ಕನ್ಯಾರಾಶಿ ಅವರಿಗೆ 2021 ಜನವರಿ ತಿಂಗಳು ಹೇಗಿರುತ್ತದೆ ಗೊತ್ತಾ..? - Karnataka's Best News Portal

ಜನವರಿಯಲ್ಲಿ ಬಹಳಷ್ಟು ವಿಶೇಷವಾದಂತಹ ಘಟನೆಗಳು ನಡೆಯುವ ಸಾಧ್ಯತೆಗಳು ಇದೆ ಅತ್ಯುತ್ತಮವಾದ ದೆಶೆಗಳು ಇದೆ ಆದರೆ ಕೆಲವೊಂದಷ್ಟು ಎಚ್ಚರಿಕೆಯನ್ನು ನೀವು ತೆಗೆದುಕೊಳ್ಳಬೇಕು. ಏಕೆಂದರೆ ಒಳ್ಳೆಯದು ಯಾವ ರೀತಿಯಲ್ಲಿ ಇರುತ್ತದೆ ಅದೇ ರೀತಿಯಲ್ಲಿ ಕೆಟ್ಟದ್ದು ಕೂಡ ಕೆಲವೊಮ್ಮೆ ಸಂಭವಿಸುತ್ತದೆ ಹಾಗಾಗಿ ಎಚ್ಚರಿಕೆ ವಹಿಸಿ. ಇನ್ನೂ ಗ್ರಹಗಳ ಸ್ಥಿತಿಗತಿಗಳ ಬಗ್ಗೆ ನೋಡುವುದಾದರೆ ಜನವರಿ 3ನೇ ತಾರೀಕು ಧನುರ್ ರಾಶಿಗೆ ಶುಕ್ರ ಬರುತ್ತಾರೆ. ನಿಮ್ಮ ರಾಶ್ಯಧಿಪತಿ ಆದಂತಹ, ಕುಟುಂಬದ ಅಧಿಪತಿ ಆದಂತಹ, ಹಾಗೂ ಭಾಗ್ಯಧಿಪತಿ ಆಗಿರುವಂತಹ ಶುಕ್ರ ಧನುರ್ ರಾಶಿಗೆ ಜನವರಿ 3ನೇ ತಾರೀಕು ಬರುತ್ತಾರೆ. ಜನವರಿ 4ನೇ ತಾರೀಕು ಮಕರ ರಾಶಿಗೆ ನಿಮ್ಮ ರಾಶ್ಯಾಧಿಪತಿ ಬುಧ ಪಂಚಮಕ್ಕೆ ಹೋಗುತ್ತಾನೆ. ಜನವರಿ 14 ಮಕರ ಸಂಕ್ರಾಂತಿಯಂದು ನಿಮ್ಮ ವ್ಯಯಾಧಿಪತಿ ಆದಂತಹ ರವಿ ಪಂಚಮಕ್ಕೆ ಬರುತ್ತಾರೆ.

ಜನವರಿ 25 ರಂದು ಕುಂಭರಾಶಿಗೆ ನಿಮ್ಮ ರಾಶ್ಯಾಧಿಪತಿ ಬುಧ ಹೋಗುತ್ತಾನೆ ಜನವರಿ 27 ರಂದು ಮಕರ ರಾಶಿಗೆ ಶುಕ್ರನ ಎಂಟ್ರಿ ಆಗುತ್ತದೆ ಇದಿಷ್ಟು ಗ್ರಹಗಳ ಸಂಚಾರ. ಜನವರಿ ತಿಂಗಳಲ್ಲಿ ಎರಡು ಭಾಗವನ್ನಾಗಿ ಮಾಡಿ ನೋಡಿದಾಗ ಜನವರಿ 1 ರಿಂದ ಜನವರಿ 13 ನೇ ತಾರೀಕಿನ ತನಕ ಒಂದು ಭಾಗ ಹಾಗೂ ಎರಡನೇ ಭಾಗ ಜನವರಿ 14 ರಿಂದ ಜನವರಿ 31 ನೇ ತಾರೀಕು ಹೀಗೆ ಎರಡು ಭಾಗಗಳನ್ನು ಮಾಡಿ ನೋಡಿದಾಗ. ಮೊದಲನೆ ಭಾಗ ಅತ್ಯುತ್ತಮವಾಗಿ ಇರುತ್ತದೆ ಆದರೆ ಎರಡನೇ ಭಾಗದಲ್ಲಿ ಅಷ್ಟಾಗಿ ಉತ್ತಮವಾಗಿ ಕಂಡು ಬರುವುದಿಲ್ಲ. ಏಕೆಂದರೆ ಚತುರ್ಗಹ ಯೋಗ ಅದರಲ್ಲೂ ಬಹಳ ಮುಖ್ಯವಾಗಿ ಜನವರಿ 14 ನೇ ತಾರೀಖಿನಂದು ನಿಮಗೆ ಚತುರ್ ಗ್ರಹ ಯೋಗ ಆರಂಭವಾಗುತ್ತದೆ. ಅಂದರೆ ನಾಲ್ಕು ಗ್ರಹಗಳು ನಿಮ್ಮ ಪಂಚಮದಲ್ಲಿ ಇರುತ್ತದೆ ಆದರೆ ಅಲ್ಲಿ ವೈರಿ ಗ್ರಹಗಳ ಸಂಯೋಗ ಆಗುತ್ತದೆ ವ್ಯಯಧಿಪತಿ ರವಿ ಪಂಚಮಕ್ಕೆ ಬರುತ್ತದೆ.

By admin

Leave a Reply

Your email address will not be published. Required fields are marked *