ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್ ಅವರ ಮಗುವಿಗೆ ಈಗಾಗಲೇ ಎರಡು ತಿಂಗಳು ತುಂಬಿದೆ ಮೇಘನ ರಾಜ್ ರವರು ತನ್ನ ತಾಯಿಯ ಮನೆಯಲ್ಲಿಯೇ ಮಗುವಿನ ಆರೈಕೆಯನ್ನು ಮಾಡುತ್ತಿದ್ದಾರೆ. ಧ್ರುವ ಸರ್ಜಾ ಅಣ್ಣನ ಮಗು ಹಾಗೂ ಮೇಘನ ರಾಜ್ ರವರನ್ನು ಬಹಳ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರೆ. ಇದೀಗ ಪೊಗರು ಚಿತ್ರದ ಪ್ರಚಾರಕ್ಕೆ ಹೈದರಾಬಾದ್ ಹೋಗಿದ್ದು ಧ್ರುವ ಸರ್ಜಾ ಅವರ ಅಣ್ಣನ ಮಗುವಿಗೆ ಹೊಸ ವರ್ಷಕ್ಕೆ ತಂದಿರುವ ದುಬಾರಿ ಗಿಫ್ಟ್ ಏನು ಗೊತ್ತಾ. ಮೇಘನಾ ರಾಜ್ ರವರು ತಮ್ಮ ಮಗುವಿನ ಯಾವುದೇ ಫೋಟೋವನ್ನು ಇದುವರೆಗೂ ಕೂಡ ಹಂಚಿಕೊಂಡಿಲ್ಲ ಆದರೆ ಕ್ರಿಸ್ ಮಸ್ ಹಬ್ಬದ ದಿನ ಮಗುವಿನ ಬೆರಳು ಹಿಡಿದುಕೊಂಡಿರುವ ಫೋಟೋವನ್ನು ಕ್ಲಿಕ್ಕಿಸಿ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದರು.

ಧ್ರುವ ಸರ್ಜಾ ಅಣ್ಣನ ಮಗುವಿಗೆ 10 ಲಕ್ಷದ ಬೆಲೆ ಬಾಳುವ ತೊಟ್ಟಿಲು ಖರೀದಿ ಮಾಡಿರುವುದು ಎಲ್ಲರಿಗೂ ಗೊತ್ತೇ ಇದೆ. ಆದರೆ ಇದೀಗ ಪೊಗರು ಚಿತ್ರದ ಪ್ರಚಾರಕ್ಕೆಂದು ಹೈದರಾಬಾದ್ಗೆ ಹೋದ ಧ್ರುವ ಸರ್ಜಾ ಅಣ್ಣನ ಮಗುವಿಗಾಗಿ ತಂದಿರುವ ಗೀಫ್ಟ್ ತುಂಬಾನೇ ಖುಷಿ ತಂದಿದೆ. ಮುತ್ತಿನ ನಗರಿ ಎಂಬ ಹೆಸರನ್ನು ಪಡೆದುಕೊಂಡಿರುವ ಹೈದರಾಬಾದ್ ಗೆ ಯಾರೇ ಹೋದರು ಮುತ್ತಿನಿಂದ ತಯಾರಿಸಿದ ವಸ್ತುಗಳನ್ನು ತರುವ ಸಂಪ್ರದಾಯವಿದೆ. ಅದೇ ರೀತಿ ದ್ರುವ ಸರ್ಜಾ ಅವರು ಕೂಡ ಅಣ್ಣನ ಮಗುವಿಗೆ ಒಂದು ಬೆಲೆ ಬಾಳುವ ಮುತ್ತಿನ ಉಂಗುರವನ್ನು ತೆಗೆದುಕೊಂಡು ಹೊಸ ವರ್ಷದ ಉಡುಗೊರೆಯಾಗಿ ನೀಡಿದ್ದಾರೆ ಅಂತ ಹೇಳಲಾಗುತ್ತಿದೆ.

By admin

Leave a Reply

Your email address will not be published. Required fields are marked *