ಅರ್ಜುನ್ ಸರ್ಜಾ ಅವರ ಎಂಗೇಜ್ಮೆಂಟ್ ಫೋಟೋ ನೋಡಿ ಶಾಕ್ ಆದ ಅಭಿಮಾನಿಗಳು... » Karnataka's Best News Portal

ಅರ್ಜುನ್ ಸರ್ಜಾ ಅವರ ಎಂಗೇಜ್ಮೆಂಟ್ ಫೋಟೋ ನೋಡಿ ಶಾಕ್ ಆದ ಅಭಿಮಾನಿಗಳು…

ಈ ಪೋಟೋ ನೋಡಿದಾಗಲೇ ತಿಳಿದದ್ದು ಅರ್ಜುನ್ ಸರ್ಜಾ ಹಾಗೂ ಅನು ಪ್ರಭಾಕರ್ ಅವರ ಇಬ್ಬರ ನಡುವಿನ ಸಂಬಂಧ ಎಂತಹದು ಅಂತ. ಹೌದು ಅನು ಪ್ರಭಾಕರ್ ಮುಖರ್ಜಿಯವರು ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾದಲ್ಲಿ ತುಂಬಾನೇ ಆಕ್ಟಿವ್ ಆಗಿದ್ದಾರೆ. ಅಭಿಮಾನಿಗಳ ಜೊತೆ ಫೇಸ್ ಬುಕ್ ನಲ್ಲಿ ಇನ್ಸ್ಟಾ ಗ್ರಾಮ್ ನಲ್ಲಿ ತಮ್ಮ ನೆನಪುಗಳನ್ನು ಹಳೆಯ ಫೋಟೋಗಳನ್ನು ಶೇರ್ ಮಾಡುವ ಮೂಲಕ ಸುದ್ದಿಯಾಗುತ್ತಾರೆ. ಹಾಗೇ ಅರ್ಜುನ್ ಸರ್ಜಾ ಕುಟುಂಬಕ್ಕೆ ಸಂಬಂಧಿಸಿದ ಒಂದು ಫೋಟೋ ಅನು ಪ್ರಭಾಕರ್ ಶೇರ್ ಮಾಡಿದ್ದಾರೆ ಈ ಫೋಟೋವನ್ನು ನೋಡಿದ ಅನುಪ್ರಭಾಕರ್ ಅಭಿಮಾನಿಗಳಿಗೆ ಸ್ವಲ್ಪ ಆಶ್ಚರ್ಯ ಉಂಟಾಗಿದ್ದು ನಿಜ. ಏಕೆಂದರೆ ತುಂಬಾ ಜನರಿಗೆ ಗೊತ್ತಿಲ್ಲದಂತಹ ವಿಷಯ ಏನೆಂದರೆ ಅನು ಪ್ರಭಾಕರ್ ಕುಟುಂಬಕ್ಕೂ ಮತ್ತು ಅರ್ಜುನ್ ಸರ್ಜಾ ಹಾಗೂ ಮೇಘನ ರಾಜ್ ಕುಟುಂಬಕ್ಕೂ ಸಂಬಂಧವಿದೆ.

ಅದೇನೆಂದರೆ ಅರ್ಜುನ್ ಸರ್ಜಾ ಅವರು ಅನು ಪ್ರಭಾಕರ್ ಅವರ ಸ್ವಂತ ಮಾವ ಈ ಫೋಟೋ ಶೇರ್ ಮಾಡುತ್ತಾ ಅನು ಪ್ರಭಾಕರ್ ಅವರು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹೀಗೆ ಬರೆದು ಕೊಂಡಿದ್ದಾರೆ. ನನ್ನ ಅಕ್ಕ ನಿವೇದಿತಾ ಹಾಗೂ ಭಾವ ಅರ್ಜುನ್ ಸರ್ಜಾ ಅವರ ನಿಶ್ಚಿತಾರ್ಥದ ಫೋಟೋ. ಭಾವನ ತೊಡೆಯ ಮೇಲೆ ಚಿರಂಜೀವಿ ಸರ್ಜಾ ಅಕ್ಕನ ತೊಡೆಯ ಮೇಲೆ ನಾನು. ಫ್ರೈಸ್ ಲೆಸ್ ಫೋಟೋ ಚಿರು ಐ ಹೋಪ್ ಯೂ ಆರ್ ಹ್ಯಾಪಿ & ಪೀಸ ಫುಲ್ ಎವರಿವೇರ್ ಎಂದು ಐಶ್ವರ್ಯ ಅರ್ಜುನ್, ಹಾಗೂ ರಘು ಮುಖರ್ಜಿ, ಮತ್ತು ಮೇಘನಾ ರಾಜ್ ಅವರಿಗೆ ಟ್ಯಾಗ್ ಮಾಡಿದ್ದಾರೆ ಅದಕ್ಕೆ ಮೇಘನ ರಾಜ್ ರವರು ಕೂಡ ಇನ್ಸ್ಟಾಗ್ರಾಂ ನಲ್ಲಿ ಐ ಲವ್ ದಿಸ್ ಪಿಚ್ಚರ್ ಎಂದು ರಿಪ್ಲೈ ಮಾಡಿದ್ದಾರೆ.

WhatsApp Group Join Now
Telegram Group Join Now
[irp]


crossorigin="anonymous">