ರಾಘವೇಂದ್ರ ಸ್ವಾಮಿಗೆ ಯಾವುದೇ ರೀತಿಯ ಆಡಂಬರದ ಪೂಜೆ ಮಾಡಬಾರದು ನಾವು ರಾಘವೇಂದ್ರ ಸ್ವಾಮಿಗೆ ತುಂಬಾ ಪ್ರಿಯವಾದ ತುಳಸಿ ಮಾಲೆ ಹಾಗೂ ಅಕ್ಷತೆ ಮತ್ತು ಗಂಧ ಇದ್ದರೆ ಸಾಕು ರಾಘವೇಂದ್ರ ಸ್ವಾಮಿಯ ಪೂಜೆಯನ್ನು ಮಾಡಬಹುದು. ಪ್ರತಿ ಗುರುವಾರ ಬೆಳಗಿನ ಜಾವ ಆರು ಗಂಟೆಯ ಒಳಗೆ ನೀವು ಪೂಜೆ ಮಾಡುವುದರಿಂದ ತುಂಬ ಒಳ್ಳೆಯದು ಆಗುತ್ತದೆ. ಮನೆಯಲ್ಲಿ ಯಾವಾಗಲೂ ರಾಘವೇಂದ್ರ ಸ್ವಾಮಿ ಫೋಟೋ ಹಾಗೂ ಸಾಯಿಬಾಬಾ ಫೋಟೋ ಮತ್ತು ಅನ್ನಪೂರ್ಣೇಶ್ವರಿ ದೇವಿಯ ಫೋಟೋ ಅಥವಾ ವಿಗ್ರಹಗಳನ್ನು ಇರುವುದರಿಂದ ತುಂಬಾ ಒಳ್ಳೆಯದು. ಮಕ್ಕಳಿರುವ ಮನೆಯಲ್ಲಿ ದೇವರ ಅನುಗ್ರಹ ಇರುತ್ತದೆ ಹಾಗೆಯೇ ಗುರುಗಳ ಅನುಗ್ರಹ ಕೂಡ ಇರಬೇಕು ಹಾಗಾಗಿ ಈ ಮೂರು ದೇವರ ಫೋಟೋ ಅಥವಾ ವಿಗ್ರಹವನ್ನು ನಿಮ್ಮ ಮನೆಯಲ್ಲಿ ಇಡಿ. ಇನ್ನೂ ನಿಮಗೆ ಜೀವನದಲ್ಲಿ ಯಾವುದೇ ರೀತಿಯ ಕಷ್ಟಗಳು ಬಂದರೂ ಕೂಡ ಅನ್ನಕ್ಕೆ ತೊಂದರೆಯಾಗಬಾರದು ಹಾಗಾಗಿ
ಅನ್ನಪೂರ್ಣೇಶ್ವರಿ ದೇವಿಯ ವಿಗ್ರಹ ಇಟ್ಟು ಪೂಜೆ ಮಾಡಬೇಕು.
ಇನ್ನೂ ಗುರುವಾರದ ದಿನ ನೀವು ಯಾವುದೇ ಕಾರಣಕ್ಕೂ ಮಾಂಸಾಹಾರ ಸೇವನೆ ಮಾಡಬಾರದು ಹಾಗೂ ಈ ದಿನ ನೋವು ತಲೆಗೆ ಸ್ನಾನ ಮಾಡಬೇಕು ತುಂಬಾ ಮಡಿಯಿಂದ ಪೂಜೆಯನ್ನು ಮಾಡಬೇಕು. ಇನ್ನೂ ರಾಘವೇಂದ್ರ ಸ್ವಾಮಿ ಅವರಿಗೆ ಹೆಸರು ಬೇಳೆ ಪಾಯಸ ಮತ್ತು ಮೊಸರು ಅನ್ನ ಎಂದರೆ ತುಂಬಾನೇ ಪ್ರೀತಿ ಹಾಗಾಗಿ ನಿಮಗೆ ಇವೆಲ್ಲವನ್ನು ಮಾಡುವ ಶಕ್ತಿ ಇದೆ ಅಂದರೆ ಹೆಸರು ಬೇಳೆ ಪಾಯಸವನ್ನು ಮಾಡಿ ಅದನ್ನು ನೈವೇದ್ಯಕ್ಕೆ ಇಡಬಹುದು. ಗುರುವಾರದ ದಿನ ಒಂದು ಹೊತ್ತಿನ ಉಪವಾಸ ಮಾಡಿ ಇನ್ನೂ ಈ ವ್ರತವನ್ನು 21 ವಾರ ಅಥವಾ 11 ವಾರ ಮಾಡಬಹುದು. ರಾಘವೇಂದ್ರ ಸ್ವಾಮಿಯವರಿಗೆ ಪ್ರದಕ್ಷಿಣೆ ಹಾಕುವುದರಿಂದ ಒಳ್ಳೆಯದು ಹಾಗಾಗಿ 21 ಹೆಜ್ಜೆ ನಮಸ್ಕಾರ ಮಾಡಿ ಮನೆಯಲ್ಲಿಯೇ ಈ ಒಂದು ವಿಧಾನವನ್ನು ಅನುಸರಿಸಿ.
