ಸೊಳ್ಳೆ ಅಥವಾ ನುಸಿಯನ್ನು ಓಡಿಸಲು ಕೆಮಿಕಲ್ ಫ್ರೀ ಹೋಂ ರೆಮಿಡಿ ಮಾಡುವುದು ಹೇಗೆ..? ನಿಮಗಿದು ಗೊತ್ತಾ.. » Karnataka's Best News Portal

ಸೊಳ್ಳೆ ಅಥವಾ ನುಸಿಯನ್ನು ಓಡಿಸಲು ಕೆಮಿಕಲ್ ಫ್ರೀ ಹೋಂ ರೆಮಿಡಿ ಮಾಡುವುದು ಹೇಗೆ..? ನಿಮಗಿದು ಗೊತ್ತಾ..

ಸಾಮಾನ್ಯವಾಗಿ ಮಳೆಗಾಲ ಅಥವಾ ಬೇಸಿಗೆ ಬಂದರೆ ಸಾಕು ಸೊಳ್ಳೆಗಳು ಹೆಚ್ಚಾಗುತ್ತದೆ ನಿಂತ ನೀರಿನಲ್ಲಿ ಹಾಗೂ ಹಸಿರು ಹೆಚ್ಚಾಗಿರುವ ಸ್ಥಳಗಳಲ್ಲಿ ಸೊಳ್ಳೆಗಳು ಉತ್ಪತ್ತಿಯಾಗುತ್ತದೆ. ಸೊಳ್ಳೆಗಳು ಹಲವಾರು ರೀತಿಯ ಸಾಂಕ್ರಾಮಿಕ ಕಾಯಿಲೆಗಳನ್ನು ತರುತ್ತದೆ ಡೆಂಗ್ಯೂ-ಮಲೇರಿಯಾ ಚಿಕನ್ ಗುನ್ಯಾ ಇದೇ ರೀತಿಯ ಅತಿ ಹೆಚ್ಚು ಆರೋಗ್ಯಕ್ಕೆ ಪರಿಣಾಮ ಬೀರುವಂತಹ ಕಾಯಿಲೆಗಳನ್ನು ತರುತ್ತದೆ. ಹಾಗಾಗಿ ಸೊಳ್ಳೆಗಳಿಂದ ಆದಷ್ಟು ನಮ್ಮನ್ನು ನಾವು ರಕ್ಷಿಸಿಕೊಳ್ಳಬೇಕು ಅಂತ ಎಲ್ಲರೂ ಕೂಡ ಅಂದುಕೊಳ್ಳುತ್ತಾರೆ ಆದರೆ ಕೆಲವೊಂದಷ್ಟು ಕೆಮಿಕಲ್ಸ್ ಯುಕ್ತ ಕಾಯಿಲ್ ಅಥವಾ ಸೊಳ್ಳೆ ಬತ್ತಿ ಬಳಸುವುದರಿಂದ ಅವುಗಳಿಂದಲೂ ಕೂಡ ನಮ್ಮ ದೇಹಕ್ಕೆ ಅಡ್ಡ ಪರಿಣಾಮಗಳು ಹೆಚ್ಚಾಗುತ್ತದೆ. ಆದರಿಂದ ಮನೆಯಲ್ಲಿಯೇ ಸುಲಭವಾಗಿ ಸಿಗುವಂತಹ ಕೆಲವೊಂದಿಷ್ಟು ಪದಾರ್ಥಗಳನ್ನು ಬಳಸಿಕೊಂಡು ನೈಸರ್ಗಿಕ ಮನೆ ಮದ್ದನ್ನು ಹೇಗೆ ತಯಾರಿಸಿಕೊಳ್ಳಬಹುದು ಹಾಗೂ ಸೊಳ್ಳೆಯಿಂದ ಹೇಗೆ ಮುಕ್ತಿ ಪಡೆಯಬಹುದು ಎಂಬುದನ್ನು ಸಂಕ್ಷಿಪ್ತವಾಗಿ ನಿಮಗೆ ಒಂದು ಲೇಖನದಲ್ಲಿ ತಿಳಿಸುತ್ತೇವೆ.

ಇನ್ನೂ ಈ ಒಂದು ಮನೆ ಮದ್ದನ್ನು ತಯಾರಿಸಲು ನಿಮಗೆ ಮೊದಲಿಗೆ ಒಂದೆಲಗ ಅಥವಾ ಸಾಂಬ್ರಾಣಿ ಸೊಪ್ಪು ಎರಡು ಎಲೆ ಬೇಕಾಗುತ್ತದೆ ಜೊತೆಗೆ ಸ್ವಲ್ಪ ಬೇವಿನ ಸೊಪ್ಪು ಹಾಗೂ ಒಂದು ಕರ್ಪೂರ ಇವೆಲ್ಲವನ್ನೂ ಒಂದು ಮಿಕ್ಸಿ ಜಾರಿಗೆ ಹಾಕಿಕೊಂಡು ಚೆನ್ನಾಗಿ ಗ್ರೌಂಡ್ ಮಾಡಿಕೊಳ್ಳಿ. ಇದಕ್ಕೆ ನೀರನ್ನು ಹಾಕಬೇಡಿ ಗ್ರೈಂಡ್ ಆದ ಮಿಶ್ರಣವನ್ನು ಚಿಕ್ಕ ಚಿಕ್ಕ ಉಂಡೆಗಳನ್ನಾಗಿ ಮಾಡಿ ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಬೇಕು. ನಂತರ ಮನೆಯಲ್ಲಿ ಯಾವುದಾದರೂ ಹಳೆಯ ಸೌಟ್ ಅಥವಾ ತಟ್ಟೆ ಇದ್ದರೆ ಅದಕ್ಕೆ ಎರಡು ಕರ್ಪೂರವನ್ನು ಹಾಕಿ ಕರ್ಪೂರವನ್ನು ಹಚ್ಚಿ ಒಣಗಿಸಿದ ಈ ಒಂದು ಮಿಶ್ರಣವನ್ನು ಹಾಕಿ ಅದರ ಹೊಗೆಯನ್ನು ಮನೆಯ ಮೂಲೆ ಮೂಲೆಗೂ ತಲುಪಿಸಿದರೆ ಸೊಳ್ಳೆಗಳಿಂದ ಅತಿ ಬೇಗ ಮುಕ್ತಿ ಪಡೆಯಬಹುದು.

WhatsApp Group Join Now
Telegram Group Join Now
See also  ಸತತ ಅಭಿವೃದ್ಧಿ ಕೆಲಸಗಳನ್ನು ಮಾಡಿ ಜನರಿಂದ 3 ಬಾರಿ ಗೆದ್ದು ಬೆಂಗಳೂರು ಸೆಂಟ್ರಲ್ ನಲ್ಲಿ ಮತ್ತೊಮ್ಮೆ ವಿಜಯ ಕಹಳೆ ಮೊಳಗಿಸಲು ಸಜ್ಜಾದ ಮಾನ್ಯ ಪಿ.ಸಿ ಮೋಹನ್
[irp]


crossorigin="anonymous">