ಸತ್ಯ ಧಾರಾವಾಹಿಯಲ್ಲಿ ನಟಿಸುತ್ತಿರುವ ನಾಯಕಿ ಯಾರು ಗೊತ್ತಾ ಅವರು ಕೂಡ ಸಿನಿಮಾದ ನಟಿ ಆಗಿದ್ದರೂ... - Karnataka's Best News Portal

ಜೀ ಕನ್ನಡ ವಾಹಿನಿಯಲ್ಲಿ ಹೊಸದಾಗಿ ಮೂಡಿ ಬರುತ್ತಿರುವ ಸತ್ಯ ಎಂಬ ಧಾರಾವಾಹಿಯೂ ಈಗಾಗಲೇ ಸಾಕಷ್ಟು ಜನಪ್ರಿಯತೆಯನ್ನು ಪಡೆದು ಕೊಂಡಿರುವ ಧಾರವಾಹಿ ಆಗಿದೆ. ಸತ್ಯ ಎಂಬ ಪಾತ್ರದಲ್ಲಿ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿರುವ ನಟಿಯ ಹೆಸರು ಗೌತಮಿ. ಇನ್ನೂ ಅವರಿಗೆ ಈಗಾಗಲೇ ಮದುವೆ ಆಗಿದೆಯಾ, ಸತ್ಯ ಸೀರಿಯಲ್ ಇವರ ಮೊದಲ ಧಾರಾವಾಹಿ ನಾ ಸಿನಿಮಾದಲ್ಲಿ ಕೂಡ ನಟಿಸಿದ್ದರ ಈ ಎಲ್ಲ ವಿಷಯಗಳ ಬಗ್ಗೆ ಸಂಕ್ಷಿಪ್ತ ಮಾಹಿತಿಯನ್ನು ತಿಳಿಸುತ್ತೇವೆ. ಸತ್ಯ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಟಿ ಗೌತಮಿ ಯಾದವ್ ಅವರು ಮರಾಠಿ ಮೂಲದ ಬೆಡಗಿಯಾಗಿದ್ದರು. 2012 ರಲ್ಲಿ ನಾಗರ ಪಂಚಮಿ ಎಂಬ ಧಾರಾವಾಹಿಯ ಮೂಲಕ ಕನ್ನಡ ಕಿರುತೆರೆಗೆ ಎಂಟ್ರಿ ನೀಡಿದ್ದರೂ ಅವರು ನಂತರ ಸ್ವಲ್ಪ ಬ್ರೇಕ್ ತೆಗೆದುಕೊಂಡು ಕಿರುತೆರೆಯಿಂದ ಬೆಳ್ಳಿತೆರೆಗೆ ಕಾಲಿಟ್ಟರು. ಕನ್ನಡ ಚಲನ ಚಿತ್ರಗಳಲ್ಲಿ ಒಂದಾದಂತಹ ಲೂಟಿ, ಮತ್ತು ಕಿನ್ನಾರೆ ಇದೇ ರೀತಿಯ ಹಲವಾರು ಸಿನಿಮಾಗಳಲ್ಲಿ ಇವರು ನಟನೆ ಮಾಡಿದ್ದಾರೆ.

ಅಷ್ಟೇ ಅಲ್ಲದೆ ಇವರು ತಮಿಳು ಸಿನಿಮಾ ಒಂದರಲ್ಲಿ ಬಣ್ಣ ಹಚ್ಚಿದರೆ. ನಂತರ 2018 ರಲ್ಲಿ ಅಭಿಷೇಕ್ ಕಾಸರಗೋಡು ಅವರೊಂದಿಗೆ ಗೌತಮಿ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟರು‌. ದೇವಿ ಪಾತ್ರದ ಚಿತ್ರದಲ್ಲಿ ಅಭಿನಯಿಸಬೇಕು ಎಂಬುದು ಅವರ ಮೂಲ ಉದ್ದೇಶ ಆಗಿದೆ ಈ ಒಂದು ಆಸೆ ಕನಸನ್ನು ಹೊತ್ತುಕೊಂಡಿದ್ದಾರೆ ಆದರೆ ಅವಕಾಶ ಸಿಕ್ಕಿಲ್ಲ. ಆದರೆ ಈಗ ಸತ್ಯ ಎಂಬ ಧಾರಾವಾಹಿಯಲ್ಲಿ ಸತ್ಯ ಎಂಬ ಪಾತ್ರದ ಮೂಲಕ ಮತ್ತೆ ಪ್ರೇಕ್ಷಕರಿಗೆ ಮನರಂಜನೆ ಕೊಡಲು ಕಿರುತೆರೆಗೆ ಪಾದಾರ್ಪಣೆ ಮಾಡಿದ್ದಾರೆ. ಗೌತಮಿ ಅವರ ಈ ಒಂದು ಕಿರುತೆರೆ ಜೀವನ ಯಶಸ್ವಿ ಪೂರ್ಣವಾಗಿ ಸಂಪೂರ್ಣ ವಾಗಲಿ ಎಂದು ಎಲ್ಲಾ ಅಭಿಮಾನಿಗಳು ಕೂಡ ಆಶಯವನ್ನು ವ್ಯಕ್ತಪಡಿಸಿದ್ದಾರೆ.

By admin

Leave a Reply

Your email address will not be published. Required fields are marked *