ಡಾಕ್ಟರ್ ಸಾಹಸಸಿಂಹ ವಿಷ್ಣುವರ್ಧನ್ ಅವರ ಬಗ್ಗೆ ವಿಜಯ ರಂಗರಾಜು ಅವರು ತುಂಬಾ ಕೆಟ್ಟದಾಗಿ ಮಾತನಾಡಿದ್ದರೆ. ಇದು ನಿಜಕ್ಕೂ ತುಂಬಾ ಬೇಸರದ ವಿಷಯ ಇದರಿಂದಾಗಿ ಎಲ್ಲಾ ಅಭಿಮಾನಿಗಳು ತುಂಬಾ ದುಃಖ, ಬೇಜಾರು ಹಾಗೂ ಕೋಪಗೊಂಡಿದ್ದಾರೆ. ನಿಮ್ಮೆಲ್ಲರಿಗೂ ಗೊತ್ತಿರುವ ಹಾಗೆ ಸಾಹಸಸಿಂಹ ಡಾಕ್ಟರ್ ವಿಷ್ಣುವರ್ಧನ್ ಅವರ ಎಲ್ಲಾ ಕಲಾವಿದರನ್ನು ಪ್ರೀತಿಸುತ್ತಿದ್ದ ಗೌರವದಿಂದ ನೆಡೆಸಿಕೊಳ್ಳುತ್ತಿದ್ದರು ಎಷ್ಟೊ ಜನಕ್ಕೆ ಅವರ ಕಷ್ಟದ ಸಮಯದಲ್ಲಿ ಸಹಾಯ ಮಾಡಿದರೆ ಅಷ್ಟೇ ಅಲ್ಲದೆ ಈ ಸಹಾಯ ನಾನು ಮಾಡಿರುವುದಹ ಅಂತ ಯಾರಿಗೂ ಹೇಳಬೇಡಿ ದಯವಿಟ್ಟು ಅಂತ ಕೂಡ ಹೇಳಿಕೊಂಡಿದ್ದಾರೆ. ಅಂತಹ ವ್ಯಕ್ತಿಯ ಬಗ್ಗೆ ಇಂದು ರಂಗರಾಜು ಈ ರೀತಿಯಾಗಿ ಮಾತನಾಡಿದ್ದು ನಿಜಕ್ಕೂ ಬೇಸರದ ವಿಷಯ ರಂಗರಾಜು ಹೇಳಿಕೊಂಡಿದ್ದಾರೆ ಡಾಕ್ಟರ್ ವಿಷ್ಣುವರ್ಧನ್ ಅವರ ಕಾಲರ್ ಪಟ್ಟಿಯನ್ನು ನಾನು ಹಿಡಿದಿದ್ದೇನೆ ಅಂತ.
ಅವರಿಗೆ ಅಷ್ಟು ಧೈರ್ಯ ಇದೆಯಾ. ಇದ್ದಿದ್ದರೆ ಈ ವಿಚಾರವನ್ನು ಅವರು ವಿಷ್ಣುವರ್ಧನ್ ಅವರು ಬದುಕಿರುವಾಗಲೇ ಹೇಳಿಕೊಳ್ಳಬಹುದು ಆದರೆ ಈಗ ವಿಷ್ಣುವರ್ಧನ್ ಅವರು ನಮ್ಮನ್ನು ಶಾರೀರಿಕವಾಗಿ ಬಿಟ್ಟು 11 ವರ್ಷಗಳಾದ ಮೇಲೆ ಅಲ್ಲೆಲ್ಲೋ ಕುಳಿತುಕೊಂಡು ಈ ರೀತಿ ಹೇಳುತ್ತಿದ್ದಾರೆ ಎಂದರೆ ಅವರಿಗೆ ನಿಜವಾಗಿಯೂ ಧೈರ್ಯವಂತನಾ. ಸತ್ಯಕ್ಕೆ ಶಕ್ತಿ ಇರುತ್ತದೆ ಆದರೆ ಈ ವ್ಯಕ್ತಿ ಆವಾಗ ಹೇಳದೆ ಈಗ ಹೇಳುತ್ತಿದ್ದೇನೆ ಅಂದರೆ ಆ ವ್ಯಕ್ತಿಯ ಮಾತು ಸತ್ಯ ಅಲ್ಲ ಸುಮ್ಮನೆ ಮೀಸೆ ಬೆಳೆಸಿಕೊಂಡು ಮಾತನಾಡಿದರೆ ಆ ಮಾತು ಸತ್ಯ ಅಂತ ಯಾರೂ ಹೇಳುವುದಿಲ್ಲ. ಯಾರ ಬಗ್ಗೆ ಮಾತನಾಡುತ್ತಿದ್ದಾರೆ ಎಂಬುದರ ಬಗ್ಗೆ ಅರಿವು ಇರಬೇಕು ಕರ್ನಾಟಕದ ಒಬ್ಬ ಮೇರುನಟನ ಬಗ್ಗೆ ಈ ರೀತಿ ಕೆಟ್ಟದಾಗಿ ಮಾತನಾಡುತ್ತಿರುವುದು ಇಡೀ ಕರ್ನಾಟಕ ಜನರಿಗೆ ಅವಮಾನ ಮಾಡುತ್ತಿದ್ದ ಹಾಗೆ ಎಂದು ಅನಿರುದ್ಧ ತಮ್ಮ ದುಃಖವನ್ನು ವ್ಯಕ್ತಪಡಿಸಿ ಕೊಳ್ಳುತ್ತಿದ್ದಾರೆ.
