ಸಾಮಾನ್ಯವಾಗಿ ನಮ್ಮ ದೇಹದಲ್ಲಿ ಕೆಲವು ಅಂಗಗಳು ಕಪ್ಪು ಬಣ್ಣದಿಂದ ಕೂಡಿರುತ್ತದೆ ಕೆಲವೊಮ್ಮೆ ಕುತ್ತಿಗೆಯ ಭಾಗಗಳು ಇನ್ನು ಕೆಲವೊಮ್ಮೆ ಕೈ ಕಾಲುಗಳು ಬಿಸಿಲಿಗೆ ಹೋದರೆ ಹೆಚ್ಚು ಕಪ್ಪು ಬಣ್ಣಕ್ಕೆ ತಿರುಗುತ್ತದೆ. ಅಂತವರು ತಮ್ಮ ಚರ್ಮವನ್ನು ಬಿಳಿ ಬಣ್ಣಕ್ಕೆ ತಿರುಗಿಸಬೇಕು ಅಂದರೆ ಮನೆಯಲ್ಲಿ ಇರುವ ಪದಾರ್ಥಗಳನ್ನು ಬಳಸಿಕೊಂಡು ಈ ಒಂದು ಮನೆ ಮದ್ದನ್ನು ತಯಾರಿಸಿಕೊಂಡು ಹಚ್ಚುತ್ತ ಬಂದರೆ ಕೇವಲ ಒಂದೇ ರಾತ್ರಿಯಲ್ಲಿ ನಿಮ್ಮ ಚರ್ಮದ ಬಣ್ಣ ಹೊಳೆಯುತ್ತದೆ. ಈ ಒಂದು ಮನೆ ಮದ್ದಿಗೆ ಬೇಕಾಗುವ ಪದಾರ್ಥಗಳು ನಿಂಬೆ ಹಣ್ಣು, ಕೊಬ್ಬರಿ ಎಣ್ಣೆ, ರೊಸ್ ವಾಟರ್ ಗ್ಲಿಸರಿನ್ ಇದಿಷ್ಟು ಪದಾರ್ಥಗಳು ಇದ್ದರೆ ಸಾಕು ತುಂಬಾ ಸುಲಭವಾಗಿ ಮನೆಯಲ್ಲಿಯೇ ಈ ಒಂದು ಮನೆ ಮದ್ದನ್ನು ತಯಾರಿಸಿ ಕೊಳ್ಳಬಹುದು. ಮೊದಲಿಗೆ ಒಂದು ಬಟ್ಟಲಿಗೆ ಎರಡು
ನಿಂಬೆ ಹಣ್ಣುಗಳನ್ನು ತೆಗೆದುಕೊಂಡು ಅದರ ರಸವನ್ನು ಹಿಂಡಿಕೊಳ್ಳಿ.
ನಂತರ ಅದಕ್ಕೆ ಎರಡು ಟೇಬಲ್ ಸ್ಪೂನ್ ಕೊಬ್ಬರಿ ಎಣ್ಣೆಯನ್ನು ಹಾಕಿ, ನಂತರ ಅದಕ್ಕೆ ಎರಡು ಟೇಬಲ್ ಸ್ಪೂನ್ ರೋಸ್ ವಾಟರ್ ಅನ್ನು ಹಾಕಿ, ನಂತರ ಒಂದು ಟೇಬಲ್ ಸ್ಪೂನ್ ಗ್ಲಿಸರಿನ್ ಅನ್ನು ಹಾಕಿ ಎಲ್ಲವನ್ನೂ ಮಿಕ್ಸ್ ಮಾಡಿ ಕೊನೆಯದಾಗಿ ಆರರಿಂದ ಏಳು ಟೇಬಲ್ ಸ್ಪೂನ್ ನೀರನ್ನು ಹಾಕಿ ಮಿಕ್ಸ್ ಮಾಡಿ ಮತ್ತೊಮ್ಮೆ ಚೆನ್ನಾಗಿ ಕಲಸಿಕೊಳ್ಳಿ. ನಂತರ ಈ ಒಂದು ಮಿಶ್ರಣವನ್ನು ಒಂದು ಸ್ಪ್ರೇ ಬಾಟಲ್ ಗೆ ಹಾಕಿಕೊಂಡು ರಾತ್ರಿಯ ಸಮಯ ಮಲಗುವ ಮುನ್ನ ನಿಮ್ಮ ದೇಹದಲ್ಲಿ ಯಾವ ಭಾಗದಲ್ಲಿ ಕಪ್ಪು ಬಣ್ಣ ಹೆಚ್ಚಾಗಿರುತ್ತದೆ ಆ ಒಂದು ಭಾಗಕ್ಕೆ ಈ ಮಿಶ್ರಣವನ್ನು ಸ್ಪ್ರೇ ಮಾಡಿ ಸ್ವಲ್ಪ ಮಸಾಜ್ ಮಾಡಿ ರಾತ್ರಿ ಪೂರ್ತಿ ಹಾಗೆಯೇ ಬಿಟ್ಟು ಬೆಳಗ್ಗೆ ಎದ್ದು ಸ್ನಾನ ಮಾಡಿ.
ರಾತ್ರಿ ಒಂದು ನಿಮಿಷ ಹಚ್ಚಿ ಸಾಕು ದೇಹವೇ,ಬಾಡಿ ಫುಲ್ ಬೆಳ್ಳಗಾಗಿ ಪಳಪಳ ಎಂದು ಹೊಳೆಯುತ್ತದೆ…
