ಮಹಾನಾಯಕ ಸೀರಿಯಲಲ್ಲಿ ರಾಮ್ಜಿ ಪಾತ್ರಕ್ಕೆ ಧ್ವನಿ ಕೊಟ್ಟವರು ಯಾರು ಗೊತ್ತಾ... - Karnataka's Best News Portal

ಮಹಾನಾಯಕ ಸೀರಿಯಲ್ ನಲ್ಲಿ ರಾಮ್ಜಿ ಪಾತ್ರಕ್ಕೆ ಧ್ವನಿ ಆಗಿರುವುದು ಇಂಡಸ್ಟ್ರಿಯ ಒಬ್ಬ ನಾಯಕ ನಟ ಹೌದು. ಮಹಾ ನಾಯಕ ಡಾಕ್ಟರ್ ಬಿಆರ್ ಅಂಬೇಡ್ಕರ್ ಅನ್ನೋ ನಿಜಾ ಭಾರತದ ಮಹಾ ನಾಯಕನ ಜೀವನ ಕಥೆ ಕನ್ನಡಿಗರ ಪ್ರಾಣವೇ ಆಗಿದೆ. ಒಂದೇ ಒಂದು ದಿನ ತಾಂತ್ರಿಕ ದೋಷದಿಂದಾಗಿ ಸೀರಿಯಲ್ ನಿಂತು ಹೋಗಿದ್ದಕ್ಕೆ ಇಡೀ ಕರ್ನಾಟಕಕ್ಕೆ ಕರ್ನಾಟಕವೇ ವಿಲವಿಲ ಅಂತ ಒದ್ದಾಡಿತು. ಮಹಾ ನಾಯಕ ಸೀರಿಯಲ್ ನಲ್ಲಿ ಪ್ರತಿಯೊಬ್ಬ ಪಾತ್ರಧಾರಿಯೂ ಕೂಡ ಅಚ್ಚುಮೆಚ್ಚು ಆಗುವುದಕ್ಕೆ ಕಾರಣ ಅವರ ಧ್ವನಿ. ಹೌದು ಮರಾಠಿ ಧಾರಾವಾಹಿಯನ್ನು ಕನ್ನಡಕ್ಕೆ ಅನುವಾದ ಮಾಡಿ ಜನರ ಮೆಚ್ಚುಗೆ ಪಡೆಯುತ್ತದ್ದಾರೆ. ಪಾರ್ಥಸಾರಥಿ ಎಂಬ ಒಂದು ಸಿನಿಮಾ ಕನ್ನಡದಲ್ಲಿ ಮೂಡಿ ಬಂದಿತ್ತು ಈ ಸಿನಿಮಾದ ಹೀರೋ ರೇಣುಕಾ ಕುಮಾರ್ ಜೀ ಕನ್ನಡ ವಾಹಿನಿಯ ಹಲವು ಸೀರಿಯಲ್ ನಲ್ಲಿ ಕೂಡ ನಟಿಸಿದ್ದಾರೆ.

ರೇಣುಕ್ ಕುಮಾರ್ ಈಗ ಮಹಾನಾಯಕ ಸೀರಿಯಲ್ ನಲ್ಲಿ ಬರುವ ಡಾಕ್ಟರ್ ಬಿಆರ್ ಅಂಬೇಡ್ಕರ್ ಅವರ ತಂದೆ ರಾಮ್ ಜೀ ಪಾತ್ರಕ್ಕೆ ಧ್ವನಿ ನೀಡುತ್ತಿದ್ದಾರೆ. ಇದರ ಬಗ್ಗೆ ಖುದ್ದು ಜಗನ್ನಾಥ್ ರವರೆ ತಮ್ಮ ಫೇಸ್ಬುಕ್ ಖಾತೆಯ ಕಾಮೆಂಟ್ ಒಂದಕ್ಕೆ ಉತ್ತರಿಸುತ್ತ ಈ ಸಂಗತಿಯನ್ನು ಬಾಯಿ ಬಿಟ್ಟಿದ್ದಾರೆ. ರೇಣುಕ್ ಕುಮಾರ್ ಬಾಲಿವುಡ್ ನಲ್ಲಿಯೂ ಕೂಡ ನಟಿಸಿದ್ದಾರೆ ಆರ್ಯ ಅವರೊಂದಿಗೂ ತೆರೆ ಹಂಚಿಕೊಂಡಿದ್ದಾರೆ ಡಿಯರ್ ಜಿಂದಾಗಿ ಎಂಬ ಹಿಂದಿ ಸಿನಿಮಾದಲ್ಲಿ ಕೂಡ ರೇಣುಕ್ ಕುಮಾರ್ ನಟಿಸಿದ್ದಾರೆ. ಇವತ ಒ್ರಕಾರ ಹೀರೋ ಆಗುವುದಕ್ಕಿಂತ ಉತ್ತಮ ಕಲಾವಿದ ಆಗುವುದು ಮುಖ್ಯ ಎನ್ನುವ ರೇಣುಕ್ ಕುಮಾರ್ ಈಗ ಭೀಮರಾವ್ ಅಪ್ಪನಿಗೆ ಈಗ ಧ್ವನಿಯಾಗಿ ನಿಂತಿದ್ದಾರೆ..

By admin

Leave a Reply

Your email address will not be published. Required fields are marked *