ಟೀ ಸ್ಟೈನರ್ ಅನ್ನು ಬಳಸಿ ಒಂದು ಸುಲಭವಾದ ರೀತಿಯಲ್ಲಿ ಸ್ವಚ್ಚಗೊಳಿಸುವ ವಿಧಾನ... » Karnataka's Best News Portal

ಟೀ ಸ್ಟೈನರ್ ಅನ್ನು ಬಳಸಿ ಒಂದು ಸುಲಭವಾದ ರೀತಿಯಲ್ಲಿ ಸ್ವಚ್ಚಗೊಳಿಸುವ ವಿಧಾನ…

ಸಾಮಾನ್ಯವಾಗಿ ಅಡುಗೆ ಮನೆ ಎಂದ ಮೇಲೆ ಅಲ್ಲಿ ಟೀ ಕಾಫಿಯನ್ನು ನಾವು ಅತಿ ಹೆಚ್ಚಾಗಿ ಬಳಕೆ ಮಾಡುತ್ತೇವೆ ಟೀ ಮತ್ತು ಕಾಫಿಯನ್ನು ಶೋಧಿಸಲು ನಾವು ಸ್ಟೈನರ್ ಅನ್ನು ಹೆಚ್ಚಾಗಿ ಬಳಕೆ ಮಾಡುತ್ತೇವೆ. ಇನ್ನೂ ಟೀ ಮತ್ತು ಕಾಫಿ ಯಲ್ಲಿ ಜಿಡ್ಡಿನ ಅಂಶ ಹೆಚ್ಚು ಇರುವುದರಿಂದ ಇದರಲ್ಲಿ ಅದರ ಕರೆ ಹಾಗೇ ಉಳಿದುಕೊಳ್ಳುತ್ತದೆ. ಈ ಕಲೆಯನ್ನು ನಾವು ಎಷ್ಟು ಬಾರಿ ತೊಳೆದರೂ ಕೂಡ ಅದನ್ನು ಸಂಪೂರ್ಣವಾಗಿ ಶುದ್ಧಗೊಳಿಸುವುದು ಕಷ್ಟ ಹಾಗಾಗಿ ಮನೆಯಲ್ಲಿ ಸಿಗುವ ಪದಾರ್ಥಗಳನ್ನು ಬಳಸಿಕೊಂಡು ಯಾವ ರೀತಿ ಟೀ ಸ್ಟೈನರ್ ಅನ್ನು ಸ್ವಚ್ಚ ಮಾಡಿಕೊಳ್ಳಬಹುದು ಎಂಬುದನ್ನು ತಿಳಿಸುತ್ತೇವೆ ಇನ್ನೂ ಈ ಒಂದು ವಿಧಾನವನ್ನು ಮಾಡಲು ಬೇಕಾಗುವ ಪದಾರ್ಥಗಳು ಯಾವುದು ಅಂದರೇ ಬೇಕಿಂಗ್ ಸೋಡಾ, ಅಡುಗೆ ಉಪ್ಪು, ಹಾಗೂ ವಿನೆಗರ್ ಮತ್ತು ನೀರು ಇದಿಷ್ಟು ಬೇಕಾಗುವ ಪದಾರ್ಥಗಳು.

ಮೊದಲನೇದಾಗಿ ಒಂದು ಅಗಲವಾದ ಪಾತ್ರೆಗೆ ಒಂದು ಟೇಬಲ್ ಸ್ಪೂನ್ ಬೇಕಿಂಗ್ ಸೋಡಾ, ಎರಡು ಟೇಬಲ್ ಸ್ಪೂನ್ ವಿನೆಗರ್, ಹಾಗೂ ಒಂದು ಟೇಬಲ್ ಸ್ಪೂನ್ ಕಲ್ಲು ಉಪ್ಪು, ಎರಡು ಲೋಟ ನೀರನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಆ ಪಾತ್ರೆಯ ಒಳಗೆ ಟೀ ಸ್ಟೈನರ್ ಹಾಕಿ ರಾತ್ರಿ ಪೂರ್ತಿ ಹಾಗೆಯೇ ಬಿಡಬೇಕು. ರಾತ್ರಿ ಪೂರ್ತಿ ನೆನೆದ ನಂತರ ಆ ಸ್ಟೈನರ್ ಅನ್ನು ಮೇಲೆ ತೆಗೆದು ಸ್ಟೀಲ್ ಬ್ರಶ್ ಹಾಗೂ ಸೋಪ್ ನಾ ಸಹಾಯದಿಂದ ಅದನ್ನು ಕ್ಲೀನ್ ಮಾಡಿ ನೀರಿನಿಂದ ತೊಳೆದರೆ ಇದು ಹೊಸದರಂತೆ ಬದಲಾಗುತ್ತದೆ. ಎಷ್ಟೇ ಹಳೆಯದಾದ ಜಿಡ್ಡು ಮತ್ತು ಕಲೆಗಳು ಇದ್ದರೂ ಕೂಡ ಅದು ಹೊಸದರಂತೆ ಹೊಳೆಯುತ್ತದೆ.

WhatsApp Group Join Now
Telegram Group Join Now
See also  ಮನೆ ಕಟ್ಟುವ ಮುನ್ನ ಈ ವಿಡಿಯೋ ನೋಡಿ ಸ್ವಂತ ಮನೆ ಒಳ್ಳೆಯದಾ ಬಾಡಿಗೆ ಮನೆ ಒಳ್ಳೆಯದಾ ಹೋಮ್ ಲೋನ್ ಪಡೆದು ಮನೆ ಕಟ್ಟುವುದು ಸರಿಯೇ..
[irp]


crossorigin="anonymous">