ಚಳಿಗಾಲ ಬಂತು ಅಂದರೆ ಸಾಕು ಸಾಮಾನ್ಯವಾಗಿ ನಾವೆಲ್ಲರೂ ಯೋಚನೆ ಮಾಡುವುದು ನಮ್ಮ ಚರ್ಮದ ಬಗ್ಗೆ ಹಾಗೆಯೇ ತುಟಿ ಮತ್ತು ಕೂದಲ ಬಗ್ಗೆ. ಚಳಿಗಾಲದಲ್ಲಿ ಒಣ ಹವೆಯಿಂದ ಡ್ರೈಯಾಗುತ್ತದೆ ಹಾಗೇ ಡ್ರೈ ಆಗದೇ ಇರುವ ಹಾಗೆ ನೋಡಿಕೊಳ್ಳುವುದೇ ನಮಗೆಲ್ಲ ದೊಡ್ಡ ಟಾಸ್ಕ್ ಆಗಿರುತ್ತದೆ. ಕೆಲವು ಬಾರಿ ನಾವು ಸ್ಕಿನ್ ಮತ್ತು ತುಟಿ ಡ್ರೈ ಆಗಾದೇ ಇರಲು ಹೊರಗಡೆಯಿಂದ ಏನೇನೋ ಮಾಯಶ್ಚರೈಶೇಷನ್ ಅನ್ನು ತಂದು ಕೂದಲಿಗೆ, ತುಟಿಗೆ, ಚರ್ಮಕ್ಕೆ ಹಾಕಿ ಏನೇನೋ ಪ್ರಯೋಗ ಮಾಡುತ್ತೇವೆ. ಆದರೆ ಕೆಲವರು ನಮಗೆ ಇದು ಸಹಾಯ ಮಾಡುವುದರ ಬದಲಾಗಿ ಇನ್ನೊಂದು ರೀತಿಯಾಗಿ ಸೈಡ್ ಎಫೆಕ್ಟ್ ತರುತ್ತದೆ. ಆದ್ದರಿಂದ ನಾವು ಆದಷ್ಟು ಮನೆಯಲ್ಲಿ ನಮ್ಮ ಕೂದಲಿಗೆ ಮತ್ತು ತುಟಿಗೆ ಹಾಗೂ ಚರ್ಮಕ್ಕೆ ಬೇಕಾಗುವಂತಹ ಮನೆ ಮದ್ದನ್ನು ತಯಾರಿಸಿಕೊಳ್ಳುವುದು ಅಂತ ತಿಳಿಸುತ್ತೇನೆ.
ಈ ಮನೆ ಮದ್ದು ಮಾಡುಲು ಮನೆಯಲ್ಲಿ ಸಿಗುವಂತಹ ಪದಾರ್ಥಗಳನ್ನು ಬಳಸಿ ಇದನ್ನು ತಯಾರಿಸಬಹುದು. ಮೊದಲಿಗೆ ಬೀಟ್ ರೂಟ್ ನಿಂದ ನಿಮ್ಮ ಕಪ್ಪಾಗಾಗಿರುವ ತುಟಿಯನ್ನು ಪಿಂಕ್ ಬಣ್ಣಕ್ಕೆ ಮಾಡಬಹುದು. ಹಾಗಾಗಿ ಸಣ್ಣಗಾತ್ರದ ಬೀಟ್ ರೂಟ್ ತೆಗೆದುಕೊಂಡು ಅದರ ಸಿಪ್ಪೆಯನ್ನು ತೆಗೆದು ಕಟ್ ಮಾಡಿ ಮಿಕ್ಸಿ ಜಾರಿಗೆ ಹಾಕಿ ಅದನ್ನು ಪೇಸ್ಟ್ ಮಾಡಿಕೊಂಡು ಅದರ ರಸವನ್ನು ಶೋಧಿಸಿಕೊಂಡು ಒಂದು ಪಾತ್ರೆಗೆ ಹಾಕಿ ಸಣ್ಣ ಉರಿಯಲ್ಲಿ ಚೆನ್ನಾಗಿ ಗಟ್ಟಿಯಾಗುವ ತನಕ ಕುದಿಸಿ. ನಂತರ ಅದನ್ನು ತಣ್ಣಗಾಗಲು ಬಿಡಿ ಅದು ತಣ್ಣಗಾದ ನಂತರ ಒಂದುವರೆ ಟೇಬಲ್ ಸ್ಪೂನ್ ತುಪ್ಪವನ್ನು ಅದಕ್ಕೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಒಂದು ಚಿಕ್ಕ ಡಬ್ಬಕ್ಕೆ ಹಾಕಿ ಅರ್ಧ ಗಂಟೆ ಫ್ರಿಡ್ಜ್ ನಲ್ಲಿ ಇಟ್ಟಾರೆ ಲಿಪ್ ಬಾಂಮ್ ಸಿದ್ದವಾಗುತ್ತದೆ.
