ತಿನ್ನಲು ಊಟ ಇಲ್ಲದೆ ಸಾಯಲು ಹೋಗಿದ್ದ ಸಾಧುಕೋಕಿಲ ಜೀವನದ ರೋಚಕ ನೈಜ ಕಣ್ಣೀರಿನ ಕಥೆ ಇದು... - Karnataka's Best News Portal

ಇವರನ್ನು ನೋಡಿ ಕರ್ನಾಟಕದಲ್ಲಿ ನಗದೆ ಇರುವ ಜನರಿಲ್ಲ ನಟ, ನಿರ್ದೇಶಕ, ಸಂಗೀತ ನಿರ್ದೇಶಕ, ನಿರ್ಮಾಪಕ ಭಾರತದಲ್ಲಿ ಅತಿ ವೇಗವಾಗಿ ಕೀಬೋರ್ಡ್ ಅನ್ನು ನುಡಿಸುವವರಲ್ಲಿ ಇವರು ಕೂಡ ಒಬ್ಬರು. ಆದರೆ ತಿನ್ನಲು ಆಹಾರವಿಲ್ಲದೆ ತಿಂಗಳು ಗಟ್ಟಲೆ ಮಾವಿನ ಹಣ್ಣು ತಿಂದು ಅಳಸಿದ ಅನ್ನ ತಿಂದು ಹೊಟ್ಟೆ ತುಂಬಿಸಿ ಕೊಳ್ಳುತ್ತಿದ್ದರು. ಅಂಗಡಿ ಮತ್ತು ಆರ್ಕೆಸ್ಟ್ರಾದಲ್ಲಿ ಕೆಲಸ ಮಾಡುವಾಗ ಅವಮಾನ ತಾಳಲಾರದೆ ಸಾಯಲು ಹೊರಟಿದ್ದರು ಯಾವುದೇ ಗಾಡ್ ಫಾದರ್ ಇಲ್ಲದೇ ಕೇವಲ ತಮ್ಮ ಸ್ವಂತ ಪರಿಶ್ರಮದಿಂದ ಇಡೀ ಕರ್ನಾಟಕದ ಜನತೆಯ ನಾಯಕರಾಗಿದ್ದಾರೆ. ಸಾದು ಅವರ ಮೊದಲ ಹೆಸರು ಸಹಾಸ ಶೀಲನ್ ರಾಜ್ ಅಂತ 24/03/1866 ರಲ್ಲಿ ಲತೇಶ್ ಮತ್ತು ಮಂಗಳ ದಂಪತಿಗಳ ಮಗನಾಗಿ ಕ್ರಿಶ್ಚಿಯನ್ ಕುಟುಂಬದಲ್ಲಿ ಜನಿಸಿದರು. ಇವರಿಗೆ ಲಯನ್ ಎಂಬ ಅಣ್ಣ ಮತ್ತ ಉಷ ಎಂಬ ತಂಗಿ ಇದ್ದಾರೆ ಸಂಗೀತಗಾರರ ಕುಟುಂಬದಲ್ಲಿ ಜನಿಸುತ್ತಾರೆ. ಈ ಕುಟುಂಬದಲ್ಲಿ ಹುಟ್ಟಿದ ಸಾಧು ಕೋಕಿಲ ಅವರಿಗೆ ಒಂದು ಹೊತ್ತಿನ ಊಟಕ್ಕೂ ಕಷ್ಟ ಪಡುವ ಪರಿಸ್ಥಿತಿ ಇತ್ತು.

ಸಾದು ಚಿಕ್ಕ ವಯಸ್ಸಿನವರು ಆಗಿರುವಾಗ ಅವರನ್ನು ಪಕ್ಕದ ಮನೆಯಲ್ಲಿ ಬಿಟ್ಟು ಅವರ ತಂದೆ-ತಾಯಿ ಮದುವೆ ಸಮಾರಂಭಗಳಿಗೆ ಹಾಡು ಹೇಳಲು ಹೋಗುತ್ತಿದ್ದರು. ಸಾಧು ಕೋಕಿಲಾ ಅವರು ಸೆಂಟ್ ಜೋಸೆಫ್ ಶಾಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಮಾಡಿದರು ಎಂಟನೇ ತರಗತಿಯಲ್ಲಿ ಇರುವಾಗ ಅಂಗಡಿಗೆ ಕೆಲಸಕ್ಕೆ ಸೇರಿಕೊಳ್ಳುತ್ತಾರೆ. ಅಲ್ಲಿ ವಾದ್ಯಗಳನ್ನು ವರೆಸಿಕೊಂಡು ಕೆಲಸವನ್ನು ಮಾಡುತ್ತಾರೆ ಆ ಅಂಗಡಿಯಲ್ಲಿ ಕೆಲಸ ಮಾಡುವಾಗ ವಾದ್ಯಗಳ ಕಡೆ ಅವರ ಮನ ಸೆಳೆಯುತ್ತದೆ. ಅವರಿಗೆ ಸಂಗೀತದ ಬಗ್ಗೆ ಆಸಕ್ತಿ ಮೂಡುತ್ತದೆ ಅನಂತರ ವಿ. ಮನೋಹರ್ ಅವರ ಬಳಿ ಕೆಲಸ ಸೇರಿಕೊಳ್ಳುತ್ತಾರೆ. ದಿನಕ್ಕೆ 10 ರೂಪಾಯಿಗಳ ಸಂಬಳವನ್ನು ನೀಡುತ್ತಾರೆ ಆದರೆ ಆ ಆರ್ಕೆಸ್ಟ್ರಾದಲ್ಲಿ ವಿ ಮನೋಹರ್ ಅವರು ಒಂದು ದಿನ ಅವಮಾನ ಮಾಡುತ್ತಾರೆ ಅದನ್ನು ಸಾದು ಸಹಿಸಿ ಕೊಳ್ಳುವುದಿಲ್ಲ ಅಲ್ಲಿಂದ ಹೊರ ಬರುತ್ತಾರೆ. ಅಲ್ಲಿಂದ ಸಾಯಲು ಅಲಸೂರು ಕೆರೆಯ ಬಳಿ ಬರುತ್ತಾರೆ ಆದರೆ ಆ ದಾರಿಯಲ್ಲಿ ಇಂಗ್ಲಿಷ್ ಸಿನಿಮಾದ ಪೋಸ್ಟರ್ ನೋಡುತ್ತಾರೆ ಸಾಯಲು ಮುಂಚೆ ಒಂದು ಸಿನಿಮಾ ನೋಡಿ ಸಾಯೋಣ ಅಂತ ಯೋಚಿಸಿ ಸಿನಿಮಾ ನೋಡುತ್ತಾರೆ.

By admin

Leave a Reply

Your email address will not be published. Required fields are marked *