2021 ನೇ ವರ್ಷದಲ್ಲಿ ಇರುವಂತಹ 12 ದ್ವಾದಶ ರಾಶಿಗಳ ಭವಿಷ್ಯಗಳು ನೀವು ನೋಡಲೇ ಬೇಕಾದ ಮಾಹಿತಿ... - Karnataka's Best News Portal

12 ದ್ವಾದಶ ರಾಶಿಗಳಲ್ಲಿ ಈ ವರ್ಷ ಬಹಳಷ್ಟು ರಾಶಿಗಳಿಗೆ ಉತ್ತಮ ಫಲಿತಾಂಶಗಳು ದೊರೆಯುವುದನ್ನು ನಾವು ಕಾಣಬಹುದಾಗಿದೆ. ಕೆಲವೊಂದಷ್ಟು ರಾಶಿಗಳಿಗೆ ಈ ವರ್ಷ ಸ್ವಲ್ಪ ಕೆಡಕು ಉಂಟಾಗಬಹುದು ಹಾಗಾಗಿ ಯಾವ ರಾಶಿಯವರು ಉತ್ತಮ ಫಲಿತಾಂಶವನ್ನು ಪಡೆಯುತ್ತಾರೆ ಹಾಗೂ ಯಾವ ರಾಶಿಗಳಿಗೆ ಸಂಕಷ್ಟ ಒದಗಿಸುತ್ತದೆ ಎಂಬುದನ್ನು ಈ ಒಂದು ಲೇಖನದಲ್ಲಿ ಸಂಕ್ಷಿಪ್ತವಾಗಿ ನಿಮಗೆ ತಿಳಿಸುತ್ತೇವೆ. ಮೊದಲನೇದಾಗಿ ಮೇಷರಾಶಿ ಈ ವರ್ಷದ ಮೊದಲ ದಿನದ ಸೂರ್ಯೋದಯ 6:41 ನಿಮಿಷದಲ್ಲಿ ಆಗುತ್ತದೆ ಇನ್ನೂ ಮೇಷ ರಾಶಿಯವರಿಗೆ ಚಂದ್ರ ಕುಜ ಶುಭಮಂಗಳದ ಯೋಗವನ್ನು ನೀಡುತ್ತದೆ. ಬುಧಾದಿತ್ಯ ಯೋಗ ತುಂಬಾ ವಿಸ್ಮಯ ವಾದಂತಹ ಯೋಗ ಇದು ಇನ್ನೂ ಈ ರಾಶಿಯವರು ರಕ್ಷಣಾ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು, ಸರ್ಕಾರಿ ಮಟ್ಟದಲ್ಲಿ ಕೆಲಸ ನಿರ್ವಹಿಸುವಂತಹ ಅಧಿಕಾರಿಗಳು, ಇಂಪೋರ್ಟ್ ಮತ್ತು ಎಕ್ಸ್ ಪೋರ್ಟ್, ಹೈನುಗಾರಿಕೆ, ಕೃಷಿಗಾರಿಕೆ, ಜಮೀನ್ದಾರಿಕೆ, ಗ್ರಾನೆಟ್ ಡಿಸೈನ್ ಬಿಸಿನೆಸ್, ಗೌರ್ನಮೆಂಟ್ ಪ್ರಾಜೆಕ್ಟ್, ಗೌರ್ನಮೆಂಟ್ ವ್ಯವಹಾರ, ಐಟಿ ಇಂಡಸ್ಟ್ರಿ, ಟೆಕ್ನಿಕಲ್ ಇಂಡಸ್ಟ್ರಿ ಇವುಗಳಲ್ಲಿ ವಿಶೇಷವಾದಂತಹ ಯಶಸ್ಸನ್ನು ನೀವು ಕಾಣಬಹುದಾಗಿದೆ.

ಈ ವರ್ಷ ನಿಮಗೆ ಶುಭ ಸಂಖ್ಯೆ 1 ಆಗಿರುತ್ತದೆ, ಹಾಗೂ ಭಾನುವಾರ ನಿಮಗೆ ಅತ್ಯುತ್ತಮವಾದ ದಿನವಾಗಿರುತ್ತದೆ, ಇನ್ನು ನೀವು ಹಳದಿ ಬಣ್ಣದ ವಸ್ತ್ರವನ್ನು ಹಾಗೂ ಬಂಗಾರ ಬಣ್ಣದ ವಸ್ತ್ರಗಳನ್ನು ಧರಿಸಿದರೆ ತುಂಬಾ ಅದೃಷ್ಟಗಳನ್ನು ಕಾಣಬಹುದಾಗಿದೆ. ಮದುವೆಯಲ್ಲಿ ದೋಷವಿದ್ದರೆ ಅದು ನಿವಾರಣೆಯಾಗುತ್ತದೆ ಇನ್ನು ನೀವು ವೇಣುಗೋಪಾಲ ದೇವಸ್ಥಾನ ಹಾಗೂ ಲಕ್ಷ್ಮಿ ದೇವಸ್ಥಾನದಲ್ಲಿ ಸಂಕಲ್ಪ ಮಾಡಿಕೊಳ್ಳಿ. ಇನ್ನು ನೀವು ಎರಡನೇ ಜೀವನ ಅಂದರೆ ಎರಡನೇ ಮದುವೆ ಯಾಗಬೇಕು ಅಂದುಕೊಂಡಿದ್ದರೆ ಶುಭಯೋಗ ಬರಲಿದೆ ಸಂತಾನಯೋಗ ಕೂಡಿಬರಲಿದೆ. ಭೂಮಿ ಮತ್ತು ಇತರ ಆಸ್ತಿ ಖರೀದಿ ಮಾಡುವ ಯೋಗ ನಿಮಗೆ ಇದೆ ಸ್ವಂತ ವ್ಯವಹಾರ ಮತ್ತು ವ್ಯಾಪಾರದಲ್ಲಿ ಉತ್ತಮ ಲಾಭ ದೊರೆಯುತ್ತದೆ. ಆದರೆ ಗುರು ಸ್ವಲ್ಪ ನೀಚ ಸ್ಥಾನದಲ್ಲಿದ್ದಾನೆ ತೊಂದರೆಯೇನಿಲ್ಲ ಯಾರಾದರೂ ಗುರುಗಳ ಆಶೀರ್ವಾದವನ್ನು ಪಡೆಯಿರಿ. ಗಣೇಶನ ಅನುಷ್ಠಾನ ಮಾಡಿ ಇನ್ನು ನೀವು ಮನೆಯಲ್ಲಿ ಸತ್ಯನಾರಾಯಣ ವ್ರತವನ್ನು ಮಾಡಬಾರದು ದೇವಸ್ಥಾನದಲ್ಲಿ ಸತ್ಯನಾರಾಯಣ ಸ್ವಾಮಿ ವ್ರತ ಮಾಡುತ್ತಿದ್ದರೆ ಅಲ್ಲಿ ನೀವು ಪಾಲ್ಗೊಳ್ಳಬಹುದಾಗಿದೆ.

By admin

Leave a Reply

Your email address will not be published. Required fields are marked *