ಎಲ್ಐಸಿ ಜೀವನ್ ಲಾಭ್ ಪಾಲಿಸಿಯಲ್ಲಿ ಕಡಿಮೆ ಇನ್ವೆಸ್ಟ್ ಮೆಂಟ್ ಮಾಡಿ ಹೆಚ್ಚು ರಿಟರ್ನ್ಸ್ ಪಡೆಯುವಂತಹ ಅವಕಾಶಗಳು ಇದರಲ್ಲಿ ತುಂಬಾನೇ ಇದೆ. ನಿಮ್ಮ ಮಕ್ಕಳ ಮುಂದಿನ ಉನ್ನತ ವಿದ್ಯಾಭ್ಯಾಸ ಆಗಿರಬಹುದು, ಮದುವೆ ಆಗಿರಬಹುದು, ಅಥವಾ ನಿಮ್ಮ ರಿಟೈಂನ್ಮೆಂಟ್ ಫಂಡ್ ಅನ್ನು ತೆಗೆದುಕೊಳ್ಳುವುದಕ್ಕೆ ಈ ಪಾಲಿಸಿಯಲ್ಲಿ ಇನ್ವೆಸ್ಟ್ ಮೆಂಟ್ ಮಾಡಿದರೆ ಸಾಕು ನೀವು ಹೆಚ್ಚು ಬಂಡವಾಳವನ್ನು ಹಿಂಪಡೆಯ ಬಹುದಾಗಿದೆ. ಮೊದಲು ನೀವು ಎಲ್ಐಸಿ ಜೀವನ್ ಲಾಭ್ ಪ್ಲಾನ್ ಅನ್ನು ತೆಗೆದುಕೊಳ್ಳಬೇಕಾದರೆ ಮಿನಿಮಮ್ ಎಂಟು ವರ್ಷ ವಯಸ್ಸು ಕಂಪ್ಲೀಟ್ ಆಗಿರಬೇಕು ಅಥವಾ ನಿಮ್ಮ ವಯಸ್ಸು 59 ವರ್ಷದ ಒಳಗಿನ ಇರುವಂತಹ ವ್ಯಕ್ತಿಗಳು ಎಲ್ಐಸಿ ಜೀವನ್ ಲಾಭ್ ಪಾಲಿಸಿಯನ್ನು ತೆಗೆದುಕೊಳ್ಳಬಹುದಾಗಿದೆ. ಇಲ್ಲಿ ಮೂರು ವಿಧವಾದ ಟರ್ಮ್ಸ್ ಇರುತ್ತದೆ. ಅವುಗಳಲ್ಲಿ ನೀವು ಯಾವುದನ್ನೂ ಬೇಕಾದರೂ ಆಯ್ಕೆ ಮಾಡಿಕೊಳ್ಳಬಹುದು.
ಇದರಲ್ಲಿ ಮೊದಲನೇ ಟರ್ಮ್ಸ್ ವಿಧಾನವನ್ನು ನೋಡುವುದಾದರೇ 16 ವರ್ಷದ ಟರ್ಮ್ಸ್ ಪಾಲಿಸಿ, ಇನ್ನೂ ಎರಡನೇಯ ಟರ್ಮ್ಸ್ ಪಾಲಿಸಿ ನೋಡುವುದಾದರೆ 21 ವರ್ಷದ ಟರ್ಮ್ಸ್ ಇರುತ್ತದೆ, ಇನ್ನೂ ಮೂರನೇಯ ಟರ್ಮ್ಸ್ ವಿಧಾನವನ್ನು ನೋಡುವುದಾದರೇ ಇಲ್ಲಿ 25 ವರ್ಷಗಳ ಟರ್ಮ್ಸ್ ಪಾಲಿಸಿ ಇರುತ್ತದೆ. ಇಲ್ಲಿ ನೀವು ಯಾವುದಾದರೂ ಒಂದು ಟರ್ಮ್ಸ್ ಪಾಲಿಸಿಯನ್ನು ಸೆಲೆಕ್ಟ್ ಮಾಡಿಕೊಳ್ಳಬೇಕಾಗುತ್ತದೆ. 16 ವರ್ಷದ ಪಾಲಿಸಿ ಟರ್ಮ್ಸ್ ಸೆಲೆಕ್ಟ್ ಮಾಡಿದರೆ 10 ವರ್ಷ ಪ್ರೇಮಿಯಂ ಅನ್ನು ಕಟ್ಟಬೇಕಾಗುತ್ತದೆ. 21 ವರ್ಷದ ಟರ್ಮ್ಸ್ ಸೆಲೆಕ್ಟ್ ಮಾಡಿದರೆ ನೀವು 15 ವರ್ಷ ಪ್ರೇಮಿಯಂ ಅನ್ನು ಕಟ್ಟಬೇಕಾಗುತ್ತದೆ, ನೀವೇನಾದರೂ 25 ವರ್ಷದ ಟರ್ಮ್ಸ್ ಸೆಲೆಕ್ಟ್ ಮಾಡಿದರೆ 16 ವರ್ಷಸ ಪ್ರೇಮಿಯಂ ಅನ್ನು ಕಟ್ಟಬೇಕಾಗುತ್ತದೆ.
