ಕರ್ನಾಟಕದ ಅಚ್ಚುಮೆಚ್ಚಿನ (ಸ ರಿ ಗ ಮ ಪ )ಹನುಮಂತನ ಸರಳ ಮದುವೆ ಹೇಗಾಯ್ತು..!! ಹುಡುಗಿ ಹೇಗಿದ್ದಾಳೆ ಗೊತ್ತಾ.? - Karnataka's Best News Portal

ಒಂದು ಸಣ್ಣ ಹಳ್ಳಿಯಿಂದ ಬಂದು ಕೇವಲ ತನ್ನ ಹಾಡಿನಿಂದಲೇ ಇಡೀ ಕರ್ನಾಟಕದ ಮನೆಮಾತಾದ ಗಾಯಕ ಅಂದರೆ ಅದು ಸರಿಗಮಪದ ಹನುಮಂತ. ಕಳೆದ ಮೂರು ವರ್ಷದ ಹಿಂದೆ ಹನುಮಂತ ಕುರಿತು ಸುದ್ದಿ ಆತ ನಿಂತರು ಸುದ್ದಿ ಕುಂತರು ಸುದ್ದಿ ಅಷ್ಟು ಜನರಿಗೆ ಮೋಡಿ ಮಾಡಿದ್ದ ಅಂದರೆ ತಪ್ಪಾಗಲಾರದು. ಅಂತಹ ಹನುಮಂತ ಕಳೆದ ಕೆಲವು ತಿಂಗಳಿನಿಂದ ಏನು ಮಾಡುತ್ತಿದ್ದಾರೆ ಎಲ್ಲೂ ಕೂಡ ಕಾಣಿಸಿಕೊಳ್ಳುತ್ತಿಲ್ಲ ಅಂತ ಅವರ ಅಭಿಮಾನಿಗಳು ಹೇಳುತ್ತಿದ್ದರು. ಆದರೆ ಇದೀಗ ಮತ್ತೆ ಸಿಹಿ ಸುದ್ದಿ ಕೊಡುವುದರ ಮೂಲಕ ಮತ್ತೆ ಕರ್ನಾಟಕದ ಅಭಿಮಾನಿಗಳಿಗೆ ನೆನಪು ಮಾಡಿಕೊಟ್ಟಿದ್ದಾರೆ ಅದು ಕೂಡ ಭರ್ಜರಿ ಸಿಹಿಸುದ್ದಿ ಅಂತನೇ ಹೇಳಬಹುದು. ಹೌದು ಅದೇನೆಂದರೆ ಸರಿಗಮಪದ ಹನುಮಂತ ಮದುವೆಯಾಗುತ್ತಿದ್ದಾರೆ. ಕುರಿ ಕಾಯುತ್ತಿದ್ದ ಹನುಮಂತ ಸರಿಗಮಪ ಬಂದು ಒಳ್ಳೆಯ ಹೆಸರು ಮಾಡುವುದರ ಜೊತೆಗೆ ಒಳ್ಳೆಯ ಮನೆಯನ್ನು ಕೂಡ ಪಡೆದುಕೊಂಡಿದ್ದರು.

ಈಗಾಗಲೇ ಹನುಮಂತ 3 ಸಿನಿಮ ಹಾಡುಗಳನ್ನು ಹಾಡಿದ್ದಾರೆ ಆದರೆ ಹಾಡುಗಳು ಇನ್ನೂ ಬಿಡುಗಡೆಯಾಗಿಲ್ಲ. ಅದರ ಜೊತೆಗೆ ಇದೀಗ ಹನುಮಂತನಿಗೆ ಮದುವೆ ಮಾಡಲು ಕುಟುಂಬ ಅವರ ಕುಟುಂಬದಲ್ಲಿ ನಿರ್ಧರಿಸಿದ್ದಾರೆ ಏಕೆಂದರೆ ಲಂಬಾಣಿ ಕುಟುಂಬದಲ್ಲಿ ಹುಡುಗನಿಗೆ 21 ವರ್ಷ ಆಗುವಷ್ಟರಲ್ಲಿ ಮದುವೆ ಮಾಡುತ್ತಾರಂತೆ. ಹನುಮಂತನ ಈಗ ಮದುವೆ ವಯಸ್ಸಿಗೆ ಬಂದಿದ್ದು ಈಗಾಗಲೇ ತಮ್ಮ ಮನೆಯವರು ನೋಡಿದ ಹುಡುಗಿಯನ್ನು ಮದುವೆ ಮಾಡಲು ನಿರ್ಧರಿಸಿದ್ದಾರೆ ಎಂದು ಹೇಳಲಾಗುತ್ತದೆ. ಹುಡುಗಿ ಕೂಡ ಹಾವೇರಿ ಜಿಲ್ಲೆಗೆ ಸೇರಿದವರು ಆಗಿದ್ದು ಪಿಯುಸಿ ಓದಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಆದರೆ ಹುಡುಗಿ ಏನು ಮಾಡುತ್ತಿದ್ದಾರೆ ಎಂಬುದರ ಬಗ್ಗೆ ನಿಖರವಾದ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ ಆದರೆ ಈ ವರ್ಷ ಹನುಮಂತ ಮದುವೆಯಾಗುವ ಖಚಿತ ಎಂದು ತಿಳಿದು ಬಂದಿದೆ.

By admin

Leave a Reply

Your email address will not be published. Required fields are marked *