ಸ್ಯಾಂಡಲ್ ವುಡ್ ನಟರಲ್ಲಿ ಅತಿ ಶ್ರೀಮಂತ ನಟ ಯಾರು ಹಾಗೂ ಯಾರು ಅವರ ಒಟ್ಟು ಆಸ್ತಿ ಎಷ್ಟು ಗೊತ್ತಾ... - Karnataka's Best News Portal

ಸ್ಯಾಂಡಲ್ ವುಡ್ ನಾ ನಾಯಕ ನಟರು ಆದಂತಹ ದರ್ಶನ್ ಸುದೀಪ್ ಶಿವರಾಜ್ ಕುಮಾರ್ ಪುನೀತ್ ರಾಜಕುಮಾರ್ ಉಪೇಂದ್ರ ಧ್ರುವ ಸರ್ಜಾ ನವರಸ ನಾಯಕ ಜಗ್ಗೇಶ್ ಹೀಗೆ ಹಲವಾರು ಜನರು ಗಳಿಸಿರುವ ಒಟ್ಟು ಆಸ್ತಿ ಎಷ್ಟು ಹಾಗೂ ಅವರ ಆದಾಯದ ಮೂಲ ಯಾವುದು ಎಂಬುದರ ಬಗ್ಗೆ ಸಂಕ್ಷಿಪ್ತ ಮಾಹಿತಿಯನ್ನು ತಿಳಿಸುತ್ತೇವೆ. ವಯಸ್ಸು 60 ಆಗುತ್ತಾ ಬಂದರೂ ಯಂಗ್ ಆ್ಯಂಡ್ ಎನೆರ್ಜಿಟಿಕ್ ಆಗಿರುವಂತಹ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಹಲವಾರು ಮೂಲಗಳಿಂದ ಹಣವನ್ನು ಗಳಿಸುತ್ತಿದ್ದಾರೆ. ನಾಗವಾರದಲ್ಲಿ ಒಂದುವರೆ ಎಕರೆ ಜಾಗದಲ್ಲಿ ಬಂಗಲೆಯನ್ನು ಹೊಂದಿದ್ದು ಹಲವಾರು ಕಂಪನಿಯಲ್ಲಿ ಕೋಟ್ಯಂತರ ರುಪಾಯಿಗಳ ಮೌಲ್ಯದ ಷೇರುಗಳನ್ನು ಕೊಂಡುಕೊಂಡಿದ್ದಾರೆ ಬೆಂಗಳೂರು ಅಲ್ಲದೆ ಇತರ ಜಾಗಗಳಲ್ಲಿ ಕೂಡ ಕೆಲವೊಂದಷ್ಟು ಆಸ್ತಿಗಳನ್ನು ಗಳಿಸಿದ್ದು ಮೂಲಗಳ ಪ್ರಕಾರ 100 ರಿಂದ 140 ಕೋಟಿ ಆಸ್ತಿಯನ್ನು ಹೊಂದಿದ್ದಾರೆ ಎಂದು ತಿಳಿದು ಬಂದಿದೆ.

ನಟ ಹಾಗೂ ರಾಜಕಾರಣಿ ಆಗಿರುವಂತಹ ನವರಸ ನಾಯಕ ಜಗ್ಗೇಶ್ ಅವರು ಇತ್ತೀಚಿನ ದಿನಗಳಲ್ಲಿ ಅಷ್ಟು ಸಿನಿಮಾಗಳನ್ನು ಮಾಡದೇ ಇದ್ದರೂ ತಮ್ಮ ಸಾಮಾಜಿಕ ಕಾರ್ಯ ಹಾಗೂ ಕನ್ನಡಪರ ಹೋರಾಟಗಳಲ್ಲಿ ಸದಾ ಇರುತ್ತಾರೆ‌. ನಟನೆಯ ಜೊತೆ ಸಿನಿಮಾ ನಿರ್ಮಾಣಕ್ಕೆ ಸಹಾಯ ಮಾಡುವ ಫಿನನ್ಸ್ ಕಂಪನಿ ತೆರೆದಿದ್ದು ಹಲವಾರು ಪ್ರಾಪರ್ಟಿ ಗಳ ಮೇಲೆ ಇನ್ವೆಸ್ಟ್ ಮಾಡಿದರೆ ಒಟ್ಟಾರೆಯಾಗಿ 80 ರಿಂದ 100 ಕೋಟಿ ಆಸ್ತಿಯನ್ನು ಹೊಂದಿದ್ದಾರೆ ಎಂದು ತಿಳಿದು ಬಂದಿದೆ. ಇನ್ನೂ ಪ್ರಜಾಕೀಯ ಪಕ್ಷದ ಜೊತೆ ಏಳು ಭಾಷೆಯಲ್ಲಿ ಪ್ಯಾನ್ ಇಂಡಿಯಾ ಸಿನಿಮಾ ಮಾಡುತ್ತಿರುವ ರಿಯಲ್ ಸ್ಟಾರ್ ಉಪೇಂದ್ರ ಅವರು ಹಲವಾರು ಬಿಸಿನೆಸ್ ಗಳಲ್ಲಿ ಇನ್ವೆಸ್ಟ್ ಮಾಡಿದ್ದಾರೆ ತಮ್ಮದೇ ಆದ ಸ್ವಂತ ರೂಪೀಸ್ ಎಂಬ ಹೋಟೆಲ್ ಅನ್ನು ಹೊಂದಿದ್ದು ಹಲವಾರು ಪ್ರಾಪರ್ಟಿ ಗಳನ್ನೂ ಸಂಪಾದನೆ ಮಾಡಿದ್ದಾರೆ ಒಟ್ಟಾರೆಯಾಗಿ 80 ರಿಂದ 120 ಕೋಟಿ ಆಸ್ತಿಯನ್ನು ಮಾಡಿದ್ದಾರೆ ಎಂದು ಮೂಲಗಳಿಂದ ತಿಳಿದಿದೆ.

By admin

Leave a Reply

Your email address will not be published. Required fields are marked *