ನೀವು ಮೂಲವ್ಯಾಧಿಯಿಂದ ಬಳಲುತ್ತಿದ್ದರಾ..!!ಮೂಲವ್ಯಾಧಿಗೆ ಇಲ್ಲಿದೆ ಶಾಶ್ವತ ಪರಿಹಾರ ಒಮ್ಮೆ ಈ ಮನೆ ಮದ್ದು ತಯಾರಿಸಿ ... - Karnataka's Best News Portal

ಮೂಲವ್ಯಾಧಿ ಇರುವವರಿಗೆ ಮನೆಯಲ್ಲಿ ಹತ್ತರಿಂದ ಹದಿನೈದು ದಿನದ ಒಳಗಾಗಿ ಪೂರ್ತಿಯಾಗಿ ಮೂಲವ್ಯಾಧಿ ಕ್ಲಿಯರ್ ಮಾಡುವಂತಹ ವಿಧಾನವನ್ನು ತಿಳಿಸುತ್ತೇವೆ. ನಾವು ತಿಳಿಸುವ ಈ ವಿಧಾನವನ್ನು ಚಾಚೂ ತಪ್ಪದೆ ಅನುಸರಿಸಿದರೆ ಕಂಡಿತವಾಗಿಯೂ ಮೂಲವ್ಯಾಧಿಯಿಂದ ಶಾಶ್ವತವಾಗಿ ಪರಿಹಾರ ಸಿಗುತ್ತದೆ. ಮೊದಲಿಗೆ ಎರಡು ಗ್ಲಾಸ್ ಅನ್ನು ತೆಗೆದುಕೊಂಡು ಒಂದು ಗ್ಲಾಸ್ ಗೆ ಒಂದು ಪೀಸ್ ಕಲ್ಲು ಸಕ್ಕರೆ ಅಂದರೆ 30 ಗ್ರಾಂ ಕಲ್ಲು ಸಕ್ಕರೆ ಹಾಗೂ 1 ಟೇಬಲ್ ಸ್ಪೂನ್ ಒಣದ್ರಾಕ್ಷಿಯನ್ನು ಹಾಕಿ, ಮತ್ತೊಂದು ಗ್ಲಾಸ್ ಗೆ ಒಂದು ಟೇಬಲ್ ಸ್ಪೂನ್ ಸಬ್ಜಾ ಬೀಜ ಅಥವಾ ಕಾಮಕಸ್ತೂರಿ ಬೀಜ ವನ್ನು ಹಾಕಿ ಹಾಗೂ ಒಂದು ಪೀಸ್ ಕಲ್ಲು ಸಕ್ಕರೆ ಹಾಕಿ ಈಗ ಎರಡು ಗ್ಲಾಸ್ ಗೂ ಕೂಡ ಕಾಲು ಲೀಟರ್ ನೀರನ್ನು ಸಮ ಪ್ರಮಾಣದಲ್ಲಿ ಹಾಕಿ. ಈ ಎರಡು ವಿಧಾನದಲ್ಲಿ ನೀವು ಯಾವುದಾದರೂ ಒಂದು ವಿಧಾನವನ್ನು ಮಾಡಿಕೊಂಡರೆ ಸಾಕು.

ರಾತ್ರಿ ಮಲಗುವ ಮುಂಚೆ ನಾವು ಹೇಳಿದಂತೆ ನೀರನ್ನು ಹಾಕಿ ಗ್ಲಾಸ್ ನಲ್ಲಿ ಇಟ್ಟು ಹಾಗೆ ಬಿಟ್ಟು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಇದನ್ನು ಮಿಕ್ಸ್ ಮಾಡಿ ಕುಡಿಯಿರಿ. ನಮ್ಮ ದೇಹದಲ್ಲಿ ಉಷ್ಣಾಂಶ ಜಾಸ್ತಿ ಆದಾಗ ಅಸಿಡಿಟಿ ಜಾಸ್ತಿಯಾದಾಗ ಮೂಲವ್ಯಾಧಿ ಸಮಸ್ಯೆ ಶುರುವಾಗುತ್ತದೆ. ಈ ಸಮಯದಲ್ಲಿ ನಾವು ನಮ್ಮ ದೇಹವನ್ನು ತಂಪಾಗಿ ಇಟ್ಟುಕೊಳ್ಳಬೇಕು ಮತ್ತೊಂದು ವಿಧಾನ ಗಟ್ಟಿ ಅವಲಕ್ಕಿ ಯನ್ನು ತೆಗೆದುಕೊಂಡು ಅದನ್ನು ನೀರಿನಲ್ಲಿ ತೊಳೆದು ಅದಕ್ಕೆ ಒಂದು ಕಪ್ ನೀರನ್ನು ಹಾಕಿ ಅರ್ಧ ಗಂಟೆಗಳ ಕಾಲ ನೆನೆಸಿ ಇಟ್ಟು ಅದರಲ್ಲಿರುವ ನೀರನ್ನು ತೆಗೆದು ಅದಕ್ಕೆ ಗಟ್ಟಿ ಮೊಸರನ್ನು ಹಾಕಿಕೊಂಡು ಮಿಕ್ಸ್ ಮಾಡಿ ಸ್ವಲ್ಪ ಉಪ್ಪು ಹಾಕಿ ಒಗ್ಗರಣೆ ಮತ್ತು ಕೊತ್ತಂಬರಿ ಸೊಪ್ಪನ್ನು ಹಾಕಿಕೊಂಡು ಮಿಕ್ಸ್ ಮಾಡಿ ಪ್ರತಿದಿನ ರಾತ್ರಿ ಊಟಕ್ಕಿಂತ ಮುಂಚೆ ಹಾಗೂ ಮಧ್ಯಾಹ್ನ ಊಟಕ್ಕೆ ಮುಂಚೆ ತೆಗೆದುಕೊಳ್ಳಬೇಕು.

By admin

Leave a Reply

Your email address will not be published. Required fields are marked *