ನೇಪಾಳ ದೇಶದ ವಿಚಿತ್ರ ಶಾಕಿಂಗ್ ಸಂಗತಿಗಳು.. ಇಲ್ಲಿ ಒಂದು ಮಹಿಳೆಗೆ ಹಲವು ಗಂಡಂದಿರು ಮಿಸ್ ಮಾಡಿದ್ದೆ ನೋಡಿ... - Karnataka's Best News Portal

ಪರ್ವತಗಳ ದೇಶ ಜಗತ್ತಿನ ಏಕೈಕ ಹಿಂದೂ ರಾಷ್ಟ್ರ ಅಂತ ಕರೆಸಿಕೊಳ್ಳುತ್ತಿದ್ದ ದೇಶ ನೇಪಾಳ. ಜಗತ್ತಿನ ಅತಿ ಎತ್ತರದ ಶಿಖರ ಮೌಂಟ್ ಎವರೆಸ್ಟ್ ನಾ ತವರು ಅಂದರೆ ನಮ್ಮ ನೆರೆಯ ರಾಷ್ಟ್ರ ನೇಪಾಳ ಇಂದು ಅದೇ ನೇಪಾಳದ ಬಗ್ಗೆ ಇರುವ ಕೆಲವು ಸಂಗತಿಗಳ ಬಗ್ಗೆ ಇಂದು ನಿಮಗೆ ಸಂಕ್ಷಿಪ್ತ ಮಾಹಿತಿಯನ್ನು ತಿಳಿಸುತ್ತೇವೆ. ಭಾರತೀಯರಿಗೆ ನೇಪಾಳಕ್ಕೆ ಹೋಗಲು ವಿಸ ಬೇಕಿಲ್ಲ ನಾವು ನೀವು ನೇಪಾಳಕ್ಕೆ ವಿಸಾ ಇಲ್ಲದೆಯೂ ಹೋಗಿ ಬರಬಹುದು. ನೇಪಾಳವನ್ನು ದಕ್ಷಿಣ ಏಷ್ಯಾದ ಅತ್ಯಂತ ಪುರಾತನ ದೇಶ ಎಂದು ಕರೆಯಲಾಗುತ್ತದೆ. ಅಲ್ಲಿನ ಪ್ರಾಚೀನ ಇತಿಹಾಸ ಕಾಟ್ಮಂಡುವಿನ ಘಾಟಿಯಿಂದ ಶುರುವಾಗುತ್ತದೆ. ನೇಪಾಳದ ಹೆಸರನ್ನು ಹಿಂದೂ ಸಂತ ನೇಮಿ ಎನ್ನುವ ಹೆಸರಿನಿಂದ ಇಡಲಾಗಿದೆ ಈ ಸಂತ ಕಾಟ್ಮಾಂಡು ಎಂಬ ಘಾಟಿಯನ್ನು ಸೃಷ್ಟಿಸಿದರಂತೆ.

ನಂತರ ಮುಂದೆ ಇದೇ ಸಂತಾ ಕಾಟ್ಮಂಡವಿನ ರಕ್ಷಣೆ ಮಾಡಿಕೊಂಡು ಬಂದಿದ್ದರು ಎಂಬ ಪ್ರತೀತಿ ಇದೆ. ನೇಪಾಳದಲ್ಲಿ ಅನೇಕ ರಾಜ ಮನೆತನಗಳು ಆಳ್ವಿಕೆ ನಡೆಸಿದೆ. ನಿಮಗೆಲ್ಲಾ ಗೊತ್ತಿರಲೇ ಬೇಕಾದ ಇಂಟರೆಸ್ಟಿಂಗ್ ಸಂಗತಿ ಎಂದರೆ ಈ ದೇಶ ಯಾವ ದೇಶಕ್ಕೂ ಗುಲಾಮನಾಗಿ ಇರಲಿಲ್ಲ. ಈ ದೇಶವನ್ನು ವಶಪಡಿಸಿಕೊಳ್ಳಲು ಬ್ರಿಟಿಷರಿಗೆ ಆಗಲಿ ಅಥವಾ ಫ್ರೆಂಚರಿಗೆ ಆಗಲಿ ಆಗಲೇ ಇಲ್ಲ ಹೀಗಾಗಿ ನಮ್ಮ ದೇಶದ್ಕೆ ಸ್ವಾತಂತ್ರ್ಯ ದಿನ ಇರಬಹುದು ಆದರೇ ಈ ದೇಶಕ್ಕೆ ಸ್ವಾತಂತ್ರ್ಯ ದಿನವಿಲ್ಲ. ಪುಟ್ಟ ದೇಶವಾದರೂ ಯಾರ ಕಪಿ ಮುಷ್ಟಿಗೂ ಸಿಲುಕದೆ ದಿಟ್ಟವಾಗಿ ನಿಂತ ಏಕೈಕ ರಾಷ್ಟರ ಅದು ವಿಶ್ವದ ಪ್ರತಿಯೊಂದು ದೇಶದ ಧ್ವಜದ ಆಕೃತಿ ಒಂದು ರೀತಿ ಇದ್ದರೆ ನೇಪಾಳದಲ್ಲಿ ಮಾತ್ರ ವಿಭಿನ್ನವಾಗಿದೆ.

By admin

Leave a Reply

Your email address will not be published. Required fields are marked *