ಚಿಕನ್ ಮಟನ್ ಅಂದ್ರೇ ಅಣ್ಣಾವ್ರಿಗೆ ಎಲ್ಲಿಲ್ಲದ ಪಂಚಪ್ರಾಣ ತುಂಬಾ ಫೇವರೆಟ್ ಆಗಿತ್ತು.. ಮಿಸ್ ಮಾಡ್ದೆ ನೋಡಿ... - Karnataka's Best News Portal

ಚಿಕನ್ ಮಟನ್ ಅಂದ್ರೇ ಅಣ್ಣಾವ್ರಿಗೆ ಎಲ್ಲಿಲ್ಲದ ಪಂಚಪ್ರಾಣ ತುಂಬಾ ಫೇವರೆಟ್ ಆಗಿತ್ತು.. ಮಿಸ್ ಮಾಡ್ದೆ ನೋಡಿ…

ಕನ್ನಡದ ವರನಟ ಡಾಕ್ಟರ್ ರಾಜಕುಮಾರ್ ಅವರ ಕನ್ನಡದಲ್ಲಿ ಸುಮಾರು ಇನ್ನೂರಕ್ಕೂ ಅಧಿಕ ಚಿತ್ರಗಳಲ್ಲಿ ನಾಯಕ ನಟರಾಗಿ ನಟಿಸಿದ್ದಾರೆ. ಅವರ ಕೊನೆಯ ಚಿತ್ರ ಶಬ್ದವೇದಿ ಅಪಾರ ಜನಸಂಖ್ಯೆಯಲ್ಲಿ ಅಭಿಮಾನಿಗಳ ಬಳಗವನ್ನು ಹೊಂದಿರುವಂತಹ ಏಕೈಕ ಅಂದರೆ ಅದು ವರನಟ ರಾಜ್ ಕುಮಾರ್ ಅಂತಾನೆ ಹೇಳಬಹುದು‌. ರಾಜಕುಮಾರ್ ಅವರ ಮಕ್ಕಳ ಆದಂತಹ ಡಾಕ್ಟರ್ ಶಿವರಾಜಕುಮಾರ್, ಡಾಕ್ಟರ್ ರಾಘವೇಂದ್ರ ರಾಜಕುಮಾರ್, ಹಾಗೂ ಪುನೀತ್ ರಾಜಕುಮಾರ್ ಈ ಮೂರು ಜನರು ಕೂಡ ಸಿನಿಮಾರಂಗದಲ್ಲಿ ಯಶಸ್ವಿ ಪೂರ್ಣವಾದ ನಾಯಕರಾಗಿ ಅಭಿನಯಿಸುತ್ತಿದ್ದಾರೆ. ಇನ್ನು ಪುನೀತ್ ರಾಜಕುಮಾರ್ ಅವರ ಮೊದಲ ಸಿನಿಮಾ ಆದಂತಹ ಅಪ್ಪು ಎಂಬ ಚಿತ್ರದಲ್ಲಿ ಹೀರೋಯಿನ್ ಅಪ್ಪನ ಪಾತ್ರದಲ್ಲಿ ನಟ ಸತ್ಯಜಿತ್ ಅವರಿಗೆ ಪಾತ್ರವನ್ನು ಕೊಡಬೇಕು ಎಂದು ನಟ ರಾಜಕುಮಾರ್ ಅವರು ಆಗ್ರಹಿಸಿದ್ದಾರೆ. ಒಮ್ಮೆ ಸತ್ಯಜಿತ್ ಅವರನ್ನು ಮನೆಗೆ ಕರೆದು ಈ ಪಾತ್ರವನ್ನು ನೀನೇ ಮಾಡಬೇಕು ಅಂತ ಸತ್ಯಜಿತ್ ಅವರಿಗೆ ಹೇಳಿದ್ದರಂತೆ.

ಇನ್ನು ಸತ್ಯಜಿತ್ ಅವರ ಜೊತೆ ಅಣ್ಣಾವ್ರ ಒಡನಾಟ ಬಹಳ ಚೆನ್ನಾಗಿತ್ತು. ಅಪ್ಪು ಸಿನಿಮಾದಲ್ಲಿ ಶೂಟಿಂಗ್ ಮಾಡಬೇಕಾದರೆ ಅಣ್ಣಾವ್ರು ಪ್ರತಿದಿನ ಶೂಟಿಂಗ್ ಸ್ಪಾಟಿಗೆ ಬರುತ್ತಿದ್ದರಂತೆ ಅಲ್ಲಿ ಎಲ್ಲರ ಜೊತೆ ಒಡನಾಟ ನಡೆಸುತ್ತಿದ್ದರಂತೆ. ಇನ್ನು ಊಟದ ಸಮಯ ಬಂದರೆ ಸಾಕು ಊಟವನ್ನು ಬಹಳ ಸ್ವಾದದಿಂದ ಅನುಭವಿಸುತ್ತಿದ್ದರು ಅದರಲ್ಲೂ ಕೂಡ ಚಿಕನ್ ಮತ್ತು ಮಟನ್ ಎಂದರೆ ಅಣ್ಣಾವ್ರಿಗೆ ಬಹಳನೇ ಇಷ್ಟವಾಗುತ್ತಿತ್ತು ಅಂತೆ ಚಿಕನ್ ಮಟನ್ ಊಟ ಅಂದರೆ ಸಾಕು ಬಹಳ ಸ್ವಾದದಿಂದ ಸವಿಯುತ್ತಿದ್ದರಂತೆ. ರಾಜಕುಮಾರ್ ಅವರು ಬಹಳನೇ ಉತ್ತಮವಾದಂತಹ ವ್ಯಕ್ತಿಯ ಅವರ ಮನಸ್ಸಿನಲ್ಲಿ ಯಾವುದೇ ರೀತಿಯ ಕಲ್ಮಶಗಳನ್ನು ಇರುತ್ತಿರಲಿಲ್ಲ ಎಲ್ಲರನ್ನೂ ಗೌರವಾನ್ವಿತವಾಗಿ ಕಾಣುತ್ತಿದ್ದರು ಅವರ ನಟನೆಯನ್ನು ನೋಡಿಕೊಂಡು ನಾನು ಇಲ್ಲಿವರೆಗೆ ಬೆಳೆದು ಬಂದೆ ಇದು ಸತ್ಯಜಿತ್ ಅವರು ಹೇಳಿಕೊಂಡಿದ್ದಾರೆ.

[irp]