ಬೆಳಿಗ್ಗೆ ಎದ್ದ ಕೂಡಲೇ ಸರಳ ಮಲವಿಸರ್ಜನೆ ಮಾಡಲು,ಹಾಗೂ ಹೊಟ್ಟೆಯ ಬೊಜ್ಜು ಕರಗಿಸಲು ಸುಲಭ ವಿಧಾನ... - Karnataka's Best News Portal

ದಿನಪೂರ್ತಿ ತಿಂದ ಆಹಾರ ಬೆಳಗಾಗುತ್ತಲೇ ಪಚನವಾಗಿ ಹೊಟ್ಟೆ ಖಾಲಿಯಾದರೆ ಅದರಂತಹ ಸಮಾಧಾನ ಇನ್ನೊಂದಿಲ್ಲ ಎಷ್ಟು ಜನಕ್ಕೆ ಹೊಟ್ಟೆ ಖಾಲಿ ಮಾಡುವುದು ಅಂದರೆ ಮಲ ವಿಸರ್ಜನೆ ಮಾಡುವುದು ಒಂದು ದೊಡ್ಡ ಸಾಹಸದ ಕೆಲಸವಾಗಿದೆ. ಆಯುರ್ವೇದ ಗಳ ಪ್ರಕಾರ ಯಾರ ಹೊಟ್ಟೆಯಲ್ಲಿನ ಮಲವು ಬೆಳಗ್ಗೆನೇ ಪೂರ್ತಿಯಾಗಿ ಖಾಲಿಯಾ ಗುವುದು ಅಂತವರು ನೂರು ಕಾಯಿಲೆಯಿಂದ ದೂರವಿರುತ್ತಾರೆ. ಈ ಮಾತು ಸತ್ಯ ಮಲಬದ್ಧತೆಯನ್ನು ಅನುಭವಿ ಸಿದವರಿಗೆ ಮಾತ್ರ ಈ ಮಾತು ಅರ್ಥವಾಗುತ್ತದೆ.ನಮ್ಮ ದೇಹದಲ್ಲಿನ ಮಲವು ಸರಿಯಾಗಿ ವಿಸರ್ಜನೆ ಆಗಿರುವುದರಿಂದ. ಅಸಿಡಿಟಿ ಹುಳಿತೇಗು ಸೋಂಬೇರಿತನ ಅಷ್ಟೇ ಅಲ್ಲದೆ ದೇಹದಲ್ಲಿ ಬೇಡದ ಬೊಜ್ಜು ಹೆಚ್ಚಾಗುತ್ತದೆ. ಮಲಬದ್ಧತೆ ಸಮಸ್ಯೆ ಇರುವವರಲ್ಲಿ ಜೀರ್ಣಕ್ರಿಯೆ ತೊಂದರೆ ಇರುತ್ತದೆ. ನಾವು ತಿನ್ನುವ ಆಹಾರ ಕ್ರಮದಿಂದ ಸರಿಯಾದ ಪ್ರಮಾಣದ ನೀರು ಕುಡಿಯ ದೆ ಇರುವುದರಿಂದ ವ್ಯಾಯಾಮದ ಕೊರತೆಯಿಂದ ವಾತಾವರ ಣದ ಬದಲಾವಣೆಯಿಂದ ಇನ್ನೂ ಹತ್ತಾರು ಹಲವಾರು ಕಾರಣಗಳಿಂದ ಮಲಬದ್ಧತೆ ನಮ್ಮ ಬೆನ್ನು ಬಿಡದೆ ಕಾಡುತ್ತದೆ. ಈ ಸಮಸ್ಯೆ ಮೊದಲ

ಅಂತದಲ್ಲಿ ಇರುವಾಗಲೇ ಕಾಳಜಿವಹಿಸುವುದು ಬಹುಮುಖ್ಯ ಇಲ್ಲವಾ ದರೆ ಮುಂದೊಂದು ದಿನ ಪೈಲ್ಸ್ ಅಂದರೆ ಮೂಲವ್ಯಾಧಿಯಿಂದ
ಬಳಲು ಬೇಕಾಗುತ್ತದೆ. ಮೊದಲ ಸಲ ಕಾಳಜಿ ವಹಿಸಬೇಕೆಂದರು ಡಾಕ್ಟರ್ ಬಳಿ ಹೋಗಬೇಕು ಅಂತ ಏನು ಇಲ್ಲ ಬದಲಿಗೆ ಮನೆಯಲ್ಲೇ ಸುಲಭವಾಗಿ ಸಿಗುವಂತಹ ಪದಾರ್ಥಗಳನ್ನು ಬಳಸಿ ಜೀರ್ಣಕ್ರಿಯೆಯನ್ನು ಸರಿಪಡಿಸಿಕೊಳ್ಳಬಹುದು. ಅಂತಹ ಒಂದು ಮನೆಮದ್ದನ್ನು ತಿಳಿಸಿಕೊಡುತ್ತೇನೆ. ಜೀರಿಗೆಯಲ್ಲಿ ಹೆಚ್ಚಿನ ನಾರಿನಂಶವಿದೆ ಅಂದರೆ ಫೈಬರ್ ಅಂಶವಿದೆ . ಓಂ ಕಾಳು ಮತ್ತು ಸೋಂಪು. ತಲಾ 2 ಚಮಚದಷ್ಟು ಪ್ರತ್ಯೇಕವಾಗಿ ಬಣ್ಣ ಬದಲಾಗುವವರೆಗೂ ಸಣ್ಣ ಉರಿಯಲ್ಲಿ ಹುರಿದುಕೊಳ್ಳಿ. ನಂತರ ಅರ್ಧ ಚಮಚದಷ್ಟು ಕಪ್ಪು ಉಪ್ಪನ್ನು ಬಳಸಿ ಚೆನ್ನಾಗಿ ಪುಡಿಮಾಡಿಕೊಳ್ಳಿ ಪುಡಿಯನ್ನು ನೀವು ತಿಂಗಳವರೆಗೆ ಬಳಸಬಹುದು. ಪ್ರತಿರಾತ್ರಿ ಊಟದ ಒಂದು ಗಂಟೆಯ ನಂತರ ಒಂದು ಲೋಟ ಉಗುರುಬೆಚ್ಚಗಿನ ನೀರಿನ ಜೊತೆಗೆ ಒಂದು ಚಮಚ ಪುಡಿಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಮಲಗುವ ಅರ್ಧಗಂಟೆಗೆ ಮುಂಚೆ ಈ ನೀರನ್ನು ಕುಡಿಯಿರಿ.

By admin

Leave a Reply

Your email address will not be published. Required fields are marked *