ಇದೇ ಜಾಗದಲ್ಲಿ ಸೀತಾ ಮಾತೆಯು ಲವಕುಶರಿಗೆ ಜನ್ಮ ನೀಡಿದಳು ಎನ್ನುವುದಕ್ಕೆ ಇಲ್ಲಿ ಸಾಕಷ್ಟು ನಿದರ್ಶನಗಳು ಇದೆ ಹೀಗಾಗಿಇಲ್ಲಿ ಮಕ್ಕಳು ಇಲ್ಲದವರು ಮಕ್ಕಳ ಮೇಲಿನ ಮಮತೆ ಇರುವವರು ಬೆಟ್ಟದಲ್ಲಿರುವ ಕೋಟೆಯಲ್ಲಿ ಸ್ನಾನ ಮಾಡಿ ದೇವಿ ಮುಂದೆ ಕುಳಿತರ ಕನಸಿನಲ್ಲಿ ತೊಟ್ಟಿಲು, ಹೂ ಮತ್ತು ಮಗು ಕಾಣಿಸಿಕೊಳ್ಳುತ್ತದೆ ಆಗ ಮಕ್ಕಳು ಆಗುವುದು ಖಚಿತ ಎಂಬುದು ಇಲ್ಲಿನ ನಂಬಿಕೆ. ಇದು ಕರ್ನಾಟಕ ರಾಜ್ಯದ ರಾಮೇಶ್ವರ ಎಂದೇ ಹೆಸರು ಪಡೆದಿರುವ ಅಂತಹ ಅವಂತಿಕ ಕ್ಷೇತ್ರ ಎಂದೇ ಖ್ಯಾತಿ ಪಡೆದಿರುವ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಸುಪ್ರಸಿದ್ಧ ಕ್ಷೇತ್ರ ಅವನಿ. ರಾಮಾಯಣ ಬರೆದ ಆದಿಕವಿ ವಾಲ್ಮೀಕಿ ಮಹರ್ಷಿಗಳ ತಪೋಭೂಮಿ ಅರಣ್ಯ ಅವನಿ ಎಂದು ಕರೆಸಿಕೊಳ್ಳುತ್ತದೆ. ಇದು ಕಾಲ ಕ್ರಮೇಣ ಅವನಿ ಆಯಿತು ಎಂದು ಹೇಳಲಾಗುತ್ತದೆ. ಆದರೆ ಇನ್ನೊಂದು ಕಥೆಯ ಪ್ರಕಾರ ಅವನಿ ಎಂದು ಕರೆಯಲ್ಪಡುವ ಈ ಸ್ಥಳದಲ್ಲಿ ಸೀತಾಮಾತೆಯ ಇಲ್ಲಿಯೇ ನೆಲೆಸಿದ್ದಾರಂತೆ.
ಹೀಗಾಗಿ ಈ ಕ್ಷೇತ್ರಕ್ಕೆ ಅವನಿ ಎಂದು ಹೆಸರು ಬಂದಿತ್ತು ಅಂತ ಪುರಾಣವೂ ಕೂಡ ಇದನ್ನೆ ಹೇಳುತ್ತದೆ. ಈ ಅದ್ಭುತವಾದಂತಹ ಕ್ಷೇತ್ರ ತಾಲೂಕು ಕೇಂದ್ರ ವಾದಂತಹ ಮುಳ್ಳಬಾಗಿಲಿನ ಕೇವಲ 13 ಕಿಲೋಮೀಟರ್ ದೂರದಲ್ಲಿದೆ. ಜಿಲ್ಲಾ ಕೇಂದ್ರ ಕೋಲಾರದಿಂದ 30 ಕಿಲೋಮೀಟರ್ ದೂರದಲ್ಲಿದೆ ಉತ್ತರ ಕರ್ನಾಟಕದ ಅವಳಿ ನಗರಗಳಾದ ಹುಬ್ಬಳ್ಳಿ ಧಾರವಾಡ ದಿಂದ 574 ಕಿಲೋಮೀಟರ್ ದೂರದಲ್ಲಿದೆ. ರಾಜ್ಯದ ರಾಜಧಾನಿಯಾದ ಬೆಂಗಳೂರಿನಿಂದ ಕೇವಲ 95 ಕಿಲೋ ಮೀಟರ್ ದೂರದಲ್ಲಿದೆ. ಪ್ರಸ್ತುತ ಅವನಿ ಕ್ಷೇತ್ರ ಎಂದು ಕರೆಯಲ್ಪಡುವ ಈ ಕ್ಷೇತ್ರ ತ್ರೇತಾಯುಗದ ಮರೆಯಾದ ಪುರುಷೋತ್ತಮ ಅಂತ ಕರೆಸಿಕೊಂಡ ಶ್ರೀರಾಮಚಂದ್ರನು ತನ್ನ ಪಾಪ ಪ್ರಾಯಶ್ಚಿತ್ತಕ್ಕಾಗಿ ಸ್ವತಃ ಧಾವಿಸಿ ಇಲ್ಲಿ ಲಿಂಗ ಪ್ರತಿಷ್ಠಾಪಿಸಿ ಪೂಜಿಸಿದ ಪಾರ್ಥ ಲಿಂಗೇಶ್ವರ ದೇವಾಲಯವಿದೆ ಎಂದು ತಿಳಿದು ಬಂದಿದೆ.
