ಯಾರಿಗೂ ತಿಳಿಯದ ರಾಪರ್ (Rapper) ಚಂದನ್ ಶೆಟ್ಟಿ ಅವರ ರೋಚಕ ಜೀವನ ಕಥೆ ನೋಡಿದ್ರೆ ಆಶ್ಚರ್ಯಗೊಳ್ಳುತೀರಾ... - Karnataka's Best News Portal

ಇವರು ಒಬ್ಬ ನಟ, ಸಂಗೀತ ನಿರ್ದೇಶಕ, ಗಿಟಾರ್ ಪ್ಲೇಯರ್, ಮತ್ತು ಕನ್ನಡದ ರಾಪರ್ ಗಾಯಕರಾಗಿ ಹೆಸರನ್ನು ಮಾಡಿದ್ದಾರೆ. ಕನ್ನಡದಲ್ಲಿ ರಾಪ್ ಸಾಂಗ್ ಗಳ ಮೂಲಕ ಒಂದು ಹೊಸ ಅಲೆಯನ್ನು ಸೃಷ್ಟಿಸಿದ ಚಂದನ್ ಶೆಟ್ಟಿ ಅವರು ಈ ಮಟ್ಟಕ್ಕೆ ಬೆಳೆದಿದ್ದಾರೆ ಅಂದರೆ ಅದರ ಹಿಂದೆ ಅವರು ಅನುಭವಿಸಿದ ಹಲವಾ ಕಹಿ ಘಟನೆಗಳು ಇದೆ. ಮೊದಲು ಕಾಲ್ ಸೆಂಟರ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಚಂದನ್ ಶೆಟ್ಟಿ ಅವರು ಕರ್ನಾಟಕದ ಜನತೆ ಮೆಚ್ಚುವಂತಹ ರಾಪರ್ ಆಗಿ ಬೆಳೆದಿದ್ದು ಹೇಗೆ ಎಂಬ ಸಂಪೂರ್ಣ ಮಾಹಿತಿಯನ್ನು ಇಂದು ನಿಮಗೆ ತಿಳಿಸುತ್ತೇವೆ. ಚಂದನ್ ಶೆಟ್ಟಿ ಅವರು 17.09.1989 ರಲ್ಲಿ ಪರಮೇಶ್ವರ್ ಶೆಟ್ಟಿ ಮತ್ತು ಪ್ರೇಮ ಶೆಟ್ಟಿ ಅವರ ದಂಪತಿಗಳ ಮೊದಲ ಮಗನಾಗಿ ಹಾಸನ ಜಿಲ್ಲೆಯ ಶಾಂತಿ ಗ್ರಾಮದಲ್ಲಿ ಜನಿಸುತ್ತಾರೆ.

ಚಂದನ್ ಶೆಟ್ಟಿ ಅವರ ತಂದೆಯವರು ಪ್ರಾವಿಷನ್ ಸ್ಟೋರ್ ಒಂದನ್ನು ನಡೆಸುತ್ತಿರುತ್ತಾರೆ. ಚಂದನ್ ಶೆಟ್ಟಿ ತಮ್ಮ ಶಾಲಾ ವಿದ್ಯಾಭ್ಯಾಸವನ್ನು ರೋಟರಿ ಸ್ಕೂಲ್ ನಲ್ಲಿ ಪಡೆಯುತ್ತಾರೆ. ಸೆಂಟ್ ಫಿಲೋಮಿನಾ ಕಾಲೇಜು ಮತ್ತು ಮೈಸೂರಿನ ವಿದ್ಯಾ ವಿಕಾಸ ಕಾಲೇಜಿನಲ್ಲಿ ತಮ್ಮ ಡಿಗ್ರಿ ವಿದ್ಯಾಭ್ಯಾಸವನ್ನು ಇವರು ಪಡೆಯುತ್ತಾರೆ. ಶಾಲಾ ಕಾಲೇಜಿನಲ್ಲಿ ಓದುತ್ತಿರುವಾಗಲೇ ಮ್ಯೂಸಿಕ್ ನ ಮೇಲೆ ಇವರಿಗೆ ಆಸಕ್ತಿ ಮೂಡುತ್ತದೆ ಚಂದನ್ ಶೆಟ್ಟಿ ಅವರು ಕಾಲೇಜಿನಲ್ಲಿ ಹಾಡುತ್ತಿರುವುದನ್ನು ನೋಡಿ ಎಲ್ಲರೂ ಕೂಡ ಮೆಚ್ಚಿ ವೀಕ್ಷಿಸಿಸುತ್ತಿದ್ದರು. ನಂತರ ತಮ್ಮ ಸ್ನೇಹಿತರು ಯಾವುದಾದರೂ ಪಾರ್ಟಿ ಮಾಡಿದಾಗಲೂ ಕೂಡ ಚಂದನ್ ಶೆಟ್ಟಿ ಅವರನ್ನು ಕರೆದು ಇವರಿಂದ ಹಾಡನ್ನು ಆಡಿಸುತ್ತಿದ್ದರು ಮೈಸೂರಿನಲ್ಲಿರುವ ಹೆಚ್.ಜಿ‌ಎಸ್ ಕಾಲ್ ಸೆಂಟರ್ ಕಂಪನಿಯಲ್ಲಿ ತಮ್ಮ ಜೀವನೋಪಾಯಕ್ಕಾಗಿ ಕೆಲಸಕ್ಕೆ ಸೇರಿಕೊಳ್ಳುತ್ತಾರೆ.

By admin

Leave a Reply

Your email address will not be published. Required fields are marked *