ಕೊಲ್ಲೂರು ಮೂಕಾಂಬಿಕಾ ಪ್ರತ್ಯಕ್ಷರಾದ ಸ್ಥಳ ಮಾರಣ ಕಟ್ಟೆ ಕೊಲ್ಲೂರು ಏನಿದು ಇಂಟರೆಸ್ಟಿಂಗ್ ಮಾಹಿತಿ... - Karnataka's Best News Portal

ಮಾನವನೆ ಆಗಿರಲಿ ದಾನವನೇ ಆಗಿರಲಿ ಒಳ್ಳೆಯ ಭಕ್ತಿ ಹಾಗೂ ನಿಷ್ಕಲ್ಮಸ ಮನಸ್ಸಿನಿಂದ ದೇವರನ್ನು ಪೂಜೆ ಮಾಡಿದರೆ ದೇವರು ಎಲ್ಲರಿಗೂ ಒಲಿಯುತ್ತಾನೆ ಅನ್ನುವುದಕ್ಕೆ ಈ ದೇವಾಲಯವೇ ಸಾಕ್ಷಿ. ಆದಿಶಕ್ತಿ ಜಗನ್ಮಾತೆಯೂ ದುಷ್ಟರನ್ನು ಸಂಹರಿಸಲು ಎತ್ತಿದ ಅವತಾರಗಳಿಗೆ ಲೆಕ್ಕವಿಲ್ಲ. ಸಿಗಂದೂರಿನಲ್ಲಿ ಚೌಡೇಶ್ವರಿಯಾಗಿ, ಮೈಸೂರಿನಲ್ಲಿ ಚಾಮುಂಡೇಶ್ವರಿಯಾಗಿ, ಕೊಲ್ಲೂರಿನಲ್ಲಿ ಮೂಕಾಂಬಿಕೆಯಾಗಿ, ಶಿರಸಿಯಲ್ಲಿ ಮಾರಿಕಾಂಬೆಯಾಗಿ, ಹಾಗೂ ಶೃಂಗೇರಿಯಲ್ಲಿ ಶಾಂತ ರೂಪದ ಶಾರದಾಂಬೆಯಾಗಿ ಭಕ್ತರನ್ನು ಸಲಹುತ್ತಿದ್ದಾಳೆ‌. ಇವತ್ತಿನ ಈ ಲೇಖನದಲ್ಲಿ ಇದೇ ರೀತಿ ದೇವಿಯ ಅನುಗ್ರಹಕ್ಕೆ ಪಾತ್ರರಾಗಿ ಇರುವಂತಹ ಮಾನವನಲ್ಲ ವದಲೊಗೆ ದಾನವನಾದ ಮೂಕಾಸುರ ಬ್ರಹ್ಮಲಿಂಗೇಶ್ವರನಾಗಿ ನಿಂತಿರುವ ಮಾರಣ ಕಟ್ಟೆಯ ದೇವಸ್ಥಾನದ ಸಂಪೂರ್ಣವಾದ ಮಾಹಿತಿಯನ್ನು ಇಂದು ನಿಮಗೆ ತಿಳಿಸುತ್ತೇವೆ.

ಕೊಲ್ಲೂರು ಮೂಕಾಂಬಿಕೆ ಮುಖಸೂರನನ್ನು ಸಂಹಾರ ಮಾಡಿದ್ದರಿಂದ ಈ ಪುಣ್ಯ ಕ್ಷೇತ್ರವನ್ನು ಮಾರಣ ಕಟ್ಟೆ ಎಂದು ಕರೆಯಲಾಗುತ್ತದೆ. ಈ ಮಾರಣ ಕಟ್ಟೆಯ ದೇವಾಲಯದ ಗರ್ಭ ಗುಡಿಯಲ್ಲಿ ಮಣ್ಣಿನ ಮಟ್ಟದಲ್ಲಿ ಕೆಂಪು ಬಣ್ಣದಿಂದ ಕೂಡಿರುವ ಬ್ರಹ್ಮಲಿಂಗೇಶ್ವರ ಎಂಬ ಹೆಸರಿನಿಂದ ಕರೆಯುವ ಮೂಕಾಸುರನೆಂಬ ಬಲಿಷ್ಠವಾದ ಬೂತಾದಿ ಪತಿತ್ವ ಹೊಂದಿದ್ದಾನೆ. ಶ್ರೀ ಆದಿ ಶಂಕರಾಚಾರ್ಯರು ಶ್ರೀ ಮೂಕಾಂಬಿಕಾ ದೇವಿಯ ಇಷ್ಟ ವಿಗ್ರಹವನ್ನು ಪಂಚಲೋಹಗಳ ಪ್ರತಿಷ್ಠಾಪಿಸಿ ನಂತರ ಮಾರಣ ಕಟ್ಟೆ ಮಾರ್ಗವಾಗಿ ಬಂದು ಬ್ರಹ್ಮಲಿಂಗೇಶ್ವರ ಸನ್ನಿಧಿಯಲ್ಲಿ ಶ್ರೀ ಚಕ್ರವನ್ನು ಸ್ಥಾಪಿಸಿ ಕ್ಷೇತ್ರದ ಜಾಗೃತಗೊಳಿಸಿದರೆ ಎಂಬ ಪ್ರತೀತಿ ಇದೆ. ಈ ದೇವಸ್ಥಾನದ ಸಮೀಪ ಸ್ಥಳದಲ್ಲಿಯೇ ಬ್ರಹ್ಮಕುಂಡ ಎಂಬ ಕುಂಡ ಕೂಡ ಇದೆ ಇಲ್ಲಿನ ನೀರು ಅತ್ಯಂತ ಪವಿತ್ರವಾದದ್ದು ಎಂದೂ ಪುರಾಣಗಳಲ್ಲಿ ತಿಳಿಸಲಾಗಿದೆ ಆ ನೀರು ಯಾವುದು ಹಾಗೂ ಈ ಒಂದು ಸ್ಥಳದ ಪುರಾಣ ಏನು ಎಂಬುದನ್ನು ತಿಳಿಸುತ್ತೇವೆ.

By admin

Leave a Reply

Your email address will not be published. Required fields are marked *