ಅಮ್ಮ 32 ವರ್ಷದ ಹಿಂದೆ ನಿಶ್ಚಿತಾರ್ಥಕ್ಕೆ ಉಟ್ಟ ಸೀರೆಯನ್ನು ತನ್ನ ಮದುವೆ ಶಾಸ್ತ್ರಕ್ಕೆ ಉಟ್ಟ ನಟಿ..ನಿಹಾರಿಕಾ - Karnataka's Best News Portal

ನಮಸ್ತೆ ಗೆಳೆಯರೇ ಹೆಣ್ಣುಮಕ್ಕಳಿಗೆ ತನ್ನ ತವರು ಮನೆಯ ತಾಯಿ ಅಥವಾ ತನಗೆ ಜನ್ಮ ನೀಡಿದ ತಾಯಿ ಅಂದರೆ ಯಾರಿಗೆ ತಾನೆ ಪ್ರಾಣಕ್ಕೆ ಪ್ರಾಣ ಇರುವುದಿಲ್ಲ ಹೇಳಿ ಹೌದು ಹೆಣ್ಣು ಮಕ್ಕಳಿಗೆ ಹೆತ್ತ ತಾಯಿಯ ಸೀರೆ, ಒಡವೆ ಧರಿಸುವುದು ಎಂದರೆ ಇನ್ನಿಲ್ಲದೆ ಸಂಭ್ರಮ ಅದಕ್ಕಿಂತ ಸಂತೋಷ ಲಕ್ಷಾಂತರ ರೂಪಾಯಿ ಕೊಟ್ಟು ಖರೀದಿಸಿದ ಒಡವೆ ಸೀರೆ ಧರಿಸಿದರೂ ದೊರೆಯುವುದಿಲ್ಲ. ಇದೀಗ ನಟಿ ನಾಗಬಾಬು ಪುತ್ರಿ ಕೂಡಾ ಅಮ್ಮನ ಸೀರೆಯನ್ನು ತಮ್ಮ ಮದುವೆ ಶಾಸ್ತ್ರಕ್ಕೆ ಉಟ್ಟುಕೊಂಡಿದ್ದಾರೆ. ಮೆಗಾ ಫ್ಯಾಮಿಲಿಯಲ್ಲಿ ಮದುವೆ ಸಂಭ್ರಮ ಆರಂಭವಾಗಿದೆ ಬಹಳ ದಿನಗಳ ನಂತರ ಮೆಗಾಸ್ಟಾರ್ ಕುಟುಂಬದಲ್ಲಿ ಮತ್ತೆ ಮಂಗಳವಾದ್ಯಗಳ ಸದ್ದು ಮೊಳಗಿದ್ದು ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ ಡಿಸೆಂಬರ್ 9 ರಂದು ರಾಜಸ್ಥಾನದ ಉದಯಪುರ್​​​​​ನ ಒಬೆರಾಯ್ ಉದಯ್​​​​​​​​​​​​​​​​​​​ ವಿಲಾಸ್ ಪ್ಯಾಲೇಸ್​​​​ನಲ್ಲಿ ಚಿರಂಜೀವಿ ತಮ್ಮ ನಾಗಬಾಬು ಪುತ್ರಿ ನಿಹಾರಿಕಾ ಕೊನಿಡೇಲ ಮದುವೆ ನಡೆಯಲಿದೆ. ನಾಗಬಾಬು ಮನೆಯಲ್ಲಿ ಇದು ಮೊದಲ ಮದುವೆ ಸಂಭ್ರಮವಾಗಿರುವುದ್ದು ಈ ನೆನಪು ಚಿರಕಾಲ ಉಳಿಯಬೇಕೆಂಬ ಕಾರಣದಿಂದ ಏಷ್ಯಾದ ದೊಡ್ಡ ಹೋಟೆಲ್​ ಎನಿಸಿರುವ ಉದಯ್ ಪ್ಯಾಲೇಸ್​​​ನಲ್ಲಿ ಮದುವೆಯನ್ನು ಏರ್ಪಡಿ ಸಲಾಗಿದೆ ಬಹಳ ದಿನಗಳ ಮುನ್ನವೇ ಉದಯ್ ಮಹಲ್ ಪ್ಯಾಲೇಸನ್ನು ಬುಕ್ ಮಾಡಲಾಗಿದ್ದು ಇದೇ ಜಾಗದಲ್ಲಿ ಇತ್ತೀಚೆಗೆ ನಿಹಾರಿಕಾ ಹಾಗೂ ಭಾವಿ ಪತಿ ಚೈತನ್ಯ ಜೊನ್ನಗಡ್ಡ ಪ್ರೀ ವೆಡ್ಡಿಂಗ್ ಫೋಟೋಶೂಟ್ ಮಾಡಿಸಿದ್ದರುಬುಧವಾರ ನಡೆಯುತ್ತಿರುವ ಮದುವೆ ಸಮಾರಂಭದಲ್ಲಿ ನಾಗಬಾಬು ಹಾಗೂ ಚೈತನ್ಯ ಕುಟುಂಬದ ಸದಸ್ಯರು ಹಾಗೂ ಆಪ್ತರು ಮಾತ್ರ ಭಾಗವಹಿಸುತ್ತಿದ್ದಾರೆ ಈಗಾಗಲೇ ಈ ಕುಟುಂಬ ವಿಶೇಷ ವಿಮಾನದಲ್ಲಿ ರಾಜಸ್ಥಾನದ ಕಡೆ ಪ್ರಯಾಣ ಬೆಳೆಸಿದ್ದಾರೆ ತಮ್ಮ ತಾಯಿ ಪದ್ಮಜಾ ಕೊನಿಡೇಲ 32 ವರ್ಷಗಳ ಹಿಂದೆ ತಮ್ಮ ನಿಶ್ಚಿತಾರ್ಥಕ್ಕೆ ಧರಿಸಿದ್ದ ಸೀರೆಯನ್ನೇ ಮದುಮಗಳು ನಿಹಾರಿಕಾ ಕೊನಿಡೇಲ ತಮ್ಮ ಮದುವೆ ಶಾಸ್ತ್ರಕ್ಕೆ ಧರಿಸಿದ್ದು ಬಹಳ ವಿಶೇಷವಾಗಿತ್ತು. ನಿಹಾರಿಕಾ ಬಹಳ ದಿನಗಳ ಹಿಂದೆಯೇ ಅಮ್ಮನ
ಸೀರೆಯನ್ನು ರೆಡಿ ಮಾಡಿಸಿಕೊಂಡಿದ್ದರು ನಿನ್ನೆ ಚಪ್ಪರ ಶಾಸ್ತ್ರದ ವೇಳೆ ನಿಹಾರಿಕಾ ಅಮ್ಮನ ಸೀರೆಯನ್ನು ಧರಿಸಿ ಸಂಭ್ರಮಿಸಿದ್ದರು ಈ ವೇಳೆ


ತೆಗೆಸಿಕೊಂಡ ಫೋಟೋವನ್ನು ಅಮ್ಮನ ಫೋಟೋದೊಂದಿಗೆ ಸೇರಿಸಿ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ ನೀಲಿ ಹಾಗೂ ಚಿನ್ನದ ಬಣ್ಣದ ಅಂಚಿನ ಸೀರೆಯಲ್ಲಿ ನಿಹಾರಿಕಾ ಮುದ್ಧಾಗಿ ಕಾಣುತ್ತಿದ್ದಾರೆ. ಅಭಿಮಾನಿಗಳು ಸೇರಿದಂತೆ ಅನೇಕ ಸೆಲಬ್ರಿಟಿಗಳು ನಿಹಾರಿಕಾ ಫೋಟೋವನ್ನು ಮೆಚ್ಚಿ ಕಮೆಂಟ್ ಮಾಡುತ್ತಿದ್ದಾರೆ
ನಿಹಾರಿಕಾ ಫೋಟೋಗೆ ನಾಗಬಾಬು ಕೂಡಾ ಕಮೆಂಟ್ ಮಾಡಿ, “ಈ ಫೋಟೋದಲ್ಲಿ ನನ್ನ ಪತ್ನಿ ಸುಂದರವಾಗಿ ಕಾಣುತ್ತಿದ್ದಾಳೆ, ನನ್ನ ಮಗಳು ನಿಹಾರಿಕಾ ದೇವತೆಯಂತೆ ಕಾಣುತ್ತಿದ್ದಾಳೆ” ಎಂದು ಕಾಂಪ್ಲಿಮೆಂಟ್ಸ್ ನೀಡಿದ್ದಾರೆ. ನಾಗಬಾಬು ಮತ್ತೊಂದು ಫೋಟೋವನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು ಅದರಲ್ಲಿ ನಿಹಾರಿಕಾ ತನ್ನ ದೊಡ್ಡಪ್ಪ ಚಿರಂಜೀವಿ ಜೊತೆ ಸೆಲ್ಫಿ ಕ್ಲಿಕ್ಕಿಸಿ ಕೊಳ್ಳುತ್ತಿದ್ದಾರೆ ಅಣ್ಣ ನಮಗೆ ಇದುವರೆಗೂ ಪ್ರೀತಿ ಹಂಚುತಲೇ ಇದ್ದಾರೆ ಅವರ ಪ್ರೀತಿಗೆ ಗಡಿಯೂ ಇಲ್ಲ ವಯಸ್ಸಿನ ಮಿತಿಯೂ ಇಲ್ಲ. ಅವರ ನಗುವೇ ನಮಗೆ ದೊಡ್ಡ ಸಂಭ್ರಮಾಚರಣೆ ಎಂದು ಕ್ಯಾಪ್ಷನ್ನೀಡಿದ್ದಾರೆ. ಮತ್ತೊಂದು ಫೋಟೋದಲ್ಲಿ ನಿಹಾರಿಕಾಗೆ ಚಿರಂಜೀವಿ ಹಾಗೂ ಅವರ ಪತ್ನಿ ಸುರೇಖ ಬಾಗಿನ ನೀಡುತ್ತಿರುವ ಫೋಟೋವನ್ನು ನಾಗಬಾಬು ಹಂಚಿಕೊಂಡಿದ್ದಾರೆನಿಹಾರಿಕಾ, ಪ್ರಭಾಸ್​​ ಅವರನ್ನು ಮದುವೆ ಯಾಗುತ್ತಿದ್ದಾರೆ ಎಂಬ ಗಾಳಿಸುದ್ದಿ ಕೆಲವು ದಿನಗಳ ಹಿಂದೆ ಹರಿದಾಡಿತ್ತು ಆದರೆ ಚೈತನ್ಯ ಅವರೊಂದಿಗೆ ಆಗಸ್ಟ್​​​​ನಲ್ಲಿ ನಿಹಾರಿಕಾ ನಿಶ್ಚಿತಾರ್ಥ ಮಾಡಿಕೊಂಡ ನಂತರ ಈ ಊಹಾಪೋಹಗಳಿಗೆ ತೆರೆ ಬಿದ್ದಿತ್ತು ನಿಹಾರಿಕಾ 2016 ರಲ್ಲಿ ‘ಒಕ್ಕ ಮನಸು ಚಿತ್ರದ ಮೂಲಕ ಟಾಲಿವುಡ್​​​ನಲ್ಲಿ ಆ್ಯಕ್ಟಿಂಗ್ ಕರಿಯರ್ ಆರಂಭಿಸಿದರು ಮೂರು ವೆಬ್​​ ಸೀರೀಸ್ ಹಾಗೂ 5 ಸಿನಿಮಾಗಳಲ್ಲಿ ನಿಹಾರಿಕಾ ನಟಿಸಿದ್ದಾರೆ ದೊಡ್ಡಪ್ಪ ಅಭಿನಯದ ‘ಸೈ ರಾ ನರಸಿಂಹ ರೆಡ್ಡಿ’ ಚಿತ್ರದಲ್ಲಿ ಕೂಡಾ ನಿಹಾರಿಕಾ ನಟಿಸಿದ್ದಾರೆ. ಇದೀಗ ನಿಹಾರಿಕಾ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದು ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ. ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ತಪ್ಪದೇ ಲೈಕ್ ಮಾಡಿ ಶೇರ್ ಮಾಡಿ ಕಾಮೆಂಟ್ ಮಾಡಿ ಧನ್ಯವಾದಗಳು ಸ್ನೇಹಿತರೆ.

By admin

Leave a Reply

Your email address will not be published. Required fields are marked *