ಕೇಂದ್ರ ರೇಷ್ಮೆ ಮತ್ತು ಕೃಷಿ ಇಲಾಖೆಯಿಂದ ಭರ್ಜರಿ ನೇಮಕಾತಿ 2020 ಶುರುವಾಗಿದೆ ತಪ್ಪದೆ ಅರ್ಜಿ ಸಲ್ಲಿಸಿ... - Karnataka's Best News Portal

ಸೆಂಟ್ರಲ್ ಸೆರಿಕಲ್ಚರಲ್ ಮತ್ತು ಟ್ರೈನಿಂಗ್ ಇನ್ಸ್ಟಿಟ್ಯೂಟ್ ಮೈಸೂರಿನಲ್ಲಿ ಖಾಲಿ ಇರುವ ನಾಲ್ಕು ಪ್ರಾಜೆಕ್ಟ್ ಅಸಿಸ್ಟೆಂಟ್ ಹುದ್ದೆಗಳಿಗೆ ಎರಡು ವರ್ಷ ಗುತ್ತಿಗೆ ಆಧಾರದ ಮೇಲೆ ನೇರ ಸಂದರ್ಶನದ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಡಿಸೆಂಬರ್ 19 ರಂದು ನಡೆಯಲಿರುವ ನೇರ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದು. ಉದ್ಯೋಗ ಸ್ಥಳ ಮೈಸೂರು ವಿದ್ಯಾರ್ಹತೆ ಬಿಎಸ್ಸಿ ಅಗ್ರಿಕಲ್ಚರ್ ಆರ್ಟ್, ಸೆರಿ, ಅಗ್ರಿ ಮಾರ್ಕೆಟ್, ಡೈರಿ ಮತ್ತು ಎಂಬಿಎಂ ವಿದ್ಯಾ ಅರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳು ನೇರ ಸಂದರ್ಶನಕ್ಕೆ ಹಾಜರಾಗಬಹುದು. ಅಭ್ಯರ್ಥಿಗಳಿಗೆ ಯಾವುದೇ ರೀತಿಯ ಅರ್ಜಿ ಶುಲ್ಕಗಳು ಇರುವುದಿಲ್ಲ ಇನ್ನು ವಯೋಮಿತಿಯನ್ನು ನೋಡುವುದಾದರೆ ಅಕ್ಟೋಬರ್ 31 2020 ರ ಅನ್ವಯ ಕನಿಷ್ಠ 18 ವರ್ಷ ಗಳನ್ನು ಪೂರ್ಣಗೊಳಿಸಬೇಕು. ಮತ್ತು ಗರಿಷ್ಠ 25 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ನೇರ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದಾಗಿದೆ.

ಹಾಗೂ ಪರಿಶಿಷ್ಟ ಜಾತಿ, ಮತ್ತು ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗದವರು, ಅಂಗವಿಕಲ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಐದು ವರ್ಷಗಳ ವಯೋಮಿತಿ ಸಡಿಲಿಕೆ ಯನ್ನು ನೀಡಲಾಗಿರುವುದು. ಹುದ್ದೆಗೆ ಅಭ್ಯರ್ಥಿಗಳನ್ನು ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ. ಇನ್ನು ವೇತನ ಶ್ರೇಣಿಯನ್ನು ನೋಡುವುದಾದರೆ ಹುದ್ದೆಗೆ ಆಯ್ಕೆಯಾದ ಇನ್ನೂ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು 12 ಸಾವಿರ ರೂಪಾಯಿಗಳ ವೇತನವನ್ನು ನೀಡಲಾಗುತ್ತದೆ. ಅಗತ್ಯ ಮೂಲ ದಾಖಲಾತಿಗಳನ್ನು ಲಗತ್ತಿಸಿ ಡಿಸೆಂಬರ್ 19 2020 ರಂದು ಬೆಳಗ್ಗೆ ಒಂಬತ್ತು ಮೂವತ್ತಕ್ಕೆ ನಡೆಯುವ ನೇರ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದು. ಕಚೇರಿಯ ಸ್ಥಳವನ್ನು ನೋಡುವುದಾದರೆ ಸೆಂಟ್ರಲ್ ಸರ್ಕುಲರ್ ರಿಸರ್ಚ್ ಅಂಡ್ ಟ್ರೈನಿಂಗ್ ಇನ್ಸ್ಟಿಟ್ಯೂಟ್ ಸೆಂಟ್ರಲ್ ಸಿಲ್ಕ್ ಬೋರ್ಡ್ ಮಿನಿಸ್ಟರಿ ಆಫ್ ಟೆಕ್ಸ್ಟೈಲ್ ಗೌರ್ನಮೆಂಟ್ ಆಫ್ ಇಂಡಿಯಾ ಶ್ರೀರಾಂಪುರ ಮೈಸೂರು.

By admin

Leave a Reply

Your email address will not be published. Required fields are marked *