ಸಾಮಾನ್ಯವಾಗಿ ಚಿಕ್ಕವರಿಂದ ಹಿಡಿದು ದೊಡ್ಡವರವರೆಗೂ ಕೊಡ ಬರುವಂತಹ ಅನಾರೋಗ್ಯ ಸಮಸ್ಯೆ ಎಂದರೆ ಕೆಮ್ಮು, ನೆಗಡಿ, ಕಫ ಇನ್ನೂ ಈ ಕೆಮ್ಮು, ನೆಗಡಿ, ಕಫ ಮಳೆಗಾಲದಲ್ಲಿ ಹಾಗೂ ಚಳಿಗಾಲದಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಈ ರೀತಿಯಾದಂತಹ ಅನಾರೋಗ್ಯ ಸಮಸ್ಯೆ ಬಂದಾಗ ಆಸ್ಪತ್ರೆಗೆ ಹೋಗುವ ಬದಲು ಮನೆಯಲ್ಲಿ ಇರುವಂತಹ ಕೆಲವೊಂದು ಪದಾರ್ಥಗಳನ್ನು ಬಳಸಿಕೊಂಡು ಮನೆಮದ್ದು ಮಾಡಿಕೊಂಡು ಸೇವಿಸಿ. ಇದರಿಂದಾಗಿ ಯಾವುದೇ ರೀತಿಯಾದಂತಹ ಆಸ್ಪತ್ರೆಗೆ ಹೋಗುವಂತಹ ಸಂಭವವಿರುವುದಿಲ್ಲ ಹಾಗೆ ಟ್ಯಾಬ್ಲೆಟ್ ಗಳನ್ನು ಕೂಡ ತೆಗೆದುಕೊಳ್ಳುವ ಅವಶ್ಯಕತೆ ಇರುವುದಿಲ್ಲ ಇನ್ನು ನೀವು ಈ ಮನೆ ಮದ್ದುಗಳನ್ನು ಸೇವಿಸುವುದರಿಂದ ಯಾವುದೇ ರೀತಿಯಾದಂತಹ ಅಡ್ಡ ಪರಿಣಾಮಗಳು ಉಂಟಾಗುವುದಿಲ್ಲ. ಇನ್ನು ವಿಚಾರಕ್ಕೆ ಬರುವುದಾದರೆ ಈ ಒಂದು ಮನೆ ಮನೆಗೆ ಬೇಕಾಗುವ ಪದಾರ್ಥವನ್ನು ನೋಡುವುದಾದರೆ. ವಿಳೇದೆಲೆ ಎರಡು, ಕಾಳುಮೆಣಸು ಎರಡು, ಒಂದು ಸಂಬಾರ್ ಈರುಳ್ಳಿ, ಐದರಿಂದ ಆರು ತುಳಸಿ ಎಲೆಗಳು ಬೇಕು.
ನಾವು ಈ ಮೇಲೆ ತಿಳಿಸಿರುವ ಅಷ್ಟು ಪದಾರ್ಥಗಳಲ್ಲಿ ಆಂಟಿಬಯೋಟಿಕ್ ಲಕ್ಷಣಗಳು ಹೆಚ್ಚಾಗಿ ಹೊಂದಿದೆ ಹಾಗಾಗಿ ಇವುಗಳನ್ನು ಸೇವಿಸುವುದರಿಂದ ನಿಮ್ಮ ನೆಗಡಿ, ಕಫ, ಶೀತಾ, ಉಸಿರಾಟ ಸಮಸ್ಯೆ ಏನೇ ಇದ್ದರೂ ಕೂಡ ಇದಕ್ಕೆ ಈ ಒಂದು ಮನೆ ಮದ್ದು ಪರಿಹಾರ ಅಂತನೇ ಹೇಳಬಹುದು. ಮೊದಲಿಗೆ ವಿಳೆದೆಲೆ ತೆಗೆದುಕೊಂಡು ಅದಕ್ಕೆ ತುಳಸಿ ಎಲೆಗಳು ಮತ್ತು ಕಾಳುಮೆಣಸನ್ನು ಈರುಳ್ಳಿಯನ್ನು ಹಾಕಿ ಅದನ್ನು ಫೋಲ್ಡ್ ಮಾಡಿ ಬಾಯಿಗೆ ಹಾಕಿ ಚೆನ್ನಾಗಿ ಜಗಿದು ಅದರ ರಸವನ್ನು ಸೇವಿಸುತ್ತ ಬಂದರೆ ಎಲ್ಲ ಸಮಸ್ಯೆಗಳಿಗೂ ಕೂಡ ಅನುಕೂಲವಾಗುತ್ತದೆ. ನಾವು ತಿಳಿಸಿದಂತ ಈ ವಿಧಾನವನ್ನು ಪ್ರತಿನಿತ್ಯ ಒಂದು ಬಾರಿ ಮಾಡಿದರೆ ಕೇವಲ ಮೂರೇ ದಿನದಲ್ಲಿ ನಿಮಗೆ ಇರುವಂತಹ ನೆಗಡಿ ಕೆಮ್ಮು ಉಪಶಮನವಾಗುತ್ತದೆ.
