ಗಟ್ಟಿಮೇಳ ಸೀರಿಯಲ್ ನಲ್ಲಿ ನಟಿಸುವ ಈ ಧ್ರುವನ ನಿಜ ಜೀವನದ ಆ ಒಂದು ಸತ್ಯ ಯಾರಿಗೂ ಗೊತ್ತಿಲ್ಲ ...! ಈಗಲೇ ನೋಡಿ - Karnataka's Best News Portal

ಜೀ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿರುವ ಗಟ್ಟಿಮೇಳ ಹಾಗೂ ಜೊತೆ ಜೊತೆಯಲಿ ಧಾರವಾಹಿಗಳು ತುಂಬಾನೇ ಮೆಚ್ಚುಗೆಯನ್ನು ಪಡೆದುಕೊಂಡಿರುವ ಧಾರವಾಹಿ ಆಗಿದೆ. ಅಷ್ಟೇ ಅಲ್ಲದೆ ಧಾರಾವಾಹಿಗಳಲ್ಲಿಯೇ ಅತಿ ಹೆಚ್ಚು ಟಿ.ಆರ್.ಪಿ. ಯನ್ನು ಹೊಂದಿರುವಂತಹ ಧಾರವಾಹಿ ಎಂದರೆ ಅದು ಗಟ್ಟಿಮೇಳ ಮತ್ತು ಜೀ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿರುವ ಜೊತೆ ಜೊತೆಯಲ್ಲಿ ಧಾರವಾಹಿ ಅಂತನೇ ಹೇಳಬಹುದು. ಇನ್ನು ಅತಿ ಹೆಚ್ಚು ಪ್ರೇಕ್ಷಕರನ್ನು ಒಳಗೊಂಡಿರುವಂತಹ ಗಟ್ಟಿಮೇಳ ಧಾರಾವಾಹಿ ಯಲ್ಲಿ ಅಮೂಲ್ಯ ಮತ್ತು ವೇದಾಂತ್ ಪಾತ್ರದೊಂದಿಗೆ ಅದರಲ್ಲಿ ಇರುವಂತಹ ಧ್ರುವ ಪಾತ್ರ ಕೂಡ ಅಷ್ಟೇ ಪ್ರಾಮುಖ್ಯತೆಯನ್ನು ನೀಡಲಾಗಿದೆ. ಇನ್ನು ಈ ಒಂದು ಸೀರಿಯಲ್ ನಲ್ಲಿ ನಟಿಸುತ್ತಿರುವ ಧ್ರುವ ಅವರ ನಿಜವಾದ ಹೆಸರು ರಂಜನ್ ಅಂತ ಇವರು ಮೂಲತಹ ಮಂಡ್ಯದವರು ಅಲ್ಲಿಯೇ ವಿದ್ಯಾಭ್ಯಾಸವನ್ನು ಮಾಡುತ್ತಾರೆ. ವಿದ್ಯಾಭ್ಯಾಸ ಮಾಡುತ್ತಿರುವಾಗಲೇ
ನಟನಾಗಬೇಕೆಂಬ ಮಹದಾಸೆಯನ್ನು ಹೊಂದುತ್ತಾರೆ ನಂತರ ಅವರು


ನಾಗಾಭರಣ ಅವರ ಥಿಯೇಟರ್ನಲ್ಲಿ ಆಕ್ಟಿಂಗ್ ಸೇರಿಕೊಳ್ಳುತ್ತಾರೆ.
ಅದಾದನಂತರ ಚಿಕ್ಕಪುಟ್ಟ ಅವಕಾಶವನ್ನು ಸದುಪಯೋಗಪಡಿಸಿಕೊಂಡು
ಕಿರುತೆರೆಯಲ್ಲಿ ಮತ್ತು ಬೆಳ್ಳಿತೆರೆಯಲ್ಲಿ ಅವಕಾಶವನ್ನು ಪಡೆದು ಕೊಳ್ಳುತ್ತಾರೆ. ಇಷ್ಟ ದೇವತೆ ಎಂಬ ಸೀರಿಯಲ್ ನಲ್ಲಿ ವಿಲನ್ ಆಗಿ ಕಾಣಿಸಿಕೊಳ್ಳುವ ಮೂಲಕ ಅವರು ಕಿರುತೆರೆಗೆ ಪಾದಾರ್ಪಣೆ ಮಾಡುತ್ತಾರೆ. ಕೆಲವೊಂದು ಧಾರಾವಾಹಿಗಳಲ್ಲಿ ಸಣ್ಣಪುಟ್ಟ ಪಾತ್ರದಲ್ಲಿ ಅಭಿನಯಿಸಿದರು ಜೊತೆಗೆ ಇವರು ಜಿಮ್ ಟ್ರೈನರ್ ಕೂಡ ಆಗಿದ್ದಾರೆ ಕೆಲಸವಿಲ್ಲದ ವೇಳೆ ಜಿಮ್ ಕೆಲಸದಲ್ಲಿ ನಿರತರಾಗಿರುತ್ತಾರೆ ಇನ್ನೂ ಇವರಿಗೆ ಪುನೀತ್ ರಾಜಕುಮಾರ್ ಅಂದರೆ ಬಹಳ ಇಷ್ಟವಂತೆ ಅವರೇ ಇವರಿಗೆ ಸ್ಪೂರ್ತಿ ಅಂತೆ ಅವರ ರೀತಿಯಲ್ಲಿ ಸರಳ ಜೀವನವನ್ನು ನಡೆಸಬೇಕು ಹಾಗೂ ಅಭಿಮಾನಿಗಳನ್ನು ಹೊಂದಬೇಕು ಎಂಬ ಮಹದಾಸೆಯನ್ನು ಹೊಂದಿದ್ದರೆ ಅಷ್ಟೇ ಅಲ್ಲದೆ ಇವರು ನಾಯಕನಾಗಬೇಕೆಂಬ ಇಚ್ಛೆಯನ್ನು ಹೊಂದಿದ್ದಾರೆ.

By admin

Leave a Reply

Your email address will not be published. Required fields are marked *