ಶಿವನು ಯಮನ ಪಾಶದಿಂದ ಭಕ್ತ ಮಾರ್ಕಂಡೇಯ ನನ್ನ ರಕ್ಷಿಸಿದ್ದು ಇಲ್ಲಿಯೇ... ಮಿಸ್ ಮಾಡದೆ ನೋಡಿ ಮಾರ್ಕಂಡೇಯ ಬೆಟ್ಟ - Karnataka's Best News Portal

ತಮಗೆಲ್ಲ ಭಕ್ತ ಮಾರ್ಕಂಡೇಯನ ಕಥೆ ತಿಳಿದಿರುತ್ತದೆ ಬ್ರಹ್ಮ ಮಾನಸ ಪುತ್ರರಾದ ಬೃಹ ಮಹರ್ಷಿಗಳು ಸಂತತಿಯಲ್ಲಿ ಜನಿಸಿದ ಮಾರ್ಕಂಡು ಎಂಬ ಮಗಳಿಗೆ ಬಹಳ ವರ್ಷಗಳ ಕಾಲ ಮಕ್ಕಳಿರುವುದಿಲ್ಲ. ಮಕ್ಕಳ ಭಾಗ್ಯ ಪಡೆಯುವುದಕ್ಕಾಗಿ ಮಾರ್ಕಂಡು ಪರಶಿವನ ಕುರಿತು ಘೋರ ತಪಸ್ಸನ್ನು ಮಾಡುತ್ತಾರೆ. ಮೈಖಂಡು ಮುನಿಗಳ ತಪಸ್ಸಿಗೆ ಮೆಚ್ಚಿದ ಈಶ್ವರನು ಪ್ರತ್ಯಕ್ಷನಾಗಿ ನಿನಗೆ ಪರಮ ಜ್ಞಾನಿ ಹಾಗೂ ದೈವಭಕ್ತನೂ ಆದ ಅಲ್ಪಾಯುಷಿ ಮಗನು ಬೇಕಾ ಅಥವಾ ದಡ್ಡನಾದ ದೀರ್ಘಾಯುಷಿ ಮಗನು ಬೇಕಾ ಎಂದು ಕೇಳುತ್ತಾರೆ. ಅದಕ್ಕೆ ಮಾರ್ಕಂಡು ಮುನಿಗಳು ಅಲ್ಪಾಯುಷಿಯಾದರೂ ಪರವಾಗಿಲ್ಲ ಜ್ಞಾನಿಯಾದ ಶಿವಭಕ್ತನಾದ ಮಗನೇ ಬೇಕೆಂದು ವರವನ್ನು ಕೇಳಿಕೊಳ್ಳುತ್ತಾರೆ ಹೀಗೆ ಅಲ್ಪಾಯುಷಿಯಾಗಿ ಜನಿಸಿದವನೇ ಮಾರ್ಕಂಡೇಯ. ಈ ಮಾರ್ಕಂಡೇಯ ಬಹಳ ಪ್ರತಿಭಾವಂತರು ಹಾಗೂ ಶಿವನ ಪರಮಭಕ್ತರಾಗಿ ಬೆಳೆಯುತ್ತಾರೆ ಅವರು ಆಯಸ್ಸು ಮುಗಿದ ಮೇಲೆ ಒಂದು ದಿನ ಬೆಟ್ಟದಲ್ಲಿ ಶಿವ ಪೂಜೆ ಮಾಡುತ್ತಿರುವಾಗ.

ಅವರ ಪ್ರಾಣವನ್ನು ಕೊಡೊಯ್ಯಲೆಂದು ಯಮ ಧರ್ಮರಾಯರು ಆಗಮಿಸುತ್ತಾರೆ ಮಾರ್ಕಂಡೇಯನ ಕೊರಳಿಗೆ ಯಮ ಪಾಶವನ್ನು ಹಾಕಿದಾಗ ಮಾರ್ಕಂಡೇಯ ಶಿವಲಿಂಗ ತಬ್ಬಿ ಹಿಡಿಯುತ್ತಾನೆ. ಆದರೂ ಯಮಧರ್ಮರಾಯ ಬಲವಂತದಿಂದಲೇ ತಮ್ಮ ಪಾಶವನ್ನು ಎಳೆದಾಗ ಲಿಂಗದಿಂದ ಕೋಪ ವೃತ್ತವಾಗಿ ಪರಶಿವನೆ ಎದ್ದುಬಂದು ಯಮನನ್ನು ತನ್ನ ತ್ರಿಶೂಲದಿಂದ ಕೊಲ್ಲಲು ಮುಂದಾಗುತ್ತಾರೆ. ನಂತರ ತಾವು ಶಾಂತನಾಗಿ ಮಾರ್ಕಂಡೇಯನಿಗೆ ಚಿರಂಜೀವಿಯಾಗಿ ಎಂದು ವರವನ್ನು ನೀಡುತ್ತಾರೆ ಭಕ್ತ ಮಾರ್ಕಂಡೇಯರಿಗೆ ಶಿವನು ಪ್ರತ್ಯಕ್ಷನಾಗಿ ಯಮಪಾಶವನ್ನು ಬಿಡುಗಡೆ ಮಾಡಿದ ಸ್ಥಳ ವಿರುವುದು. ನಮ್ಮ ಕರ್ನಾಟಕದ ಕೋಲಾರ ಜಿಲ್ಲೆಯಿಂದ ಸುಮಾರು 13 ಕಿಲೋಮೀಟರ್ ದೂರದಲ್ಲಿರುವ ವಕ್ಕಲೇರಿ ಎಂಬ ಗ್ರಾಮದಲ್ಲಿರುವ ಮಾರ್ಕಂಡೇಯ ಬೆಟ್ಟದಲ್ಲಿದೆ.

By admin

Leave a Reply

Your email address will not be published. Required fields are marked *