ಬಿಳಿ ಕೂದಲನ್ನು ಕಪ್ಪಾಗಿಸುವಂತಹ ಅದ್ಭುತವಾದಂತಹ ನ್ಯಾಚುರಲ್ ಮನೆಮದ್ದು ಮಿಸ್ ಮಾಡಿದ್ದೆ ನೋಡಿ... » Karnataka's Best News Portal

ಬಿಳಿ ಕೂದಲನ್ನು ಕಪ್ಪಾಗಿಸುವಂತಹ ಅದ್ಭುತವಾದಂತಹ ನ್ಯಾಚುರಲ್ ಮನೆಮದ್ದು ಮಿಸ್ ಮಾಡಿದ್ದೆ ನೋಡಿ…

ಇತ್ತೀಚಿನ ದಿನಗಳಲ್ಲಿ ಪ್ರತಿ ವ್ಯಕ್ತಿಗೂ ಕೂಡ ಬಿಳಿ ಕೂದಲಿನ ಸಮಸ್ಯೆ ಕಾಡುತ್ತ ಇರುತ್ತದೆ ಅದು ಅನುವಂಶಿಯದಿಂದ ಬರಬಹುದು ಅಥವಾ ಆರೋಗ್ಯದಲ್ಲಿ ವ್ಯತ್ಯಾಸ ಆದಾಗ ಅಥವಾ ಇನ್ನೂ ಹಲವು ಕಾರಣಗಳಿಂದ ಈ ಬಿಳಿ ಕೂದಲಿನ ಸಮಸ್ಯೆ ಸಾಮಾನ್ಯವಾಗಿ ಎಲ್ಲರಲ್ಲೂ ಕಾಣಿಸಿಕೊಳ್ಳುತ್ತದೆ. ಇನ್ನು ಇದಕ್ಕೆ ಶಾಶ್ವತ ಪರಿಹಾರ ಬೇಕು ಅಂದರೆ ಮನೆಮದ್ದು ಗಳನ್ನು ಬಳಸಿ. ಮಾರ್ಕೆಟ್ ನಲ್ಲಿ ಸಿಗುವಂತಹ ಉತ್ಪನ್ನಗಳನ್ನು ಬಳಸುವುದರಿಂದ ನಿಮಗೆ ತಕ್ಷಣ ಫಲಿತಾಂಶ ಸಿಗಬಹುದು ಆದರೆ ಅದು ಶಾಶ್ವತವಲ್ಲ ಹಾಗೂ ಅದರಿಂದ ನಿಮಗೆ ಅಡ್ಡ ಪರಿಣಾಮಗಳು ಜಾಸ್ತಿ ಉಂಟಾಗುತ್ತದೆ. ಹಾಗಾಗಿ ನಾವು ತಿಳಿಸುವ ಮನೆ ಮದ್ದನ್ನು ಉಪಯೋಗಿಸಿ ಇನ್ನೂ ಇದನ್ನು ಮಾಡುವ ವಿಧಾನ ಏನೆಂದರೆ ಮೊದಲಿಗೆ ಒಂದು ಪಾತ್ರೆಗೆ ಒಂದು ಕಪ್ ನೀರನ್ನು ಹಾಕಿ. ನಾಲ್ಕು ಟೇಬಲ್ ಸ್ಪೂನ್ ಟೀ ಪೌಡರ್ ಅನ್ನು ಹಾಕಿ ನಂತರ ಮೂರು ಟೇಬಲ್ ಸ್ಪೂನ್ ಕರಿಬೇವಿನ ಪುಡಿ ಹಾಗೂ ಮೂರು ಟೇಬಲ್ ಸ್ಫೂನ್ ಅಮ್ಲ ಪೌಡರ್ ಹಾಕಿ ಮಿಕ್ಸ್ ಮಾಡಿ ಚೆನ್ನಾಗಿ ಕುದಿಸಿ.

ಒಂದು ಕಪ್ ನೀರು ಅರ್ಧ ಕಪ್ ನೀರು ಆಗುವ ತನಕ ಇದನ್ನು ಚೆನ್ನಾಗಿ ಬೇಯಿಸಿಕೊಳ್ಳಬೇಕು. ನಂತರ ಇದನ್ನು ಒಂದು ಗ್ಲಾಸ್ ಗೆ ಶೋಧಿಸಿಕೊಳ್ಳಿ ಮತ್ತೊಂದು ಬೌಲ್ ಗೆ ಮೆಹಂದಿ ಪುಡಿ ಹಾಗೂ ಮೂರು ಟೇಬಲ್ ಸ್ಪೂನ್ ಗಟ್ಟಿ ಮೊಸರನ್ನು ಹಕಿ ತಯಾರಿಸಿಕೊಂಡಿರುವ ಟೀ ನೀರನ್ನು ಎಲ್ಲವನ್ನೂ ಮಿಕ್ಸ್ ಮಾಡಿಕೊಳ್ಳಿ. ಕೊನೆಯದಾಗಿ ಇದಕ್ಕೆ ಅರ್ಧ ಟೇಬಲ್ ಸ್ಪೂನ್ ನಿಂಬೆ ರಸ ಹಾಗೂ ಒಂದು ಟೇಬಲ್ ಸ್ಪೂನ್ ಕೊಬ್ಬರಿ ಎಣ್ಣೆಯನ್ನು ಮಿಕ್ಸ್ ಮಾಡಿ ರಾತ್ರಿ ಪೂರ್ತಿ ಹಾಗೆ ನೆನೆಯಲು ಬಿಡಿ. ಬೆಳಗ್ಗೆ ಎದ್ದಾಕ್ಷಣ ನಿಮ್ಮ ತಲೆಗೆ ಇದನ್ನು ಹಚ್ಚಿಕೊಂಡು ಸ್ವಲ್ಪ ಬಿಟ್ಟು ನಂತರ ನೀರಿನಿಂದ ತಲೆಯನ್ನು ವಾಷ್ ಮಾಡಿಕೊಳ್ಳಿ ಇದರಿಂದ ಬಿಳಿ ಕೂದಲು ಕಪ್ಪು ಬಣ್ಣಕ್ಕೆ ತಿರುಗುತ್ತದೆ ನ್ಯಾಚುರಲ್ಲಾಗಿ.

WhatsApp Group Join Now
Telegram Group Join Now


crossorigin="anonymous">