ಬೇಕಾಗುವ ಪದಾರ್ಥ ಒಂದು ಕಪ್ ಮೈದಾ, ಎರಡು ಟೇಬಲ್ ಸ್ಪೂನ್ ಸಕ್ಕರೆ ಪೌಡರ್, ಕಾಲು ಕಪ್ ಮೊಸರು, ಎರಡು ಟೇಬಲ್ ಸ್ಪೂನ್ ಹಾಲು, ಚಾಕೊಲೇಟ್ ನಿಂ ಮಾಡಿದಂತಹ ಸಿರಪ್, ಬೇಕಿಂಗ್ ಸೋಡಾ ಕಾಲು ಟೇಬಲ್ ಸ್ಪೂನ್, ಬೇಕಿಂಗ್ ಪೌಡರ್ ಅರ್ಧ ಟೇಬಲ್ ಸ್ಪೂನ್, ಒಂದು ಟೇಬಲ್ ಸ್ಪೂನ್ ಬಟರ್ ಹಾಗೂ ಕರಿಯಲು ಎಣ್ಣೆ. ಡೋನಟ್ ಮಾಡುವ ವಿಧಾನ ಮೊದಲಿಗೆ ಒಂದು ಬೌಲ್ ಗೆ ಮೈದಾ ಹಿಟ್ಟು ಹಾಕಿ ನಂತರ ಅದಕ್ಕೆ ಸಕ್ಕರೆ ಪೌಡರ್ ಬೇಕಿಂಗ್ ಸೋಡಾ, ಬೇಕಿಂಗ್ ಪೌಡರ್, ಮೊಸರು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಸ್ವಲ್ಪ ಸ್ವಲ್ಪವೇ ಹಾಲನ್ನು ಹಾಕಿ ಮಿಕ್ಸ್ ಮಾಡಿ ಅದಕ್ಕೆ ಬಟ್ಟರ್ ಹಾಕಿ ಸಾಫ್ಟ್ ಆಗಿ ಕಲಸಿಕೊಂಡು
20 ನಿಮಿಷಗಳ ಕಾಲ ಹಾಗೆಯೇ ನೆನೆಯಲು ಬಿಡಿ 20 ನಿಮಿಷದ ನಂತರ ಮತ್ತೊಮ್ಮೆ ಅದನ್ನು ಮಿಕ್ಸ್ ಮಾಡಿಕೊಂಡು ಚೆನ್ನಾಗಿ ನಾದಿಕೊಂಡು ಅದಕ್ಕೆ ಸ್ವಲ್ಪ ಮೈದಾ ಹಿಟ್ಟನ್ನು ಹಾಕಿಕೊಂಡು ಚಪಾತಿ ಆಕಾರಕ್ಕೆ ಲಟ್ಟಿಸಿ ಕೊಳ್ಳಬೇಕು ನಂತರ ಒಂದು ಗ್ಲಾಸ್ ನ ಸಹಾಯದಿಂದ ರೌಂಡ್ ಆಕಾರಕ್ಕೆ ಕಟ್ ಮಾಡಿಕೊಳ್ಳಿ. ಮತ್ತೊಂದು ಕಡೆ ಒಂದು ಬಾಣಲೆಗೆ ಎಣ್ಣೆಯನ್ನು ಹಾಕಿ ಎಣ್ಣೆ ಕಾದ ನಂತರ ಅದಕ್ಕೆ ರೌಂಡ್ ಶೇಪ್ ಗೆ ಕಟ್ ಮಾಡಿಕೊಂಡಿರುವಂತಹ ಡೋನೆಟ್ ಅನ್ನು ಎಣ್ಣೆಯಲ್ಲಿ ಹಾಕಿ ಲೋ ಫ್ಲೇಮ್ ನಲ್ಲಿ ಚೆನ್ನಾಗಿ ಬೇಯಿಸಿಕೊಳ್ಳಿ ನಂತರ ಇದಕ್ಕೆ ಚಾಕಲೇಟ್ ಸಿರಪ್ ಹಾಕಿ ಅದರ ಮೇಲೆ ಸ್ಪ್ರೈಕಲ್ಸ್ ಹಾಕಿದರೆ ರುಚಿಯಾದ ಡೋನೆಟ್ ಸಿದ್ದವಾಗುತ್ತದೆ.
