ನಿಮ್ಮ ಮನೆಯಲ್ಲಿಯೇ ಪರ್ಮನೆಂಟ್ಯಾಗಿ ನಿಮ್ಮ ಕೂದಲನ್ನು ಕಾಪಾಡಿಕೊಳ್ಳು ವುದು ಹೇಗೆ ಮಿಸ್ ಮಾಡ್ದೆ ನೋಡಿ..? » Karnataka's Best News Portal

ನಿಮ್ಮ ಮನೆಯಲ್ಲಿಯೇ ಪರ್ಮನೆಂಟ್ಯಾಗಿ ನಿಮ್ಮ ಕೂದಲನ್ನು ಕಾಪಾಡಿಕೊಳ್ಳು ವುದು ಹೇಗೆ ಮಿಸ್ ಮಾಡ್ದೆ ನೋಡಿ..?

ಸಾಮಾನ್ಯವಾಗಿ ಎಲ್ಲಾ ಹೆಣ್ಣು ಮಕ್ಕಳಿಗೂ ತಮ್ಮ ಕೂದಲು ರೇಷ್ಮೆಯಂತೆ ನೈಸಾಗಿ ತೆಳುವಾಗಿ ತುಂಬಾ ಚೆನ್ನಾಗಿ ಕಾಣಬೇಕು ಎಂದು ಇಷ್ಟಪಡುತ್ತಾರೆ ಅದನ್ನು ಯಾವ ರೀತಿ ಮಾಡಿಕೊಳ್ಳಬೇಕು ಅದು ಮನೆಯಲ್ಲಿ ಸಿಗುವಂತ ವಸ್ತುಗಳನ್ನು ಬಳಸಿ ಇದರ ಬಗ್ಗೆ ತಿಳಿದುಕೊಳ್ಳೋಣ. ಮೊದಲು ಒಂದು ಬಟ್ಟಲಿನಲ್ಲಿ ಅನ್ನವನ್ನು ತೆಗೆದುಕೊಳ್ಳಿ. ಮೊದಲೇ ಬೇಯಿಸಿ ಅದನ್ನು ಇಟ್ಟುಕೊಂಡಿದ್ದೇನೆ. ಇದಕ್ಕೆ ಯಾವ ಅಕ್ಕಿ ಬೇಕಾದರೂ ಉಪಯೋಗಿಸಿಕೊಳ್ಳಬಹುದು. ನಿಮ್ಮ ಕೂದಲು ಎಷ್ಟು ಉದ್ದ ಇದೆಯಾ ಅದನ್ನು ನೋಡಿ ಎಷ್ಟು ಬೇಕು ಅಷ್ಟು ತೆಗೆದುಕೊಂಡು ಇದು ಇದು ನಿಮ್ಮ ಕೂದಲನ್ನು ಸ್ಟೀಫ್ಆಗಿ ಮಾಡುತ್ತದೆ ಮತ್ತು ಸೂಪರಾಗಿ ಸ್ಟ್ರೈಟ್ ಮಾಡುತ್ತದೆ.
ಒಂದು ಮಿಕ್ಸಿ ಬಟ್ಟಲಿಗೆ ಅನ್ನವನ್ನು ಹಾಕಿ ಅದರ ಜೊತೆಗೆ ಒಂದು ಬಟ್ಟಲು ತೆಂಗಿನಹಾಲು ಹಾಕಿ ನಿಮ್ಮ ಕೂದಲು ಎಷ್ಟೇ ಒರಟಾಗಿದ್ದರು ಇದು ಸರಿ ಮಾಡುತ್ತದೆ. ನಿಮ್ಮ ಕೂದಲಿಗೆ ಒಳ್ಳೆ ಶೈನಿಂಗ್ ಲುಕ್ ಅನ್ನು ಕೊಡುತ್ತದೆ. ಈಗ ಇವೆರಡನ್ನು ಮಿಕ್ಸಿಯಲ್ಲಿ ಹಾಕಿ ಪೇಸ್ಟ್ ರೀತಿ ಚೆನ್ನಾಗಿ ರುಬ್ಬಿಕೊಳ್ಳಬೇಕು. ಸ್ವಲ್ಪ ಕೂಡ ನೀರನ್ನು ಸೇರಿಸಲೇ ಬಾರದು. ನೀವು ಬರಿ ತೆಂಗಿನ ಹಾಲನ್ನು ಸೇರಿಸಿ ಮಾತ್ರ ವೇಸ್ಟ್ ತಯಾರಿಸಿಕೊಳ್ಳಬೇಕು. ಈಗ ಚೆನ್ನಾಗಿ ರುಬ್ಬಿಕೊಂಡ ಆಗಿದೆ ಈ ರೀತಿ ಪೇಸ್ಟ್ ರೀತಿ ಇರಬೇಕು. ತುಂಬಾ ದಪ್ಪನು ಇಲ್ಲದೆ ತುಂಬಾ ತೆಳು ಇಲ್ಲದೆ ಒಂದು ಕ್ರೀಮ್ ರೀತಿ ಸಿಗಬೇಕು. ಈ ಅದಕ್ಕೆ ಬರುವ ರೀತಿ ನೀವು ರುಬ್ಬಿಕೊಳ್ಳಬೇಕು.ಇದನ್ನು ಈಗ ಒಂದು ಬಟ್ಟಲಿಗೆ ಹಾಕಿಕೊಳ್ಳಬೇಕು. ಇದರ ಜೊತೆಗೆ ಸ್ವಲ್ಪ ಮೊಸರನ್ನು ಸೇರಿಸುತ್ತೇನೆ. ನಾನು ಇಲ್ಲಿ ಇದಕ್ಕೆ ಒಂದು ಚಮಚ ಮೊಸರನ್ನು ಸೇರಿಸುತ್ತೇನೆ.

See also  ಅಗಸೆ ಬೀಜ ತಿನ್ನುತ್ತಿದ್ದೀರಾ ? ಎಚ್ಚರ ಕೊಲೆಸ್ಟರಾಲ್‌ ಕಡಿಮೆ ಆಗುತ್ತಾ ? ದೇಹಕ್ಕೆ ಇದರಿಂದ ಏನೆಲ್ಲಾ ಹಾನಿ ನೋಡಿ

ಮೊಸರು ನಿಮ್ಮ ಕೂದಲಿಗೆ ಸೂಪರಾಗಿ ಮಾಸ್ತಿರ್ರೈಜ್ ಮಾಡುತ್ತದೆ. ನಿಮ್ಮ ಕೂದಲು ತುಂಬ ಸಾಫ್ಟ್ ಆಗಿ ಸಿಲ್ಕಿ ಆಗಿ ಕಾಣಲು ತುಂಬಾ ಸಹಾಯ ಮಾಡುತ್ತದೆ. ಇದರ ಜೊತೆಗೆ ಎರಡು ಚಮಚ ತೆಂಗಿನ ಎಣ್ಣೆ ಸೇರಿಸಿಕೊಳ್ಳಿ ನಿಮ್ಮ ಕೂದಲು ಎಷ್ಟೇ ಡ್ಯಾಮೇಜ್ ಆಗಿದ್ದರು ತೆಂಗಿನ ಎಣ್ಣೆ ಪೂರ್ತಿಯಾಗಿ ಕ್ಲಿಯರ್ ಮಾಡುತ್ತದೆ. ನಿಮ್ಮ ಕೂದಲು ತುಂಬಾ ಸ್ಟ್ರಾಂಗ್ ಆಗಿ ಶೈನಿ ಯಾಗಿ ಬೆಳೆಯಲು ಸಹಾಯಮಾಡುತ್ತದೆ. ಈಗ ನಮ್ಮ ತಲೆಕೂದಲಿನ ಕ್ರೀಮ್ ತಯಾರಾಗಿದೆ ಇದನ್ನು ಹೇಗೆ ಹಚ್ಚಿಕೊಳ್ಳುವುದು ನೋಡೋಣ ಇದನ್ನು ಹಚ್ಚುವ ಮೊದಲು ನನ್ನ ಕೂದಲು ಹೇಗಿದೆ ನೋಡಿ ತುಂಬಾ ಕರ್ಲಿ ಆಗಿ ಇದೆ. ಈ ಕ್ರೀಮನ್ನು ಹಚ್ಚುವ ಮೊದಲು ನಮ್ಮ ಕೂದಲನ್ನು ಸ್ವಲ್ಪಸ್ವಲ್ಪವಾಗಿ ಭಾಗ ಮಾಡಿಕೊಳ್ಳಬೇಕು. ಅದಕ್ಕೆ ನಾವು ಮಾಡಿಕೊಂಡಿರುವ ಕ್ರೀಮ್ ಅನ್ನು ಹಚ್ಚಬೇಕು. ಇದನ್ನು ಬರೀ ಕೂದಲಿಗೆ ಮಾತ್ರ ಹಚ್ಚಬೇಕು ಕೂದಲ ಬುಡಕ್ಕೆ ಹಚ್ಚಬಾರದು. ಇದನ್ನು ಹಚ್ಚಿದ ಮೇಲೆ ನಿಮ್ಮ ಕೂದಲನ್ನು ಮೇಲೆ ಎತ್ತಿ ಕಟ್ಟಬಾರದು ಹಾಗೆ ಡ್ರೈ ಆಗಲು ಬಿಡಬೇಕು ಅರ್ಧಗಂಟೆ ಒಣಗಲು ಬಿಡಬೇಕು. ನಂತರ ತಲೆ ಸ್ನಾನ ಮಾಡಬಹುದು. ನೀವೇ ನೋಡಿ ಈಗ ನನ್ನ ಕೂದಲು ಎಷ್ಟು ಸಾಫ್ಟ್ ಆಗಿ ಸೈನ್ ಆಗಿ ಕಾಣುತ್ತಿದೆ ಅಂತ ನೀವು ನಿಮ್ಮ ಮನೆಯಲ್ಲಿ ಈ ಕ್ರೀಮ್ ಅನ್ನು ತಯಾರಿಸಿ ಉಪಯೋಗಿಸಿ ನೋಡಿ ನಿಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ.

WhatsApp Group Join Now
Telegram Group Join Now


crossorigin="anonymous">