ರಾಕಿಂಗ್ ಸ್ಟಾರ್ ಯಶ್ ಅವರಿಗೆ ನಟಿ ರಾಧಿಕಾ ಅವರು ಕೊಟ್ಟ ಮರೆಯಲಾಗದ ಉಡುಗೊರೆ ಏನು ಗೊತ್ತ...? - Karnataka's Best News Portal

ಕನ್ನಡ ಚಿತ್ರರಂಗದ ಮುದ್ದಾದ ಜೋಡಿ ರಾಕಿಂಗ್ ಸ್ಟಾರ್ ಯಶ್ ಹಾಗೂ ನಟಿ ರಾಧಿಕಾ ಪಂಡಿತ್ ದಂಪತಿ ತಮ್ಮ ನಾಲ್ಕನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದ್ದಾರೆ. ಯಶ್ ಮತ್ತು ನಟಿ ರಾಧಿಕಾ ಪಂಡಿತ್ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಇಂದಿಗೆ ನಾಲ್ಕು ವರ್ಷಗಳು ಕಳೆದಿದೆ ಈ ನಾಲ್ಕು ವರ್ಷಗಳ ವೆಡ್ಡಿಂಗ್ ಆನಿವರ್ಸರಿ ಹೇಗೆ ಆಚರಿಸಿದ್ದಾರೆ ಮತ್ತು ಯಶ್ ಅವರಿಗೆ ರಾಧಿಕಾ ಪಂಡಿತ್ ಕೊಟ್ಟಂತಹ ಉಡುಗೊರೆ ಏನೂ ನಾಲ್ಕನೇ ವರ್ಷದ ವೆಡ್ಡಿಂಗ್ ಫೋಟೋ ಹೇಗಿದೆ ಎಂಬ ಮಾಹಿತಿಯನ್ನು ತಿಳಿಸುತ್ತೇವೆ. ನಟಿ ರಾಧಿಕಾ ಪಂಡಿತ್ ಅವರು ಸಾಮಾಜಿಕ ಜಾಲತಾಣದಲ್ಲಿ ತಮ್ಮ ನಾಲ್ಕನೇ ವರ್ಷದ ವಿವಾಹ ವಾರ್ಷಿಕೋತ್ಸವದ ಫೋಟೋವನ್ನು ಹಂಚಿಕೊಂಡಿದ್ದಾರೆ. ಈ ಬಾರಿ ಯಶ್ ದಂಪತಿಗಳು ಮಕ್ಕಳು ಮತ್ತು ಕುಟುಂಬದ ಜೊತೆ ಮನೆಯಲ್ಲಿ ಸರಳವಾಗಿ ವಿವಾಹ ವಾರ್ಷಿಕೋತ್ಸವವನ್ನು ಸಂಭ್ರಮಿಸಿದ್ದಾರೆ. ಕೈನಲ್ಲಿ ಗುಲಾಬಿ ಹೂವಿನ ಗುಚ್ಚವನ್ನು ಹಿಡಿಯುವುದರ ಜೊತೆಗೆ ಪತ್ನಿ ರಾಧಿಕ ಅವರಿಗೆ.

ಸಿಹಿ ಮುತ್ತನ್ನು ನೀಡುತ್ತಿರುವ ಫೋಟೋವನ್ನು ರಾಧಿಕಾ ಪಂಡಿತ್ ಹಂಚಿಕೊಂಡಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ ಈ ಸುಂದರ ಫೋಟೋವನ್ನು ರಾಧಿಕಾ ಶೇರ್ ಮಾಡಿ ನನ್ನ ಪ್ರೀತಿಯ ಪತಿಗೆ ಧನ್ಯವಾದಗಳು‌. ಈ ದಿನವನ್ನು ಮತ್ತಷ್ಟು ವಿಶೇಷ ಗೊಳಿಸಿದ ಎಲ್ಲಾ ಅಭಿಮಾನಿಗಳಿಗೆ ಹಿತೈಷಿಗಳಿಗೆ ನಮ್ಮ ಕಡೆಯಿಂದ ಧನ್ಯವಾದ ಎಂದು ಹೇಳಿದ್ದಾರೆ. ಯಶ್ ಮತ್ತು ರಾಧಿಕಾ ದಂಪತಿಗಳಿಗೆ ಅಭಿಮಾನಿಗಳಿಂದ ಶುಭಾಶಯ ಮಹಾಪೂರವೇ ಹರಿದು ಬಂದಿದೆ. ಇನ್ನು ಈ ವೇಳೆಯಲ್ಲಿ ತಮ್ಮ ಪ್ರೀತಿಯ ಪತಿಗೆ ರಾಧಿಕಾ ಪಂಡಿತ್ ಅವರು ಒಂದು ಸನ್ ಗ್ಲಾಸ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ ಅಂತ ಹೇಳಲಾಗುತ್ತಿದೆ.

By admin

Leave a Reply

Your email address will not be published. Required fields are marked *