ನೀವೂ ಎಂದು ಕಂಡು ಕೇಳಿರದ ಕೂಡಲ ಸಂಗಮ ಶಿವಲಿಂಗದಲ್ಲಿ ಭಾರಿ ಬಿರುಕು ಇಂಟರಸ್ಟಿಂಗ್ ಮಾಹಿತಿ ನೋಡಿ ... - Karnataka's Best News Portal

ಬಾಗಲಕೋಟೆ ಜಿಲ್ಲೆಯ ಐತಿಹಾಸಿಕ ಕೂಡಲ ಸಂಗಮದಲ್ಲಿ ಇರುವ ಬಸವಣ್ಣ ನವರ ಐಕ್ಯಸ್ಥಳದಲ್ಲಿನ ಪುರಾಣ ಶಿವಲಿಂಗದಲ್ಲಿ ಬಿರುಕು ಕಾಣಿಸಿಕೊಂಡಿದೆ. ಈ ಸುದ್ದಿ ಅಸಂಖ್ಯಾತ ಭಕ್ತರಲ್ಲಿ ಆತಂಕವನ್ನು ಉಂಟುಮಾಡಿದೆ ಕಳೆದ ಕೆಲವು ದಿನಗಳಿಂದ ಶಿವಲಿಂಗ ಬಿರುಕು ಬಿಟ್ಟಿರುವುದಾಗಿ ವಿಡಿಯೋ ಎಲ್ಲಾ ಕಡೆ ವೈರಲ್ ಆಗಿದೆ. ಹಾಗಾಗಿ ಅಲ್ಲಿನ ಸುತ್ತ ಮುತ್ತಲಿನ ಊರಿನ ಭಕ್ತರು ತಂಡೋಪ ತಂಡವಾಗಿ ಆಗಮಿಸಿದ್ದರೆ ಹೀಗೆ ಶಿವಲಿಂಗ ಬಿರುಕು ಬಿಟ್ಟಿರುವುದರಿಂದ ಜಗತ್ತಿಗೆ ಆಪತ್ತನ್ನು ತಂದಿದೆ ಎಂದು ಭಕ್ತರು ನಂಬಿದ್ದಾರೆ. ಶಿವಲಿಂಗ ಬಿರುಕು ಬಿಡಲು ಕಾರಣ ಮತ್ತು ಅದರ ನಿಗೂಢ ಅರ್ಥವನ್ನು ಏನು ಎಂಬುದನ್ನು ತಿಳಿಸುತ್ತೇವೆ. ಕೃಷ್ಣ ನದಿ ಮಲಪ್ರಭ ನದಿ ಹಾಗೆ ಘಟಪ್ರಭಾ ಈ ಮೂರು ನದಿಗಳು ತ್ರಿವೇಣಿ ಸಂಗಮವೇ ಕೂಡಲ ಸಂಗಮ. ಬಸವಣ್ಣನವರ ಐಕ್ಯ ಮಠ ಕೂಡ ಇರುವುದು ಇಲ್ಲೆ ಕೂಡಲ ಸಂಗಮ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನಲ್ಲಿದೆ.

ಆಲಮಟ್ಟಿ ಅಣೆಕಟ್ಟಿನ ಕೇವಲ ಇಪ್ಪತ್ತೈದು ಕಿಲೋಮೀಟರ್ ದೂರದಲ್ಲಿದೆ ಕೂಡಲ ಸಂಗಮ ಲಿಂಗಾಯತ ಪಂಗಡದವರಿಗೆ ಪ್ರಮುಖ ಪುಣ್ಯ ಕ್ಷೇತ್ರವಾಗಿದೆ. ಬಸವಣ್ಣನವರು ಚಿಕ್ಕ ವಯಸ್ಸಿನಲ್ಲಿ ಇಲ್ಲಿಗೆ ಬಂದು ಈಶಾನ್ಯ ಗುರುಗಳೆಂದು ಖ್ಯಾತರಾಗಿರುವ ಪರಮ ಪೂಜ್ಯ ಜಾತವೇದ ಮುನಿಗಳಿಂದ ಶಿಕ್ಷಣ ಮತ್ತು ಮಾರ್ಗ ದರ್ಶನ ಪಡೆದರು. ಇಲ್ಲಿ ಕೃಷ್ಣಾ ಮತ್ತು ಮಲಪ್ರಭಾ ನದಿ ವಿಲೀನವಾಗಿ ಪೂರ್ವದಿಕ್ಕಿನಲ್ಲಿ ಇರುವಂತಹ ಆಂಧ್ರ ಪ್ರದೇಶದ ಶ್ರೀಶೈಲದ ಕಡೆಗೆ ನದಿ ಹರಿಯುತ್ತದೆ. ಮಹಾ ಮಹಿಮ ಬಸವಣ್ಣ ಪಾದವಿಟ್ಟ ಅತಿಮುಖ್ಯ ಕ್ಷೇತ್ರಗಳು ಒದು ಪುಣ್ಯಕ್ಷೇತ್ರ ಎಂದು ಜಗನ್ಮಾತೆ ಅಕ್ಕ ಮಹಾದೇವಿ ನುಡಿದ ಪ್ರಕಾರ ಕೂಡಲ ಸಂಗಮ ಬಸವಣ್ಣನವರ ವಿದ್ಯಾಭೂಮಿ ತಪೋಸ್ಥಾನ ಐಕ್ಯಕ್ಷೇತ್ರವಾಗಿ ಇಂದು ಪುಣ್ಯಭೂಮಿಯಾಗಿ ಕಂಗೊಳಿಸುತ್ತಿದೆ.

By admin

Leave a Reply

Your email address will not be published. Required fields are marked *