ಪ್ರತಿಯೊಂದು ಮನೆಯಲ್ಲಿ ಅಡುಗೆ ಪದಾರ್ಥ ಮಾಡುವಾಗ ಮೊಸರು ಬಳಸುತ್ತಾರೆ. ಹಾಗೂ ಊಟ ಮಾಡುವಾಗ ಅನ್ನ ಸಾಂಬಾರ್ ಜೊತೆ ಮೊಸರಿಲ್ಲದೆ ಅಥವಾ ಮಜ್ಜಿಗೆ ಪ್ರತಿಯೊಬ್ಬರು ಬಳಸುತ್ತಾರೆ. ಆದರೆ ಈಗ ಚಳಿಗಾಲ ಇರುವುದರಿಂದ ಗಟ್ಟಿ ಮೊಸರು ಮಾಡುವ ವಿಧಾನ ಒಂದು ಇದೆ ಅದು ಹೇಗೆ ಮಾಡುವುದು ಎಂದರೆ ಮೊದಲಿಗೆ ಒಂದು ಪಾತ್ರೆಯಲ್ಲಿ ಎರಡು ಲೋಟ ಹಾಲನ್ನು ಬಿಸಿ ಮಾಡಲು ಇಡಬೇಕು ನಂತರ ಅದನ್ನು ಚೆನ್ನಾಗಿ ಕುದಿಸಬೇಕು ಸ್ವಲ್ಪ ಕೂಡ ನೀರು ಹಾಕದೆ ಗಟ್ಟಿ ಹಾಲನ್ನು ಚೆನ್ನಾಗಿ ಕುದಿಸಬೇಕು. ಎರಡು ಲೋಟ ಹಾಲು ಹಾಕಿದ್ದಾರೆ ಒಂದುವರೆ ಲೋಟ ಹಾಲು ಗಟ್ಟಿಯಾಗಿ ಇರಬೇಕು ಅಲ್ಲಿವರೆಗೆ ಚೆನ್ನಾಗಿ ಕುದಿಸಬೇಕು ನಂತರ ಹಾಲನ್ನು ತಣ್ಣಗಾಗಲು ಬಿಡಬೇಕು. ನಂತರ ಒಂದು ಪಾತ್ರೆಯಲ್ಲಿ 2 ಚಮಚ ಹೆಪ್ಪು ಹಾಕಿರುವ ಮೊಸರನ್ನ ಹಾಕಬೇಕು ನಂತರ ಅದು ತಣ್ಣಗಾಗಿರುವ
ಹಾಲು ಅದಕ್ಕೆ ಬೆರೆಸಬೇಕು. ರಾತ್ರಿ ಮಲಗುವಾಗ ಈ ರೀತಿ ಮಾಡಿ
ಎಂಟರಿಂದ 10 ಗಂಟೆಗಳ ಕಾಲ ಬಿಡಬೇಕು ಬೆಳಗ್ಗೆ ಎದ್ದ ತಕ್ಷಣ
ನೋಡಿದಾಗ ಅದು ಮೊಸರು ಆಗಿರುವುದಿಲ್ಲ ಕಾರಣ ಏಕೆಂದರೆ ಸ್ವಲ್ಪ ಚಳಿಗಾಲ ಇರುವುದರಿಂದ ಅದು ಮೊಸರು ಆಗುವುದಿಲ್ಲ ಅದಕ್ಕೆ ಒಂದು ಪರಿಹಾರ ಇದೆ .ನಂತರ ಒಂದು ಪಾತ್ರೆಯಲ್ಲಿ ಸ್ವಲ್ಪ ಬಿಸಿ ನೀರನ್ನು ಇಡಬೇಕು ಅದು ಸ್ವಲ್ಪ ಬಿಸಿ ಆಗುವವರೆಗೂ ಕಾಯಿಸಬೇಕು. ನಂತರ ಹೆಪ್ಪು ಹಾಕಿದ ಮೊಸರು ಆಗದಿರದು ವನ್ನು ಅದರ ಒಳಗಡೆ ಒಂದು ಪಾತ್ರೆಯಲ್ಲಿಟ್ಟು ಅರ್ಧ ಮುಳುಗುವ ರೀತಿ ಬಿಡಬೇಕು. ಅದಕ್ಕೆ ಒಂದು ತಟ್ಟೆ ಮುಚ್ಚಬೇಕು ಹೀಗೆ 20 ನಿಮಿಷಗಳ ಕಾಲ ಆದಮೇಲೆ ಸ್ವಲ್ಪ ಬಿಸಿಯಲ್ಲಿ ಹೆಪ್ಪು ಆಗದ ಮೊಸರನ್ನು ಇಟ್ಟರೆ ಇಪ್ಪತ್ತು ನಿಮಿ ಷಗಳಲ್ಲಿ ಮೊಸರು ರೆಡಿಯಾಗುತ್ತದೆ ನಂತರ ಅದನ್ನು ತೆಗೆದು ಕೊಂಡು ಫ್ರಿಜ್ಜಲ್ಲಿ ಕೂಡ ಇಡಬಹುದು ತುಂಬಾ ಚೆನ್ನಾಗಿರುತ್ತದೆ. ಕೇವಲ 20 ನಿಮಿಷಗಳಲ್ಲಿ ಚಳಿಗಾಲದಲ್ಲಿ ಮೊಸರನ್ನು ಮನೆಯಲ್ಲೇ ತಯಾರಿಸಿಕೊಳ್ಳಬಹುದು. ಈ ರೀತಿ ಮಾಡಿ ಯಾವುದೇ ತೊಂದರೆಯಾಗುವುದಿಲ್ಲ ತುಂಬಾ ಚೆನ್ನಾಗಿರುತ್ತದೆ.
ಚಳಿಗಾಲದಲ್ಲೂ ಗಟ್ಟಿ ಮೊಸರು ಮಾಡುವ ಒಂದು ಸೂಪರ್ ಟಿಪ್ಸ್ ನೀವೆಂದು ಕಂಡರಿಯದ ಅಪರೂಪದ ಮಾಹಿತಿ ನಿಮಗಾಗಿ…
