ಕರಗಲಾಗದ ಬೊಜ್ಜನ್ನು ಕರಗಿಸುವ ಶಕ್ತಿ ಹೇಳಿ ಮಾಡಿಸಿದ ಮನೆಮದ್ದು ಇದು ಬೊಜ್ಜು ಕರಗಿಸಿ ಚಮತ್ಕಾರ ಮಾಡುತ್ತೆ..! - Karnataka's Best News Portal

ಇತ್ತೀಚಿನ ದಿನಗಳಲ್ಲಿ ಬದಲಾದ ಜೀವನ ಶೈಲಿಯಿಂದ ನಮ್ಮ ಆಹಾರ ಕ್ರಮದಲ್ಲಿ, ಆರೋಗ್ಯದ ಕ್ರಮದಲ್ಲಿ ಬದಲಾವಣೆಯಾಗಿದೆ. ಈ ಬದಲಾವಣೆಯಿಂದಾಗಿ ನಮ್ಮ ದೇಹದ ಮೇಲೆ ಕೆಟ್ಟ ರೀತಿಯಾದಂತಹ ದುಷ್ಪರಿಣಾಮಗಳು ಬೀರುತ್ತದೆ ಈ ಕಾರಣಕ್ಕಾಗಿ ಆರೋಗ್ಯದಲ್ಲಿ ವ್ಯತ್ಯಾಸಗಳು ಕಂಡು ಬರುತ್ತಿದೆ. ಅದರಲ್ಲೂ ಕೂಡ ಇತ್ತೀಚಿನ ದಿನಗಳಲ್ಲಿ ಎಲ್ಲರೂ ಕೂಡ ಎದುರಿಸುತ್ತಿರುವ ಬಹು ದೊಡ್ಡ ಸಮಸ್ಯೆಯೆಂದರೆ ಬೊಜ್ಜು. ಈ ಬೊಜ್ಜು ಹೊಟ್ಟೆಯಲ್ಲಿ ಹೆಚ್ಚಾಗಿ ಸಂಗ್ರಹಿಸುವುದರಿಂದ ಇದು ಹಲವಾರು ರೀತಿಯ ರೋಗಗಳಿಗೆ ಎಡೆ ಮಾಡಿಕೊಡುತ್ತದೆ ಆಗಾಗಿ ಹೊಟ್ಟೆಯ ಸುತ್ತಲೂ ಇರುವ ಬೊಜ್ಜು ಕರಗಿಸಬೇಕೆಂದರೆ ನಾವು ತಿಳಿಸುವ ಈ ಒಂದು ಮನೆ ಮದ್ದನ್ನು ಪ್ರತಿದಿನ ಒಂದು ಬಾರಿ ಉಪಯೋಗಿಸಿದರೆ ಸಾಕು ಎಷ್ಟೇ ಬೊಜ್ಜು ಇದ್ದರು ಕೂಡ ಅದು ಬೇಗನೆ ಉಪಶಮನವಾಗುತ್ತದೆ.


ಈ ಒಂದು ಮನೆ ಮದ್ದನ್ನು ಮಾಡುವ ವಿಧಾನ ನೋಡುವುದಾದರೆ ಮೊದಲಿಗೆ ಒಂದು ಟೇಬಲ್ ಸ್ಪೂನ್ ಅಗಸೆ ಬೀಜ, ಒಂದು ಟೇಬಲ್ ಸ್ಪೂನ್ ಅಜ್ವಾನ, ಒಂದು ಟೇಬಲ್ ಸ್ಪೂನ್ ಸೋಂಪಾಕಾಳು, ಒಂದು ಟೇಬಲ್ ಸ್ಪೂನ್ ಜೀರಿಗೆ ಇವುಗಳನ್ನು ಮಿಡಿಯಂ ಫ್ಲೇಮ್ ನಲ್ಕಿ ಫ್ರೈ ಮಾಡಿಕೊಳ್ಳಬೇಕು. ನಂತರ ಇದು ತಣ್ಣಗಾದ ಮೇಲೆ ಮಿಕ್ಸಿ ಗೆ ಹಾಕಿ ಪೌಡರ್ ಮಾಡಿಕೊಳ್ಳಬೇಕು. ನಂತರ ಒಂದು ಲೋಟ ಬಿಸಿ ನೀರಿಗೆ ಒಂದು ಟೇಬಲ್ ಸ್ಪೂನ್ ತಯಾರಿಸಿದ ಈ ಪೌಡರ್ ಅನ್ನು ಹಾಕಿ ಮಿಕ್ಸ್ ಮಾಡಿ ಅರ್ಧ ಹೊಳು ನಿಂಬೆ ರಸ ಹಾಕಿ ಮಿಕ್ಸ್ ಮಾಡಿ ಕುಡಿಯಿರಿ. ಅಸಿಡಿಟಿ ಇದ್ದವರು ನಿಂಬೆರಸವನ್ನು ಸೇರಿಸಿ ಕುಡಿಯಬಾರದು, ಜೇನುತುಪ್ಪವನ್ನು ಸೇರಿಸಿ ಕುಡಿಯಬಹುದು ಮಧ್ಯಾಹ್ನ ಊಟದ ಒಂದು ಗಂಟೆಯ ನಂತರ ಕುಡಿಯಬೇಕು ಹೀಗೆ ಒಂದು ತಿಂಗಳು ಮಾಡಿದರೆ ಬೊಜ್ಜು ಕರಗುತ್ತದೆ. ಇದರ ಜೊತೆಗೆ ವ್ಯಾಯಾಮ, ಯೋಗ, ಧ್ಯಾನ ಕೂಡ ಮಾಡಿದಲ್ಲಿ ಖಂಡಿತಾ ವೇಟ್ ಲಾಸ್ ಆಗುತ್ತದೆ.

By admin

Leave a Reply

Your email address will not be published. Required fields are marked *