ಒಂದು ಬೋರ್ ವೆಲ್ ಕೊರೆಯಬೇಕು ಅಂದರೆ ಏನೆಲ್ಲಾ ಹಂತಗಳಿವೆ ಗೊತ್ತಾ ಲೈವ್ ನಲ್ಲಿ ನೋಡಿ ಆರಂಭದಿಂದ ಅಂತ್ಯದ ತನಕ ಫುಲ್ ವಿಡಿಯೋ..! - Karnataka's Best News Portal

ಒಂದು ಬೋರ್ ವೆಲ್ ಕೊರೆಯಬೇಕು ಅಂದರೆ ಏನೆಲ್ಲಾ ಹಂತಗಳಿವೆ ಗೊತ್ತಾ ಲೈವ್ ನಲ್ಲಿ ನೋಡಿ ಆರಂಭದಿಂದ ಅಂತ್ಯದ ತನಕ ಫುಲ್ ವಿಡಿಯೋ..!

ಮೊದಲಿಗೆ ಬೋರ್ ವೆಲ್ ಕೊರೆಯುವ ಸ್ಥಳ ನಿಗದಿಪಡಿಸಿಕೊಂಡು ಬಿಟ್ ಅನ್ನು ಅಳವಡಿಸಿಕೊಂಡು ಕೊರೆಯಲು ಶುರುಮಾಡುತ್ತಾರೆ. ಸಾಮಾನ್ಯವಾಗಿ ಬೋರ್ ವೆಲ್ ಕೊರೆಯಲು 4.5 ರಿಂದ 6 ಇಂಚು ಸುತ್ತಳತೆಯಲ್ಲಿ ಕೊರೆಯಬೇಕಾಗುತ್ತದೆ ಅಪಾರ್ಟ್ಮೆಂಟ್ ಹಾಗೂ ನೂರಾರು ಎಕರೆ ವ್ಯವಸಾಯ ಜಮೀನು ಮಾಡುವವರಿಗೆ ಎಂಟು ಇಂಚುಗಳಷ್ಟು ಅಳತೆಯಲ್ಲಿ ಬೋರ್ ವೆಲ್ ಗಳನ್ನು ಕೊರೆಯಲಾಗುತ್ತದೆ. ಸಾಮಾನ್ಯವಾಗಿ 250 ಅಡಿ ಗಳಿಂದ 300 ಅಡಿಗಳಿಗೆ ನೀರಿನ ಚಿಲುಮೆ ಸಿಗುತ್ತದೆ ಆದರೆ ಅಷ್ಟು ಅಡಿಗಳಿಗೆ ಸಿಕ್ಕ ನೀರು ತಾತ್ಕಾಲಿಕವಾಗಿರುತ್ತದೆ ಅದಕ್ಕಾಗಿ ಇನ್ನೂ ಆಳದವರೆಗೆ ಬೋರ್ ವೆಲ್ ಕೊರೆಸುತ್ತಾರೆ. ಬೋರ್ ವೆಲ್ ಗಳನ್ನು 300 ಅಡಿ ಗಳಿಂದ ಸಾವಿರ ಅಡಿಗಳವರೆಗೆ ಕೂಡ ಕೊರೆಯಲಾಗುತ್ತದೆ ನಂತರ ಕೇಸಿಂಗ್ ಪೈಪ್ ಗಳನ್ನು ಜೋಡಿಸಲಾಗುತ್ತದೆ ಆಗ ಆ ಪೈಪ್ ಗಳ ಒಳಗಿಂದ ನೀರು ಹರಿಯುತ್ತದೆ. ಸಾಮಾನ್ಯವಾಗಿ ಮೊದಲೆಲ್ಲಾ ನಮಗೆ ನೀರು ಬೇಕು ಅಂದರೆ ಕೆರೆ, ಅಥವಾ ಬಾವಿಗಳನ್ನು ಅನುಸರಿಸುತ್ತಿದ್ದೆವು.

ಬಾವಿಗಳನ್ನು ಮಾನವ ಕೃತಕವಾಗಿ ನಿರ್ಮಿಸುತ್ತಿದ್ದ ಮೊದಲು ಅಂತರ್ಜಲದ ಮಟ್ಟ ಅತಿ ಹೆಚ್ಚಳವಾಗಿದ್ದರಿಂದ ಕೇವಲ 50 ರಿಂದ 100 ಅಡಿಗಳಷ್ಟು ಬಾವಿಯನ್ನು ತೆಗೆದರೆ ಸಾಕು ಅದರಲ್ಲಿ ನೀರು ಉಂಟಾಗುತ್ತಿತ್ತು‌ ಹಾಗೂ ನೀರು ಎಂದಿಗೂ ಕೂಡ ಬತ್ತುತಿರಲಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಅಂತರ್ಜಲ ಮಟ್ಟ ಕಡಿಮೆಯಾಗುತ್ತಿರುವುದರಿಂದ 500 ರಿಂದ 1000 ಅಡಿಗಳ ವರೆಗೂ ಬೋರ್ ವೆಲ್ ಕೋರಿಸಿದರೂ ಕೂಡ ನೀರಿನ ಅಭಾವ ಉಂಟಾಗುತ್ತಿದೆ. ಕೆಲವೊಮ್ಮೆ ಅದೃಷ್ಟ ಸರಿಯಾಗಿ ಇತ್ತು ಅಂದರೆ ಇನ್ನೂರರಿಂದ ಮುನ್ನೂರು ಅಡಿಗಳ ಒಳಗಡೆ ನಿಮಗೆ ನೀರು ಸಿಗುತ್ತದೆ. ಇನ್ನು ಈ ಬೋರ್ ವೆಲ್ ನೀರು ಶಾಶ್ವತವಲ್ಲ ಅಂತರ್ಜಲದ ಮಟ್ಟ ಕಡಿಮೆಯಾದಾಗ ಅದು ಬತ್ತಿ ಹೋಗಬಹುದು.

WhatsApp Group Join Now
Telegram Group Join Now
See also  ಕೊಲೆಸ್ಟರಾಲ್‌ ಒಂದು ತಿಂಗಳಿನಲ್ಲಿ ಕಡಿಮೆ ಮಾಡುವ ಮನೆಮದ್ದು..ಈ ಆಹಾರಕ್ರಮ ತಪ್ಪದೇ ಪಾಲಿಸಿ..ಆರೋಗ್ಯದಲ್ಲಿ ಚಮತ್ಕಾರ ನೋಡಿ


crossorigin="anonymous">