ತಕ್ಷಣ ಮನೆಗೆ ಕರೆದುಕೊಂಡು ಬನ್ನಿ,ಸ್ವತಃ ದರ್ಶನ್ ಅವರೆ ಮನೆಗೆ ಕರೆಸಿಕೊಂಡ ಈ ಪುಟ್ಟ ಹುಡುಗಿ ಯಾರು ಗೊತ್ತಾ? - Karnataka's Best News Portal

ದರ್ಶನ್ ಕರ್ನಾಟಕದಲ್ಲಿ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿರುವ ಏಕೈಕ ನಟ ಅಂತನೇ ಹೇಳಬಹುದು. ಅಭಿಮಾನಿಗಳ ದೇವರು ಅಂತಾನೆ ದರ್ಶನ್ ಅವರನ್ನು ಕರೆಯುತ್ತದೆ ಏಕೆಂದರೆ ಅಭಿಮಾನಿಗಳಿಗೆ ಬಹಳಷ್ಟು ಗೌರವ ಪ್ರೀತಿಯನ್ನು ನೀಡುತ್ತಾರೆ. ಇನ್ನು ಪ್ರತಿ ವಾರವೂ ಕೂಡ ದರ್ಶನ್ ಅವರ ಮನೆಗೆ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಬರುತ್ತಾರೆ ಆದರೆ ಈ ಬಾರಿ ದರ್ಶನ್ ಅವರೇ ಸ್ವತಃ ಕರೆ ಮಾಡಿ ಈ ಬಾಲಕಿಯನ್ನು ಮೆನೆಗೆ ಕರೆಸಿಕೊಂಡಿದ್ದಾರೆ. ಅಷ್ಟಕ್ಕೂ ದರ್ಶನ್ ಈ ರೀತಿ ಮಾಡಲು ಕಾರಣವೇನು ಎಂದು ಕೇಳಿದರೆ ನಿಜಕ್ಕೂ ನಮಗೆ ಆಶ್ಚರ್ಯವಾಗುವುದು ಖಂಡಿತ. ಹೌದು ಕೇವಲ ಮೂರು ವರ್ಷದ ಪುಟ್ಟ ಬಾಲಕಿಯ ಈಜುವ ಸಾಧನೆ ಕೇಳಿ ದರ್ಶನ್ ಹೀಗೆ ಮಾಡಿದ್ದಾರೆ ವಿಚಾರ ಏನೆಂದರೆ. ಕಿಪ್ಪಡಿ ಗ್ರಾಮದ ಗಿರೀಶ್ ಹಾಗೂ ವಿನುತಾ ದಂಪತಿಯ ಪುತ್ರಿ ಮಿಥಿಲಾ ದರ್ಶನ್ ಅವರ ಅಪ್ಪಟ ಅಭಿಮಾನಿ ಕಳೆದ ವರ್ಷ ಆಕೆಗೆ 2.5 ಕಿ.ಮೀ ದೂರ ಈಜಬೇಕು ಎಂಬ ಸ್ಪರ್ಧೆ ಬರುತ್ತದೆ.


ಆಗ ಆ ಹುಡುಗಿ ನಾನ್ಯಾಕೆ ಅಷ್ಟು ದೂರ ಈಜಬೇಕು ಎಂದು ಅಪ್ಪ ಅಮ್ಮನನ್ನು ಕೇಳಿದ್ದಾಳೆ ಆಗ
ಉಪಾಯ ಮಾಡಿದ ಮಿಥಿಲಾಳ ಪೋಷಕರು ನೀನು 2.5 ಕಿ.ಮೀ. ದೂರ ಈಜಿದರೆ ಆಕಡೆ ದಡದಲ್ಲಿ ದರ್ಶನ್ ಅವರು ನಿನಗಾಗಿ ಕಾಯುತ್ತಿದ್ದಾರೆ ಎಂದು ಹೇಳಿ ನಂಬಿಸಿದ್ದಾರೆ. ಅಪ್ಪ ಅಮ್ಮನ ಮಾತು ನಂಬಿ ಅತ್ತ ದರ್ಶನ್ ಇದ್ದಾರೆಂದು ಪಟಪಟನೆ ಸರಾಗವಾಗಿ ಈಜಿ ಆಕಡೆ ದಡಕ್ಕೆ ಸೇರಿದ್ದಾಳೆ. ಆದರೆ ಅಲ್ಲಿ ದರ್ಶನ್ ಮಾತ್ರ ಇರಲಿಲ್ಲ. ದರ್ಶನ್ ಇಲ್ಲದ್ದನ್ನು ನೋಡಿ ಮಗಳು ಪ್ರತಿದಿನವೂ ಕೂಡ ಅಪ್ಪನನ್ನು ದರ್ಶನ್ ಇಲ್ಲ ನೀವು ನನಗೆ ಮೋಸ ಮಾಡಿದ್ದೀರಿ ಎಂದು ಅಳುತ್ತಿದ್ದಳು. ಈ ವಿಷಯವನ್ನು ತಿಳಿದುಕೊಂಡ ದರ್ಶನ್ ಅವರ ತಂದೆಗೆ ಕರೆ ಮಾಡಿ ಮನೆಗೆ ಕರೆಸಿಕೊಂಡು ಪುಟ್ಟ ಬಾಲಕಿಯನ್ನು ಪ್ರಶಂಸೆ ಮಾಡಿ ಹಲವಾರು ಉಡುಗೊರೆಗಳನ್ನು ನೀಡಿ ಒಂದಷ್ಟು ಸಮಯವನ್ನು ಕಳೆದಿದ್ದಾರೆ. ಒಬ್ಬ ಸ್ಟಾರ್ ನಟ ಇಂತಹ ದೊಡ್ಡ ಗುಣವನ್ನು ತೋರಿದ್ದು ನಿಜಕ್ಕೂ ಕೂಡ ಔದಾರ್ಯವೇ ಸರಿ..

By admin

Leave a Reply

Your email address will not be published. Required fields are marked *