ನಮ್ಮ ಮನೆಯಲ್ಲಿ ನಾವು ಅಡಿಗೆ ಮಾಡುವಾಗ ಯಾವುದಾದರೂ ಯೋಚನೆಯಲ್ಲಿ ಗ್ಯಾಸ್ ಮೇಲೆ ಇಟ್ಟಿರುವ ಪದಾರ್ಥವನ್ನು ಮರೆತು ಯೋಚನೆ ಮಾಡುತ್ತಿರುತ್ತೇವೆ ಅದರಲ್ಲಿರುವ ಪದಾರ್ಥ ಪಾತ್ರೆ ಅಡಿಯಲ್ಲಿ ಕರಿಯಾಗಿ ಉಳಿದುಕೊಂಡಿರುತ್ತದೆ ಅದನ್ನು ತೆಗೆಯುವ ಸುಲಭವಾದ ಸಲಹೆ ಇಲ್ಲಿದೆ ನೋಡಿ. ಎಂತ ಕರಟಿರ ಪಾತ್ರೆ ಇರಬಹುದು ಎಷ್ಟೇ ಬರ್ನ್ ಆಗಿರಬಹುದು. ಏನು ಕಷ್ಟ ಇಲ್ಲದೆ ಮತ್ತೆ ಹೊಸದಾಗಿ ಹೊಳೆಯುವಂತೆ ಮಾಡುವುದು ಇದಕ್ಕೆ ಏನು ಮಾಡಬಹುದು.ಮೊದಲಿಗೆ ಆ ಪಾತ್ರೆಯನ್ನು ಸ್ಟವ್ ಮೇಲೆ ಇಡಿ ನಂತರ ಅದಕ್ಕೆ ನಾವು ನೀರು ಹಾಕಿಕೊಳ್ಳಬೇಕು . ಕರಟಿ ಹಾಗಿರುವ ಕರೆ ಎಲ್ಲಿತನಕ ಇದಿಯೋ ಅದರ ಮೇಲೆ ಸ್ವಲ್ಪ ಬರುವಷ್ಟು ನೀರನ್ನು
ಹಾಕಿಕೊಳ್ಳಬೇಕು ಅದಾದ ನಂತರ ನೀರಿನ ಒಳಗೆ ಬಟ್ಟೆ ಒಗೆಯುವ ಡಿಟರ್ಜೆಂಟ್ ಪೌಡರನ್ನು ಹಾಕಬೇಕು. ಯಾವ ಡಿಟರ್ಜೆಂಟ್ಪೌ
ಡರನ್ನು ಬೇಕಾದರೆ ಯೂಸ್ ಮಾಡಬಹುದು ಒಂದು ಅರ್ಧ ಅಥವಾ ಮುಕ್ಕಾಲು ಚಮಚ ಹಾಕಿಕೊಳ್ಳಬೇಕು ನಂತರ ಆ ನೀರನ್ನು ಚೆನ್ನಾಗಿ ಕುದಿಸಬೇಕು.ಅದು ಪೂರ್ತಿಯಾಗಿ ಕುದಿದ ನಂತರ
ಉರಿಯನ್ನು ಸಣ್ಣ ಮಾಡಬೇಕು. ಸಣ್ಣ ಉರಿಯಲ್ಲಿ ಎಂಟರಿಂದ ಹತ್ತು ನಿಮಿಷ ಕುದಿಯಬೇಕು. ನೀರು ಕುದಿ ತಿದ್ದ ಹಾಗೆ ಪಾತ್ರೆಯಲ್ಲಿರುವ ಕರೆಯಲ್ಲ ಮೇಲೆ ಬರುತ್ತದೆ. 10 ನಿಮಿಷ ಆದಮೇಲೆ ಸ್ಟವ್ ಆಫ್ ಮಾಡಿ ಪಾತ್ರೆಯಲ್ಲಿರುವ ನೀರು ಆರಲು ಬಿಡಿ. ಅಷ್ಟೊತ್ತಿಗೆ ಡಿಟರ್ಜೆಂಟ್ ಪೌಡರ್ ನಿಂದ ಪಾತ್ರೆಯಲ್ಲಿರುವ ಕರೆಯಲ್ಲ ಸಾಫ್ಟ್ ಆಗಿ ಬಿಟ್ಟಿರುತ್ತದೆ. ನೀರನ್ನು ಹೊರಗಡೆ ಚೆಲ್ಲಿ ಪಾತ್ರೆಯಲ್ಲಿರುವ ಕರ ಎಲ್ಲ ಸಾಫ್ಟ್ ಆಗಿ ಬಂದಿರುತ್ತದೆ ಅದನ್ನು ಒಂದು ಚಮಚದಿಂದ ತೆಗೆಯಬಹುದು. ಅದಾದ ನಂತರ ಪಾತ್ರೆಯನ್ನು ಚೆನ್ನಾಗಿ ತೊಳೆಯಿರಿ. ನಂತರ ಪಾತ್ರೆ ಹೊಸದರಂತೆ ಕಾಣುತ್ತದೆ.
