ಪುನೀತ್ ರಾಜಕುಮಾರ್ ಅವರು ಡಾಕ್ಟರ್ ವಿಷ್ಣುವರ್ಧನ್ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ರಂಗರಾಜ್ ಅವರಿಗೆ ಏನೆಂದು ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ ಗೊತ್ತಾ... - Karnataka's Best News Portal

ಡಾಕ್ಟರ್ ವಿಷ್ಣುವರ್ಧನ್ ಅವರ ಬಗ್ಗೆ ತೆಲುಗು ನಟ ವಿಜಯ ರಂಗ ರಾಜು ಅವರು ಅವಹೇಳನಕಾರಿಯಾಗಿ ಹೇಳಿಕೆಗಳನ್ನು ನೀಡಿರುವುದರ ವಿರುದ್ದ ಅನೇಕ ನಟ ನಟಿಯರು ಆಕ್ಷೇಪ ವ್ಯಕ್ತಪಡಿಸುತ್ತಿದ್ದರೆ. ಜಗ್ಗೇಶ್, ಕಿಚ್ಚ ಸುದೀಪ್, ಬಳಿಕ ಈಗ ಪುನೀತ್ ರಾಜಕುಮಾರ್ ಮಾತನಾಡುತ್ತಿದ್ದಾರೆ. ಡಾಕ್ಟರ್ ವಿಷ್ಣು ವರ್ಧನ್ ಅವರ ಬಗ್ಗೆ ಅವಹೇಳನಕಾರಿ ಮಾತುಗಳನ್ನು ಹೇಳಿರುವ ಟಾಲಿವುಡ್ ನಟ ವಿಜಯ ರಂಗರಜು ಕೂಡಲೇ ಕ್ಷಮೆ ಕೇಳಬೇಕು ಎಂದು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಒತ್ತಾಯಿಸಿದ್ದಾರೆ ಈ ಬಗ್ಗೆ ಟ್ವೀಟ್ ಮಾಡಿರುವ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ ಹಾಗೇ ಖಡಕ್ ಎಚ್ಚರಿಕೆಯನ್ನು ನೀಡಿದ್ದಾರೆ. ನಮ್ಮ ನಾಡಿನ ಮೇರು ನಟರಲ್ಲಿ ಒಬ್ಬರಾದ ವಿಷ್ಣು ಸರ್ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವುದು ಕಲಾವಿದ ಕ್ಷಮೆ ಕೇಳಿ ತನ್ನ ಮಾತುಗಳನ್ನು ಹಿಂಪಡೆಯಬೇಕು. ಭಾರತೀಯ ಚಿತ್ರರಂಗ ನಮ್ಮ ಎಲ್ಲಾ ಕಲಾವಿದರ ಒಂದು ಕುಟುಂಬ ಕಲೆಗೆ ಕಲಾವಿದರಿಗೆ ಗೌರವಿಸುವುದು ನಮ್ಮ ಕರ್ತವ್ಯ.

ಮೊದಲು ನೀ ಮಾನವನಾಗು ಎಂದು ಟ್ವಿಟ್ ಮಾಡುವ ಮೂಲಕ ವಿಜಯ್ ರಂಗ ರಾಜು ಅವರಿಗೆ ಎಚ್ಚರಿಕೆಯ ಸಂದೇಶ ನೀಡಿದ್ದಾರೆ. ಇನ್ನೊಂದು ಟ್ವಿಟ್ ನಲ್ಲಿ ಒಬ್ಬ ಕಲಾವಿದನ ಆಗಬೇಕಾದರೆ ಅವರಿಗೆ ಇರಬೇಕಾದದ್ದು ಮೊದಲ ಕರ್ತವ್ಯ ತನ್ನ ಸಹೋದ್ಯೋಗಿ ಕಲಾವಿದರ ಬಗ್ಗೆ ಗೌರವ ಹಾಗೂ ಪ್ರೀತಿಯನ್ನು ತೋರುವುದು ಯಾವುದೇ ಭಾಷೆಯ ನಟರಾದರೂ ಗೌರವ ನೀಡುವುದು ಮೊದಲು ಎಂದು ಪುನೀತ್ ರಾಜಕುಮಾರ್ ಹೇಳಿದ್ದಾರೆ. ಜೊತೆಗೆ ಅವರು ಬಳಸಿರುವ ರೆಸ್ಪೆಕ್ಟ್ ಆರ್ಟ್ ಆ್ಯಂಡ್ ಆರ್ಟಿಸ್ಟ್ ಸಕ್ಕತ್ ವೈರಲ್ ಆಗಿದೆ ಇವರ ಈ ಟ್ವಿಟ್ ಈಗ ವೈರಲ್ ಆಗುತ್ತಿದೆ ತೆಲುಗು ನಟನ ಹೇಳಿಕೆಯನ್ನು ಇಡಿ ರಾಜ್ಯದ ಜನತೆ ಸೋಷಿಯಲ್ ಮಿಡಿಯಾದಲ್ಲಿ ಖಂಡಿಸಿದ್ದಾರೆ.

By admin

Leave a Reply

Your email address will not be published. Required fields are marked *