ಕಡಿಮೆಯಾಗುತ್ತದೆ. ಮುಖ್ಯವಾಗಿ ಪ್ರತಿದಿನ ಅರ್ಧ ಗ್ಲಾಸ್ ನೀರಗೆ ಒಂದು ಟೇಬಲ್ ಸ್ಪೂನ್ ಜೇನುತುಪ್ಪ ಮತ್ತು ಅರ್ಧ ನಿಂಬೆಹಣ್ಣು ಸೇರಿಸಿ ಕುಡಿಯುವುದರಿಂದ ಮಲಬದ್ಧತೆ, ಹೈಪರ್ ಅಸಿಡಿಟಿ ಸಮಸ್ಯೆಗಳು ಬರುವುದಿಲ್ಲ.

By admin

Leave a Reply

Your email address will not be published. Required fields are marked *