ಮುಸ್ಲಿಂ ದೇಶದ ನೋಟಿನಲ್ಲಿಯೂ ಗಣೇಶ ಪ್ರವಾಸಿಗರ ಸ್ವರ್ಗ.. ಇಂಡೋನೇಷಿಯಾದ ಶಾಕಿಂಗ್ ಸಂಗತಿಗಳು..!! - Karnataka's Best News Portal

ನಾವು ಇವತ್ತು ಈ ಜಗತ್ತಿನಲ್ಲಿ ಒಂದು ಅದ್ಭುತ ದೇಶದ ಬಗ್ಗೆ ತಿಳಿಸುತ್ತೇವೆ ಅದೊಂದು ಮುಸ್ಲಿಮ್ ರಾಷ್ಟ್ರವಾದರೂ ಅಲ್ಲಿನ ನೋಟಿನಲ್ಲಿ ಗಣಪತಿ ಚಿತ್ರ ಮುದ್ರಿಸಲಾಗುತ್ತದೆ. ಇಲ್ಲಿ ಧರ್ಮಕ್ಕಿಂತ ಹೆಚ್ಚು ಸಂಸ್ಕೃತಿಗೆ ಮಹತ್ವ ನೀಡಲಾಗುತ್ತದೆ ಆ ದೇಶವನ್ನು ದ್ವೀಪಗಳ ರಾಜ ಅಂತಾನೂ ಕರೆಯಲಾಗುತ್ತದೆ. ಅಷ್ಟೇ ಅಲ್ಲದೆ ಜ್ವಾಲಾಮುಖಿಗಳ ದೇಶ ಅಂತನೂ ಕೂಡ ಬಣ್ಣಿಸಲಾಗುತ್ತದೆ. ವಿಶ್ವದ ಅತಿ ದೊಡ್ಡ ಹೂವು ಇರುವುದು ಇದೇ ದೇಶದಲ್ಲಿ, ಹಾಗೂ ಜಗತ್ತಿನ ಅತಿ ದೊಡ್ಡ ಹಲ್ಲಿ ಜಾತಿಗೆ ಸೇರಿದ ಪ್ರಾಣಿ ಇರುವುದು ಕೂಡ ಇದೇ ದೇಶದಲ್ಲಿ. ಆ ದೇಶ ಬೇರೆ ಯಾವುದೂ ಅಲ್ಲ ಇಂಡೊನೇಷ್ಯ ಈ ದೇಶದ ಬಗ್ಗೆ ಪ್ರತಿಯೊಬ್ಬ ಭಾರತೀಯನಿಗೂ ಕೂಡ ಗೊತ್ತಿರಲೇ ಬೇಕಾದ ಪ್ರತಿಯೊಬ್ಬರೂ ಕೂಡ ನೋಡಲೇ ಬೇಕಾದ ಸಂಗತಿಯನ್ನು ಎಂದು ನಿಮಗೆ ತಿಳಿಸುತ್ತೇವೆ.

ಏಷ್ಯಾ ಖಂಡದ ಅತಿ ದೊಡ್ಡ ಮೂರನೇ ದೇಶ ಈ ದೇಶದಲ್ಲಿ ಜನಸಂಖ್ಯೆ 27 ಕೋಟಿ ಇಂಡೊನೇಷ್ಯ ಜಗತ್ತಿನಲ್ಲಿ ಅತಿ ದೊಡ್ಡ ಮುಸ್ಲಿಮ್ ರಾಷ್ಟ್ರ ಅಷ್ಟೇ ಅಲ್ಲದೆ ಜಗತ್ತಿನ ಮೂರನೇ ಪ್ರಜಾಪ್ರಭುತ್ವ ದೇಶ. ಇದು ಮಲೇಶಿಯಾ ಹಾಗು ಆಸ್ಟ್ರೇಲಿಯಾ ನಡುವೆ ಇರುವ ಸಾವಿರಾರು ದ್ವೀಪಗಳ ಸಮೂಹ ಗಳು ಸೇರಿ ಇಂಡೋನೇಷ್ಯಾ ಎಂಬ ರಾಷ್ಟ್ರ ಸ್ಥಾಪನೆಯಾಗಿದೆ. ಇಂಡೋನೇಷಿಯಾದ ಒಟ್ಟು ಜನಸಂಖ್ಯೆಯಲ್ಲಿ ಶೇಕಡ 88% ರಷ್ಟು ಮುಸ್ಲಿಮ್ ಧರ್ಮದವರು ಹಿಂದೂಗಳ ಸಂಖ್ಯೆ ಕೇವಲ ಎರಡರಷ್ಟು ಮಾತ್ರ ಆದರೂ ಇಲ್ಲಿ ಹಿಂದೂ ಸಂಸ್ಕೃತಿಯ ನಳನಳಿಸುತ್ತಿದೆ. ಇಂಡೊನೇಷ್ಯವನ್ನು ಯುವಕರ ರಾಷ್ಟ್ರ ಅಂತ ಕರೆಯುತ್ತಾರೆ ಅಲ್ಲಿನ ಜನಸಂಖ್ಯೆಯಲ್ಲಿ 17 ಕೋಟಿ ಜನರು 30 ವರ್ಷದೊಳಗಿನವರು ಇದ್ದಾರೆ ಹಾಗಾಗಿ ಇಂಡೋನೇಷಿಯಾ ತುಂಬೆಲ್ಲಾ ಜೋಶ್ ತುಂಬಿಕೊಂಡಿದೆ.

By admin

Leave a Reply

Your email address will not be published. Required fields are marked *