ದೇಹದ ತೂಕವನ್ನು ಬೊಜ್ಜನ್ನು ಕಡಿಮೆ ಮಾಡುವಂತಹ ಅದ್ಭುತವಾದಂತಹ ಮನೆಮದ್ದು ನಿಮಗಾಗಿ ... - Karnataka's Best News Portal

ಇತ್ತೀಚಿನ ದಿನಗಳಲ್ಲಿ ಎಲ್ಲರಲ್ಲೂ ಕೂಡ ದೇಹದಲ್ಲಿ ಹೆಚ್ಚಾಗಿ ಕೊಬ್ಬು ಸಂಗ್ರಹವಾಗುತ್ತದೆ ಇದರಿಂದ ದೇಹದ ತೂಕ ಕೂಡ ಹೆಚ್ಚಾಗುತ್ತದೆ. ಹಾಗಾಗಿ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬೇಕು ಎಂದು ಹಲವಾರು ರೀತಿಯಾದಂತಹ ಪ್ರಯತ್ನಗಳನ್ನು ಪಡುತ್ತಿದ್ದಾರೆ ಅದು ವಿಫಲವಾಗುತ್ತದೆ. ಹಾಗಾಗಿ ನಾವು ಇಂದು ತಿಳಿಸುವ ಈ ಒಂದು ವಿಧಾನವನ್ನು ನೀವು ಅನುಸರಣೆ ಮಾಡಿದರೆ ಖಂಡಿತವಾಗಿಯೂ ನಿಮ್ಮ ದೇಹದಲ್ಲಿ ಇರುವಂತಹ ಕೊಬ್ಬು ಕಡಿಮೆಯಾಗುತ್ತದೆ ಜೊತೆಗೆ ಕೆಲವೊಂದಷ್ಟು ಆರೋಗ್ಯಕರ ಪ್ರಯೋಜನಗಳು ಆಗುತ್ತದೆ. ಮೊದಲಿಗೆ ನೀವು ರಾತ್ರಿಯ ಸಮಯ ಒಂದು ಗ್ಲಾಸ್ ನೀರಿಗೆ ಒಂದು ಟೇಬಲ್ ಸ್ಪೂನ್ ಸಬ್ಜಾ ಬೀಜವನ್ನು ಹಾಕಿ ರಾತ್ರಿ ಪೂರ್ತಿ ಅದನ್ನು ನೆನೆಯಲು ಬಿಡಿ ನಂತರ ಮುಂಜಾನೆ ಎದ್ದು ಈ ಮಿಶ್ರಣಕ್ಕೆ ಒಂದು ಟೇಬಲ್ ಸ್ಪೂನ್ ನಿಂಬೆ ರಸ ಹಾಗೂ ಒಂದು ಟೇಬಲ್ ಸ್ಪೂನ್ ಜೇನು ತುಪ್ಪವನ್ನು ಹಾಕಿ ಮಿಕ್ಸ್ ಮಾಡಿ ಸೇವನೆ ಮಾಡಿ.

ಹೀಗೆ ಮಾಡುವುದರಿಂದ ದೇಹದಲ್ಲಿ ಇರುವಂತಹ ಡಿ ಟಾಕ್ಸಿನ್ ಆಕ್ಟಿವ್ ಆಗುತ್ತದೆ, ಜೊತೆಗೆ ದೇಹದಲ್ಲಿರುವ ವಿಷಕಾರಿ ಪದಾರ್ಥಗಳು ಆಚೆ ಬರುತ್ತದೆ, ನಿಮಗೆ ಇದನ್ನು ಸೇವಿಸುವುದರಿಂದ ಹೊಟ್ಟೆ ಹಸಿವು ಆಗುವುದಿಲ್ಲ. ಜೀರ್ಣಶಕ್ತಿಗೆ ಸಂಬಂಧಿಸಿದಂತಹ ಹಲವಾರು ರೀತಿಯ ಸಮಸ್ಯೆಯನ್ನು ನಿವಾರಿಸುತ್ತದೆ, ಜೀರ್ಣ ಕ್ರಿಯೆಯನ್ನು ಹೆಚ್ಚಿಸುತ್ತದೆ. ಇದನ್ನು ಪ್ರತಿದಿನ ಸೇವಿಸುವುದರಿಂದ ನೀವು ತಿಂದ ಆಹಾರ ಚೆನ್ನಾಗಿ ಜೀರ್ಣ ವಾಗುತ್ತದೆ ಸಬ್ಜಾದಲ್ಲಿ ಫೈಬರ್ ಅಂಶ ಹೆಚ್ಚಾಗಿರುವುದರಿಂದ ಮಲಬದ್ಧತೆ ಸಮಸ್ಯೆ ನಿವಾರಣೆಯಾಗುತ್ತದೆ. ಅಷ್ಟೇ ಅಲ್ಲದೆ ತಲೆನೋವು ಕೂಡ ಕಡಿಮೆಯಾಗುತ್ತದೆ ಮುಖ್ಯವಾಗಿ ರಕ್ತ ಸುದ್ಧಿಕರಣ ಮಾಡಲು ತುಂಬಾ ಉಪಯುಕ್ತ ನಿಮ್ಮ ರಕ್ತದೊತ್ತಡ ನಿಯಂತ್ರಣ ಮಾಡುತ್ತದೆ.

By admin

Leave a Reply

Your email address will not be published. Required fields are marked *