ಕಾಲಿನ ಸ್ನಾಯು ಸೆಳೆತ ಸಹಿಸಿಕೊಳ್ಳಲಾರದಷ್ಟು ನೋವು ಇದೆಯಾ ಹೀಗೆ ಮಾಡಿದರೆ ಮತ್ತೆ ಎಂದಿಗೂ ಕೂಡ ಕಾಲಿನ ಸೆಳೆತ ಬರುವುದೇ ಇಲ್ಲ.. - Karnataka's Best News Portal

ಇತ್ತೀಚಿನ ದಿನಗಳಲ್ಲಿ ರಾತ್ರಿಯ ಸಮಯ ಕಾಲಿನ ಸೆಳೆತ ಹೆಚ್ಚಾಗಿ ಉಂಟಾಗುತ್ತದೆ ನಿದ್ರೆ ಮಾಡುವುದಕ್ಕೂ ಕೂಡ ಸಾಧ್ಯವಾಗುವುದಿಲ್ಲ ಈ ಲಕ್ಷಣವನ್ನು ನ್ಯಾಚುರಲ್ ಲೆಗ್ ಕ್ರಾನ್ಕ್ಸ್ ಎಂದು ಕರೆಯುತ್ತಾರೆ. ಈ ಸೆಳತ ಕೆಲವೊಮ್ಮೆ ಕಾಲಿನ ತೊಡೆಯ ಭಾಗದಲ್ಲಿ ಹಾಗೂ ಕಾಲಿನ ಪಾದದ ಸ್ಥಳಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಸ್ನಾಯು ಸೆಳೆತ ಮಳೆಗಾಲಕ್ಕಿಂತ ಹೆಚ್ಚಾಗಿ ಬೇಸಿಗೆಕಾಲದಲ್ಲಿ ಕಂಡುಬರುತ್ತದೆ ಏಕೆಂದರೆ ಬೇಸಿಗೆ ಕಾಲದಲ್ಲಿ ಸೂರ್ಯನ ಬಿಸಿಲಿನಿಂದ ನಮಗೆ ವಿಟಮಿನ್-ಡಿ ಹೆಚ್ಚಾಗಿ ದೊರೆಯುತ್ತದೆ ಹಾಗಾಗಿ ನರಗಳ ಬೆಳವಣಿಗೆಗೆ ಮತ್ತು ನರಗಳ ರಿಪೇರಿ ಕಾರ್ಯದ ಲಕ್ಷಣದಿಂದಾಗಿ ಇದರಿಂದ ನಮಗೆ ಹೆಚ್ಚಾಗಿ ಸ್ನಾಯು ಸೆಳೆತ ಕಂಡು ಬರುತ್ತದೆ. ಕೆಲವೊಮ್ಮೆ ಡೀಹೈಡ್ರಜೇಷನ್ ನಿಂದಲೂ ಕೂಡ ಸ್ನಾಯುಗಳ ಸೆಳತಕ್ಕೆ ಕಾರಣವಾಗುತ್ತದೆ. ಇದರ ಜೊತೆಗೆ ನಾವು ಹೆಚ್ಚಾಗಿ ಕೆಲಸ ಮಾಡುವುದು ಹಾಗೂ ಬಿಡದೆ ಇರುವ ರೀತಿಯಲ್ಲೇ ವ್ಯಾಯಾಮಗಳನ್ನು ಮಾಡುವುದು, ಹೆಚ್ಚಿನ ಪೋಷಕಾಂಶಗಳಿಂದ ಕೂಡಿರದ ಆಹಾರವನ್ನು ಸೇವಿಸುವುದು ಈ ಎಲ್ಲ ಕಾರಣಗಳಿಂದಲೂ ಕೂಡ ಸ್ನಾಯು ಸೆಳೆತ ಉಂಟಾಗುತ್ತದೆ.

ಇದಕ್ಕೆ ಪರಿಹಾರವೆಂದರೆ ನೆಲದ ಮೇಲೆ ಮಲಗಬೇಕು ನಿಮ್ಮ ಕಾಲಿನ ಭಾಗಕ್ಕೆ ದಿಂಬನ್ನು ಹೊತ್ತು ಪಡೆದು ಮಲಗಬೇಕು. ಇನ್ನೂ ಸ್ನಾಯು ಸೆಳೆತದಿಂದ ತಪ್ಪಿಸಿಕೊಳ್ಳಲು ಮಾರುಕಟ್ಟೆಯಲ್ಲಿ ಹಲವಾರು ವಿಧವಾದ ಪಾದರಕ್ಷೆಗಳು ಬಂದಿದೆ ಅದನ್ನು ನೀವು ಧರಿಸುವುದರಿಂದ ನೋವು ಕಡಿಮೆ ಮಾಡಿಕೊಳ್ಳಬಹುದು. ಇದರ ಜೊತೆಗೆ ನಿಮ್ಮ ವಯಸ್ಸಿಗೆ ತಕ್ಕಂತೆ ಮತ್ತು ಸಮಯಕ್ಕೆ ತಕ್ಕಂತೆ ಹೆಚ್ಚಾಗಿ ನೀರನ್ನು ಹೆಚ್ಚಾಗಿ ಕುಡಿಯುವುದರಿಂದಲೂ ಕೂಡ ಸ್ನಾಯು ಸೆಳೆತ ಕಡಿಮೆ ಮಾಡಿಕೊಳ್ಳಬಹುದು. ಒಂದು ಬಕೆಟ್ ಗೆ ಬಿಸಿ ನೀರನ್ನು ತುಂಬಿಸಿ ಅದಕ್ಕೆ ಸ್ವಲ್ಪ ಪ್ರಮಾಣದ ಉಪ್ಪನ್ನು ಹಾಕಿ ನಿಮ್ಮ ಪಾದಗಳನ್ನು 10 ನಿಮಿಷಗಳ ಕಾಲ ನೀರಿನಲ್ಲಿ ನೆನೆಸಿ ಇಟ್ಟುಕೊಳ್ಳುವುದರಿಂದ ಕೂಡ ನಿಮಗೆ ಸ್ನಾಯು ಸೆಳೆತ ಕಡಿಮೆಯಾಗುತ್ತದೆ.

By admin

Leave a Reply

Your email address will not be published. Required fields are marked *