ಅಭಿಮಾನಿಗಳ ಮುಂದೆ ಮತ್ತೊಂದು ಸಂತೋಷದ ವಿಷಯ ಹಂಚಿಕೊಂಡ ಶ್ವೇತಾ ಚಂಗಪ್ಪ ಏನದು ಗೊತ್ತಾ..ನೋಡಿ - Karnataka's Best News Portal

ಮಜಾ ಟಾಕೀಸ್ ನಲ್ಲಿ ರಾಣಿ ಎಂಬ ಹೆಸರಿನ ಮೂಲಕ ತುಂಬಾನೇ ಫೇಮಸ್ ಆಗಿರುವಂತಹ ಶ್ವೇತ ಚಂಗಪ್ಪ ಅವರು ಕಿರುತೆರೆ ಲೋಕಕ್ಕೆ ಹೊಸಬರು ಏನಲ್ಲ ಯಾಕೆಂದರೆ ಅವರು ಕಾದಂಬರಿ ಎಂಬ ಧಾರಾವಾಹಿಯ ಮೂಲಕ ಕಿರುತೆರೆಗೆ ಪಾದಾರ್ಪಣೆ ಮಾಡಿದರು ನಂತರ ಹಲವು ಸಿನಿಮಾಗಳಲ್ಲಿ ಸೈಡ್ ಕ್ಯಾರೆಕ್ಟರ್ ಕೂಡ ಮಾಡಿದರು. ನಂತರ ಕನ್ನಡದ ಬಿಗ್ ಬಾಸ್ ದೊಡ್ಡ ರಿಯಾಲಿಟಿ ಶೋನಲ್ಲಿ ಅವರು ಸೀಸನ್ 2 ನಲ್ಲಿ ಪ್ರತಿಸ್ಪರ್ಧಿಯಾಗಿ ಆಯ್ಕೆಯಾಗುತ್ತಾರೆ. ನಂತರ ಅವರಿಗೂ ಸೃಜನ್ ಲೋಕೇಶ್ ಅವರಿಗೂ ಉತ್ತಮವಾದ ಸ್ನೇಹ ಬಾಂಧವ್ಯ ಮೂಡುತ್ತದೆ. ಬಿಗ್ ಬಾಸ್ ಮುಗಿದ ನಂತರ ಮಜಾ ಟಾಕೀಸ್ ಎಂಬ ರಿಯಾಲಿಟಿ ಶೋ ಅನ್ನು ಪ್ರಾರಂಭ ಮಾಡುತ್ತಾರೆ ಅದರಲ್ಲಿ ರಾಣಿ ಎಂಬ ಪಾತ್ರದಲ್ಲಿ ಶ್ವೇತ ಚಂಗಪ್ಪ ಅವರು ತುಂಬಾನೇ ಫೇಮಸ್ ಆಗುತ್ತಾರೆ. ಮಜಾ ಟಾಕೀಸ್ ಎರಡು ಸೀಸನ್ ಅನ್ನು ಕೂಡ ಪೂರ್ಣವಾಗಿ ಮುಗಿಸುತ್ತಾರೆ. ನಂತರ ಅವರು ತಾಯಿಯಾಗುತ್ತಿರುವ


ವಿಚಾರವನ್ನು ಅಭಿಮಾನಿಗಳಿಗೆ ಹಂಚಿಕೊಂಡು ಮಜಾಟಾಕಿಸ ಸ್ವಲ್ಪ ಸಮಯದವರೆಗೂ ದೂರವುಳಿಯುತ್ತಾರೆ.ನಂತರ ಅವರ ಪಾತ್ರ ಹಾಗೆಯೇ ಉಳಿಯುತ್ತದೆ ಇನ್ನು ಕರೋನವೈರಸ್ ಮತ್ತು ಲಾಕ್ ಡೌನ್ ಇದ್ದ ಕಾರಣ ಅವರು ಮಜಾ ಟಾಕೀಸ್ ಆರಂಭವಾದಾಗಲೂ ಕೂಡ ಬರಲಿಲ್ಲ ಆದರೆ ಶ್ವೇತಾ ಚಂಗಪ್ಪ ಅವರು ಲಾಕ್ ಡೌನ್ ಸಮಯದಲ್ಲಿಯೇ ತಮ್ಮದೇ ಆದ ಸ್ವಂತ ಉದ್ಯಮವೊಂದನ್ನು ಆರಂಭಿಸಿದ್ದು ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಕೆಲ ದಿನಗಳ ಹಿಂದಷ್ಟೇ ಸಂತೋಷ ಹಂಚಿಕೊಂಡಿದ್ದರು. ತಾರಾ ಡಿಸೈನರ್ ವಿಯರ್ ಉದ್ಯಮ ಆರಂಭಿಸಿ ಬ್ರೈಡಲ್ ಬಟ್ಟೆಗಳು, ಸೆಲಿಬ್ರೆಟಿ ಬಟ್ಟೆಗಳು, ಹಾಗೂ ಇನ್ನಿತರ ಪಾರ್ಟಿ ಹಾಗೂ ಕ್ಯಾಸ್ಯುಲ್ ಬಟ್ಟೆಗಳನ್ನು ಡಿಸೈನ್ ಮಾಡುವ ಉದ್ಯಮ ಆರಂಭಿಸಿ ಕೆಲವರಿಗೆ ಉದ್ಯೋಗವನ್ನೂ ಸಹ ನೀಡಿದ್ದರು. ಆದರೆ ಇದೀಗ ಮತ್ತೆ ಶ್ವೇತ ಚಂಗಪ್ಪ ನವರು ಮಜಾ ಟಾಕೀಸ್ ನಲ್ಲಿ ರಾಣಿ ಎಂಬ ಪಾತ್ರದಲ್ಲಿ ಮುಂದುವರೆಯಲಿದ್ದಾರೆ ಇನ್ನು ಮುಂದೆ ಬರುವ ಎಲ್ಲಾ ಸಂಚಿಕೆಗಳನ್ನು ಕೂಡ ಶ್ವೇತಾ ಅವರು ಅಭಿನಯಿಸುತ್ತಿದ್ದಾರೆ ಎಂದು ತಿಳಿದುಬಂದಿದೆ ಇದನ್ನು ಕೇಳಿದ ಅಭಿಮಾನಿಗಳಿಗೆ ಬಹಳಷ್ಟು ಸಂತೋಷವಾಗಿದೆ.

By admin

Leave a Reply

Your email address will not be published. Required fields are marked *