ರಮೇಶ್ ಅರವಿಂದ್ ಅವರ ಮಗಳ ಅರಿಶಿನ ಶಾಸ್ತ್ರದ ಅಪರೂಪದ ಫೋಟೋಗಳು ಹೇಗಿದೆ ಗೊತ್ತಾ... - Karnataka's Best News Portal

ಖ್ಯಾತ ನಟ ರಮೇಶ್ ಅರವಿಂದ್ ಅವರ ಮನೆಯಲ್ಲಿ ಇದೀಗ ಮದುವೆಯ ಸಂಭ್ರಮ ಮನೆ ಮಾಡಿದೆ ರಮೇಶ್ ಅರವಿಂದ್ ಹಾಗೂ ಅರ್ಚನಾ ದಂಪತಿಯ ಪುತ್ರಿ ನಿಹಾರಿಕಾ ಅವರ ಮದುವೆ ಅಕ್ಷಯ ಎಂಬ ಹುಡುಗನೊಂದಿಗೆ ನಿಶ್ಚಯವಾಗಿದೆ. ಇದೇ ಡಿಸೆಂಬರ್ 28 ರಂದು ಅಂದರೆ ಇವತ್ತು ನಿಹಾರಿಕಾ ಹಾಗೂ ಅಕ್ಷಯ್ ಕುಮಾರ್ ಅವರ ಮದುವೆ ನಡೆಯುತ್ತಿದೆ. ನಿಹಾರಿಕ ಅವರು ಹಾಗೂ ಅವರು ಮದುವೆಯಾಗುತ್ತಿರುವ ಹುಡುಗ ಅಕ್ಷಯ್ ಅವರು ಇಬ್ಬರೂ ಕೂಡ ಒಂದೇ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು ಈಗ ನೂತನ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ‌. ರಮೇಶ್ ಅರವಿಂದ್ ಅವರ ಮನೆಯಲ್ಲಿ ಅರಿಶಿಣ ಶಾಸ್ತ್ರ ಅದ್ದೂರಿಯಾಗಿ ನೆಡೆದಿದೆ ರಮೇಶ್ ಅರವಿಂದ್ ಹಾಗೂ ಅರ್ಚನ ಅವರ ಪುತ್ರಿ ಆದಂತಹ ನಿಹಾರಿಕಾ ಅವರ ಮದುವೆ ಸುದ್ದಿಯನ್ನು ಕೇಳಿ ಇಡೀ ಅಭಿಮಾನಿಗಳು ಸಂತಸಗೊಂಡಿದ್ದಾರೆ. ಇನ್ನೂ ರಮೇಶ್ ಅರವಿಂದ್ ಮತ್ತು ಅರ್ಚನಾ

ದಂಪತಿಗಳಿಗೆ ಇಬ್ಬರು ಮಕ್ಕಳು ಇದ್ದು ಒಬ್ಬಳು ಮಗಳು ನಿಹಾರಿಕಾ, ಹಾಗೂ ಇನ್ನೊಬ್ಬ ಮಗನ ಅರ್ಜುನ್.ನಿಹಾರಿಕಾ ಇತ್ತೀಚಿಗೆ ಪದವಿಯನ್ನು ಮುಗಿಸಿ ಒಂದು ಖಾಸಗಿ ಕಂಪನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು ನಂತರ ಇದೀಗಾ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಇಂದು ನಿಹಾರಿಕಾ ಅವರ ಅರಿಶಿಣ ಕಾರ್ಯ ಮುಗಿದಿದ್ದು ಎಲ್ಲರೂ ಕೂಡ ಆಶೀರ್ವಾದವನ್ನು ಮಾಡಿ ಆರೈಸಿದ್ದಾರೆ ಈಗ ರಮೇಶ್ ಅರವಿಂದ್ ಹಾಗೂ ಅರ್ಚನ ದಂಪತಿಯ ಪುತ್ರಿಯ ಕೈ ಹಿಡಿಯಲಿರುವ ಹುಡುಗ ಯಾರು ಎಂಬ ಮಾಹಿತಿ ಕೂಡ ಈಗಾಗಲೇ ಹೊರ ಬಿದ್ದಿದೆ. ನಿಹಾರಿಕ ಮದುವೆಯಾಗುತ್ತಿರುವ ಹುಡುಗ ಅಕ್ಷಯ್ ಅವರು ಸಿನಿಮಾ ಕ್ಷೇತ್ರದವರು ಅಲ್ಲ ಬದಲಿಗೆ ನಿಹಾರಿಕಾ ಮತ್ತು ಅಕ್ಷಯ ಒಂದೇ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ಎರಡೂ ಕುಟುಂಬದವರು ಕೂಡ ಮದುವೆಗೆ ಒಪ್ಪಿ ಈ ಒಂದು ಮದುವೆಯ ನಿಶ್ಚಯ ಮಾಡಿದ್ದಾರೆ‌. ನೂತನ ಜೀವನಕ್ಕೆ ಕಾಲಿಡುತ್ತಿರುವ ದಂಪತಿಗಳಿಗೆ ಶುಭ ಹಾರೈಕೆಯನ್ನು ನೀಡಿ.

By admin

Leave a Reply

Your email address will not be published. Required fields are marked *